ದಿವ್ಯಕುಮಾರಿ ಬಾಳುಗೋಡುರವರಿಗೆ ಜಿಲ್ಲಾ ಅಥ್ಲೆಟಿಕ್ಸ್ ಮತ್ತು ಮ್ಯಾರಥಾನ್ ಪ್ರಶಸ್ತಿ

Advt_Headding_Middle
Advt_Headding_Middle

ಎಲಿಮಲೆ ಜ್ಞಾನದೀಪ ಶಿಕ್ಷಣ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಶ್ರೀಮತಿ ದಿವ್ಯಕುಮಾರಿ ಬಾಳುಗೋಡುರವರಿಗೆ ರಾಜ್ಯಮಟ್ಟದ ಹಾಫ್ ಮ್ಯಾರಥಾನ್ ಸ್ಪರ್ಧೆ ಹಾಗೂ ಜಿಲ್ಲಾ ಮಟ್ಟದ ದೈಹಿಕ ಶಿಕ್ಷಣ ಶಿಕ್ಷಕರ ಕ್ರೀಡಾಕೂಟದಲ್ಲಿ ಪ್ರಶಸ್ತಿ ಲಭಿಸಿದೆ.

ಜ. 19 ರಂದು ಸುಳ್ಯದಲ್ಲಿ ನಡೆದ ರಾಜ್ಯ ಮಟ್ಟದ ಹಾಫ್ ಮ್ಯಾರಥಾನ್ ಸ್ಪರ್ಧೆಯ ಮಹಿಳೆಯರ ಮಾಸ್ಟರ‍್ಸ್ ವಿಭಾಗದಲ್ಲಿ ದಿವ್ಯಕುಮಾರಿಯವರು ತೃತೀಯ ಸ್ಥಾನ ಪಡೆದರು.

ಜ. 24 ರಂದು ಪುತ್ತೂರಿನ ಕೊಂಬೆಟ್ಟು ಸ.ಪ.ಪೂ.ಕಾಲೇಜು ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ ದೈಹಿ ಶಿಕ್ಷಣ ಶಿಕ್ಷಕರ ಕ್ರೀಡಾಕೂಟದ 6೦೦ ಮೀ. ಓಟದಲ್ಲಿ ಪ್ರಥಮ ಹಾಗೂ 4೦೦ ಮೀ. ಓಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
2011 -12 ನೇ ಸಾಲಿನಲ್ಲಿ ನಡೆದ ಮಾಸ್ಟರ್ ಅಥ್ಲೆಟಿಕ್ಸ್‌ನಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ, ಚಿನ್ನದ ಪದಕ ಗಳಿಸಿದ್ದ ಇವರು ತಾವೂ ಕ್ರೀಡಾಕೂಟಗಳಲ್ಲಿ ಪ್ರಶಸ್ತಿ ಗಳಿಸಿದ್ದಲ್ಲದೆ, ವಿದ್ಯಾರ್ಥಿಗಳಿಗೂ ಶಾಲಾ ಅವಧಿ, ರಜಾ ದಿನಗಳಲ್ಲೂ ತರಬೇತಿ ಶಿಬಿರಗಳನ್ನು ನಡೆಸಿ ಅವರನ್ನು ಕ್ರೀಡಾಪಟುಗಳನ್ನಾಗಿ ರೂಪಿಸಿದ್ದಾರೆ. ಇವರು ತರಬೇತಿ ನೀಡಿದ ಶಾಲೆಯ ಕಬಡ್ಡಿ ತಂಡ ಕಳೆದ 4  ವರ್ಷಗಳಿಂದ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡುತ್ತಿದೆ. ದಿವ್ಯಕುಮಾರಿಯವರು 2014-15 ರಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಗುಜರಾತಿನಲ್ಲಿ ನಡೆದ ಪ್ರೌಢಶಾಲಾ ಬಾಲಕಿಯರ ಕರ್ನಾಟಕ ರಾಜ್ಯ ಕಬಡ್ಡಿ ತಂಡದ ಟೀಮ್ ಮೆನೇಜರ್ ಆಗಿದ್ದರು. ಇವರು ಎಲಿಮಲೆ ಜ್ಞಾನದೀಪ ವಿದ್ಯಾಸಂಸ್ಥೆಯ ಮುಖ್ಯಶಿಕ್ಷಕ ಗದಾಧರ ಬಾಳುಗೋಡುರವರ ಪತ್ನಿ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.