ಜ.29: ಜಾಲ್ಸೂರು ಶ್ರೀ ಗುರುರಾಘವೇಂದ್ರ ಸ್ವಾಮಿ ಭಜನಾ ಮಂದಿರದಲ್ಲಿ 7ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವ, ಪಟ್ಲ ಸತೀಶ್ ಶೆಟ್ಟಿ ಭಾಗವತಿಕೆಯ ವಿರೋಚನ ಕಾಳಗ ಯಕ್ಷಗಾನ

Advt_Headding_Middle
Advt_Headding_Middle

ಜಾಲ್ಸೂರಿನ ಶ್ರೀ ಗುರುರಾಘವೇಂದ್ರ ಸ್ವಾಮಿ ಭಜನಾ ಮಂದಿರದಲ್ಲಿ 7 ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವವು ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಗಳ ಮಾರ್ಗದರ್ಶನದಲ್ಲಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ಜ.29 ರಂದು ಜರುಗಲಿದೆ.


ಬೆಳಿಗ್ಗೆ 9 ರಿಂದ 12  ತೆಂಗಿನ ಕಾಯಿ ಗಣಪತಿಹೋಮ, 1೦ಕ್ಕೆ ನಾಗತಂಬಿಲ, 11ಕ್ಕೆ ಪಾದುಕಾಪೂಜೆ, ಭಜನೆ, ಮಧ್ಯಾಹ್ನ 12.3೦ರಿಂದ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ 5 ರಿಂದ ನಾಗಸಾನಿಧ್ಯದಲ್ಲಿ ಆಶ್ಲೇಷ ಬಲಿ ನಡೆಯಲಿದೆ. ಸಂಜೆ 6 ರಿಂದ ಜಾಲ್ಸೂರಿನ ಕಲಾಕೇಸರಿ ನೃತ್ಯತಂಡದಿಂದ ನೃತ್ಯನಿನಾದ ನಡೆಯಲಿದೆ. ಸಂಜೆ 6.3೦ಕ್ಕೆ ಶ್ರೀ ಗುರುರಾಘವೇಂದ್ರ ಸ್ವಾಮಿಗಳಿಗೆ ಅಲಂಕಾರಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ 8.3೦ಕ್ಕೆ ಮಹಾಪೂಜೆ, ಪ್ರಸಾದ ವಿತರನೆ, ಅನ್ನಸಂತರ್ಪಣೆ ಜರುಗಲಿದೆ.
ರಾತ್ರಿ 7 ರಿಂದ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಜನಾ ಮಂದಿರದ ಅಧ್ಯಕ್ಷ ಎಸ್.ಬಾಬು ಪಾಟಾಳಿ ಅರಿಯಡ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಶ್ರೀ ಕುದ್ರೋಳಿ ಶ್ರೀ ನಾರಾಯಣಗುರು ಪ.ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಕೇಶವ ಬಂಗೇರ ಗೇರುಕಟ್ಟೆ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಕುಕ್ಕಂದೂರು ಶ್ರೀ ಕಿನ್ನಿಮಾಣಿ-ಪೂಮಾಣಿ ದೈವಸ್ಥಾನದ ಪ್ರಧಾನ ಅರ್ಚಕರಾಗಿದ್ದು ಇತ್ತೀಚೆಗೆ ವಯೋನಿವೃತ್ತಿ ಹೊಂದಿದ ಕೆ.ನಾರಾಯಣ ರೈ ಕುಕ್ಕಂದೂರು ಹಾಗೂ ಯಕ್ಷ ಪ್ರತಿಭೆ ಮೋಹನ್ ಬೆಳ್ಳಿಪ್ಪಾಡಿ ಅವರನ್ನು ಭಜನಾ ಮಂದಿರದ ಖಜಾಂಜಿ ವಿಷ್ಣುಭಟ್ ಪೆರಂಬರು ಸನ್ಮಾನಿಸಲಿದ್ದಾರೆ. ಈ ಸಂದರ್ಭದಲ್ಲಿ ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗುರುರಾಜ್ ಭಟ್, ಮಂದಿರದ ಅರ್ಚಕ ರಾಮಕೃಷ್ಣ ಭಟ್, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಜಗದೀಶ ಬೇರ್ಪಡ್ಕ ಗೌರವ ಉಪಸ್ಥಿತರಿರಲಿದ್ದಾರೆ.
ರಾತ್ರಿ ೯ರಿಂದ ೧೨ರವರೆಗೆ ಯಕ್ಷಲೋಕದ ಅಗ್ರಮಾನ್ಯ ಕಲಾವಿದರ ಕೂಡುವಿಕೆಯೊಂದಿಗೆ ಮೋಹನ್ ಬೆಳ್ಳಿಪ್ಪಾಡಿ ಸಂಯೋಜನೆಯ, ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಹಾಗೂ ಪ್ರಸಾದ್ ಬಲಿಪ ಭಾಗವತಿಕೆಯ ಯಕ್ಷಗಾನ ಬಯಲಾಟ “ವಿರೋಚನ ಕಾಳಗ” ಪ್ರದರ್ಶನಗೊಳ್ಳಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.