Breaking News

ಐವರ್ನಾಡು ಸಹಕಾರಿ ಸಂಘದ ಶತಮಾನೋತ್ಸವದ ಸಮಾರೋಪ ಸಮಾರಂಭ

Advt_Headding_Middle
Advt_Headding_Middle

ಐವರ್ನಾಡು ಸಹಕಾರಿ ಸಂಘದ ಶತಮಾನೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭವು ಜ.24  ರಂದು ಸಂಜೆ ನಡೆಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಉಪಾಧ್ಯಕ್ಷ ವಿಕ್ರಂ ಪೈ ವಹಿಸಿ ಮಾತನಾಡಿ ಸಂಘವು 100 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿ ಶತಮಾನೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.


ವೇದಿಕೆಯಲ್ಲಿ ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಬಾಲಕೃಷ್ಣ ಕೀಲಾಡಿ,ಐವರ್ನಾಡು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಪಿ.ಬಾಲಚಂದ್ರ ಪಲ್ಲತ್ತಡ್ಕ, ರಬ್ಬರು ಬೆಳೆಗಾರರ ಸಂಘದ ಅಧ್ಯಕ್ಷ ಎಂ.ಶ್ರೀನಿವಾಸ ಗೌಡ, ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶಿವಪ್ಪ ಗೌಡ ನೆಕ್ಕರೆಕಜೆಯವರು ಉಪಸ್ಥಿತರಿದ್ದು ಮಾತನಾಡಿದರು.

ಸಂಘದ ನಿರ್ದೇಶಕರುಗಳಾದ ಎ.ಕೆ.ಸತೀಶ,ಎಂ.ಸಿ.ಕುಸುಮಾಧರ,ರವಿನಾಥ ಎಂ.ಎಸ್.ಕಿಶನ್ಕುಮಾರ್ ಜೆ,ಪುರಂದರ ಎಸ್.ಬಿ.ರೇವತಿ, ದೇವಕಿ ಸಿ.ಜಿ, ಅನಂತಕುಮಾರ್ ಕೆ, ಉಪಸ್ಥಿತರಿದ್ದರು.
ಸಂಘದ ವತಿಯಿಂದ ಏರ್ಪಡಿಸಿದ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಐವರ್ನಾಡು ಗ್ರಾಮಸ್ಥರಲ್ಲಿ ರಾಜ್ಯ ಮಟ್ಟವನ್ನು ಪ್ರತಿನಿಧಿಸಿದ ಕ್ರೀಡಾಪಟು,ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿಯಲ್ಲಿ ೨೦೧೮ ವರೆಗೆ ಶೇ ೯೦ ಮತ್ತು ೯೦ ಕ್ಕಿಂತ ಹೆಚ್ಚು ಅಂಕಗಳಿಸಿದವರನ್ನು ಮತ್ತು ಸಂಘದ ನಿರ್ದೇಶಕರುಗಳನ್ನು,ಸಿಬ್ಬಂದಿ ವರ್ಗದವರನ್ನು ಸನ್ಮಾನಿಸಲಾಯಿತು.


ಸಂಘದ ನಿರ್ದೇಶಕಿ ಶ್ರೀಮತಿ ದೇವಕಿ ಸ.ಜಿ.ಸ್ವಾಗತಿಸಿ,ಮಾಧವ ಭಟ್ ಶೃಂಗೇರಿ ಕಾರ್ಯಕ್ರಮ ನಿರೂಪಿಸಿ,ಕಿಶನ್ ಕುಮಾರ್ ಜಬಳೆ ವಂದಿಸಿದರು.
ನಂತರ ರಾಥ್ರಿ ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಗನವಾಡಿ ಮತ್ತು ಶಾಲಾ ಮಕ್ಕಳಿಂದ ಮತ್ತು ನವೋದಯ ಸ್ವ-ಸಹಾಯ ಗುಂಪಿನವರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ರಾತ್ರಿ ೮.೩೦ ರಿಂದ ಪ್ರಮೋದ್ ರೈ ಬೆಳ್ಳಾರೆ ಇವರ ಸಾರಥ್ಯದಲ್ಲಿ ಝೇಂಕಾರ ನಾಟ್ಯದೊಡಲು ನಗೆಕಡಲು ಕಾರ್ಯಕ್ರಮ ಅದ್ಭುತವಾಗಿ ಮೂಡಿ ಬಂತು.ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವೇದಿಕೆಯನ್ನು ವಿಶೇಷವಾಗಿ ಆಕರ್ಷಣೀಯವಾದಂತದ ಲೈಟಿಂಗ್ಸ್ ವ್ಯವಸ್ಥೆ ಅಳವಡಿಸಲಾಗಿತ್ತು.
ಸಾವಿರಾರು ಜನರು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.