ಬಾಳಿಲ : ವಿದ್ಯಾಬೋಧಿನೀ ಪ್ರೌಢಶಾಲೆಯಲ್ಲಿ ಗಣರಾಜ್ಯೋತ್ಸವ, 2019 ಹಾಗೂ ವಿದ್ಯಾರ್ಥಿಗಳ ಸಂಸತ್ತು ಅಧಿವೇಶನ

Advt_Headding_Middle
Advt_Headding_Middle


ವಿದ್ಯಾಬೋಧಿನೀ ಪ್ರೌಢಶಾಲೆ ಬಾಳಿಲ ಇಲ್ಲಿ ಗಣರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು ಬೆಳಿಗ್ಗೆ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶಾಲಾ ಸಂಚಾಲಕರಾರದ ಎನ್ ವೆಂಕಟ್ರಮಣ ಭಟ್ ದ್ವಜಾರೋಣಗೈದು ಮಾತನಾಡಿ, “ನಾವು ಸಮೃದ್ಧ ಭಾರತ ನಿರ್ಮಾಣ ಹಾಗೂ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವಲ್ಲಿ ಭಾಗಿಗಳಾಗೋಣ” ಎಂಬ ಸಂದೇಶವನ್ನು ನೀಡಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಹರಿಪ್ರಸಾದ್ ರೈ ಸ್ವಾಗತಿಸಿದ ಕಾರ್ಯಕ್ರಮಕ್ಕೆ ಮುಖ್ಯೋಪಾಧ್ಯಾಯರಾದ ಎಂ ಎಸ್ ಶಿವರಾಮ ಶಾಸ್ತ್ರಿ ವಂದಿಸಿದರು.


ನಂತರ ವಿದ್ಯಾರ್ಥಿ ಸರಕಾರದ ಸಂಸತ್ತಿನ ಅಧಿವೇಶನ ನಡೆಯಿತು. ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು. ವಿವಿಧ ಬಣ್ಣದ ಉಡುಗೆಗಳನ್ನು ಧರಿಸಿದರು. ಸಂಸತ್ ಅಧಿವೇಶನ ಪ್ರಾರಂಭದಲ್ಲಿ ಸಂಸದೀಯ ಕಾರ್ಯದರ್ಶಿ ನೀರಜ್ ಕೆ ೧೦ಎ ಗತಅಧಿವೇಶನದ ವರದಿ ವಾಚಿಸಿದರು. ನಂತರ ಶಾಲಾ ಮುಖ್ಯಮಂತ್ರಿ ಸುಪ್ರೀತ್ ಕೆ ಎಸ್ ೧೦ಬಿ ಭಾಷಣ ಮಾಡಿದರು. ನಂತರ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ, ಶಾಲಾ ಮಕ್ಕಳ ಸಾಂಸ್ಕೃತಿಕ, ಸಾಹಿತ್ಯಿಕ, ಸಂಸತ್ತು ಮತ್ತು ಕ್ರೀಡಾ ಸಾಧನೆಗಳಿಗೆ ಅಭಿನಂದನಾ ಗೊತ್ತುವಳಿ, ಸಿದ್ದಗಂಗಾ ಮಠದ ದಿ| ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಹಾಗೂ ದೇಶದ ಮಾಜಿ ಸಚಿವರುಗಳ ನಿಧನಕ್ಕೆ ಸಂತಾಪ ಸೂಚಕ ಗೊತ್ತುವಳಿಗಳನ್ನು ಮಂಡಿಸಲಾಯಿತು. ಮುಂದೆ ಸರಕಾರಿ ಹುದ್ದೆಗಳಲ್ಲಿ ಮೀಸಲಾತಿ, ಸರ್ದಾರ್ ಪಟೇಲರ ಏಕತಾ ಪ್ರತಿಮೆ ಮತ್ತು ಭಾರತದಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷಗಳ ಬಗ್ಗೆ ಸದನ ಸದಸ್ಯರಿಂದ ಭಾಷಣ ನಡೆಯಿತು.


ಪ್ರಶ್ನೋತ್ತರ ಅವಧಿಯಲ್ಲಿ ಶಾಲಾ ಸ್ವಚ್ಛತೆ, ಭದ್ರತೆ, ವಿದ್ಯಾರ್ಥಿಗಳ ಆರೋಗ್ಯ ಇವುಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲಾಯಿತು. ಆಡಳಿತ-ಪ್ರತಿಪಕ್ಷದ ಸದಸ್ಯರು ಸಕ್ರೀಯವಾಗಿ ಪಾಲ್ಗೊಂಡರು. ಶೂನ್ಯ ವೇಳೆಯಲ್ಲಿ ಗಮನ ಸೆಳೆವ ಪ್ರಶ್ನೆಗಳು ಮೂಡಿಬಂದವು. ಆರಂಭದಲ್ಲಿ ಎಲ್ಲರನ್ನು ಸ್ವಾಗತಿಸಿದ ಸಭಾಪತಿ ಪೂಜಾ ಎಂ ೧೦ಎ ರವರು ವಂದನಾರ್ಪನೆಗೈದರು. ಹೇಮಂತ್ ಕುಮಾರ್ ಬಿ ಮತ್ತು ದೀಪಕ್ ಎಂ ಡಿ ೯ಎ ಮಾರ್ಷಲ್‌ಗಳಾಗಿದ್ದರು. ಕಾರ್ಯಕ್ರಮವನ್ನು ಸಹಶಿಕ್ಷಕರಾದ ಶ್ರೀಮತಿ ಸಹನಾ ಬಿ.ಬಿ. ಮತ್ತು ರಾಘವೇಂದ್ರ ಕೆ ಇವರು ಸಂಯೋಜಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.