ಅರಂಬೂರಿನಲ್ಲಿ ನಲಿಕೆ ಫ್ರೆಂಡ್ಸ್ ಆಶ್ರಯದಲ್ಲಿ ರಂಜಿಸಿದ ಅದ್ದೂರಿ ಕಬಡ್ಡಿ ಪಂದ್ಯಾಟ

Advt_Headding_Middle
Advt_Headding_Middle

ನಲಿಕೆ ಫ್ರೆಂಡ್ಸ್ ಸುಳ್ಯ ಇದರ ಆಶ್ರಯದಲ್ಲಿ 3 ನೇ ವರ್ಷದ 58 ಕೆ.ಜಿ. ವಿಭಾಗದ ಪುರುಷರ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ ಮತ್ತು ನಲಿಕೆ ಸಮಾಜದ ಬಾಂಧವರ ಕಬಡ್ಡಿ ಮತ್ತು ಮಹಿಳೆಯರ ತ್ರೋಬಾಲ್ ಪಂದ್ಯಾಟ ಹಾಗೂ ನನ್ಮಾನ ಸಮಾರಂಭವು ಜ.26 ರಂದು ಅರಂಬೂರು ಶಾಲಾ ಮೈದಾನದಲ್ಲಿ ಜರಗಿತು. ಪೂ.ಪಂದ್ಯಾಟದ ಉದ್ಘಾಟನೆಯನ್ನು ಕೇಪು ಅಜಿಲ ಕೊಯನಾಡುರವರು ಉದ್ಘಾಟಿಸಿದರು. ಚಿನ್ನಪ್ಪ ಮೂಲ್ಯ ರವರು ಅಧ್ಯಕ್ಷತೆ ವಹಿಸಿದ್ದರು.ಅತಿಥಿಗಳಾಗಿ ಕಾಂತು ಬಾಳಿಲ, ಶ್ರೀಧರ ಅಜಿಲ ಅಡ್ತಲೆ, ಮೋನಪ್ಪ ಅಜಿಲ ಕನಕಮಜಲು ಉಪಸ್ಥಿತರಿದ್ದರು.

ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ.ಜಿ.ಪಂ.ಸದಸ್ಯ, ಕೆ.ಪಿ.ಸಿ.ಸಿ.ಕಾರ್ಯದರ್ಶಿ ಭರತ್ ಮುಂಡೋಡಿ ವಹಿಸಿದ್ದರು. ಅತಿಥಿಗಳಾಗಿ ತಾಲೂಕು ಕಛೇರಿ ಪ್ರ.ದ. ಸಹಾಯಕ ಗೋಪಾಲ ಕಲ್ಲುಗುಡ್ಡೆ, ತುಳು ಚಲನ ಚಿತ್ರ ನಿರ್ದೇಶಕ, ಮಿ.ಬೋರಿ ಚಿತ್ರದ ನಿರ್ಮಾಪಕ ರವಿಕುಮಾರ್ ಬೋಳೂರು, ಸುಬ್ರಹ್ಮಣ್ಯ ಗ್ರಾ.ಪಂ. ಕಾರ್ಯದರ್ಶಿ ಮೋನಪ್ಪ ಡ, ಅಜಿಲ ಸೇವಾ ಸಂಘದ ಅಧ್ಯಕ್ಷ ಜಯರಾಮ ಬೊಳಿಯಮಜಲು, ಕನಕಮಜಲು ಗ್ರಾ.ಪಂ.ಸದಸ್ಯ ಮಹಮ್ಮದ್ ಫವಾಜ್, ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷ ಹೇಮಂತ್ ಕುಮಾರ್, ಗಣೇಶ್ ಇಂಡಸ್ಟ್ರೀಸ್ ಮಾಲಕ ಜಗದೀಶ್ ಸಳಿಕುಂಜ, ದೈಹಿಕ ಶಿಕ್ಷಕ ವಸಂತ ವಿ.ಸಿ, ಬಾಬು ಅಜಿಲ ಅರಂಬೂರು, ಭಜನಾ ಮಂದಿರ ಅಧ್ಯಕ್ಷ ಪುಷ್ಪರಾಜ್ ಅರಂಬೂರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ರಾಷ್ಟ್ರ ಮಟ್ಟದ ಕ್ರೀಡಾಪಟು ಲಾವಣ್ಯ ರೈ ಅರಂಬೂರು ಮತ್ತು ರಾಜ್ಯ ಮಟ್ಟದ ಯೋಗಪಟು ಯೋಗೀಶ ಕನಕಮಜಲು ರವರನ್ನು ಸನ್ಮಾನಿಸಲಾಯಿತು. ಪಂದ್ಯಾಟದಲ್ಲಿ ವಿಜೇತ ತಂಡಗಳಿಗೆ ನಗದು ಮತ್ತು ಶಾಶ್ವತ ಫಲಕ ನೀಡಲಾಯಿತು. 58 ಕೆ.ಜಿ.ವಿಭಾಗದ ಕಬಡ್ಡಿ ಪಂದ್ಯಾಟದಲ್ಲಿ ಒಟ್ಟು 16 ತಂಡಗಳು ಭಾಗವಹಿಸಿದ್ದವು. ಪ್ರಥಮ ಎನ್.ಎಫ್.ಎಸ್.ಸಿ. ನಲಿಕೆ ಫ್ರೆಂಡ್ಸ್ ಸುಳ್ಯ, ದ್ವಿತೀಯ ಯುನೈಟೆಡ್ ಅರಂಬೂರು, ತೃತೀಯ ವಜ್ರಕಾಯ ಕಲ್ಲುಗುಂಡಿ, ಮಹಿಳೆಯರ ತ್ರೋಬಾಲ್ ಪಂದ್ಯಾಟದಲ್ಲಿ ಎನ್.ಎಫ್.ಸಿ.ಬಾಳಿಲ, ದ್ವಿತೀಯ ಮಹಾದೇವಿ ಏಮಾಡು ತಂಡ ಬಹುಮಾನ ಪಡೆದುಕೊಂಡಿತು. ನಲಿಕೆ ಬಾಂಧವರಿಗೆ ನಡೆದ ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾಟದ ಪ್ರಥಮ ಈಗಲ್ ಎಟ್ಯಾಕರ್ಸ್ ಸವಣೂರು, ದ್ವಿತೀಯ ಯುವ ಫ್ರೆಂಡ್ಸ್ ಕಡಂಬು, ತೃತೀಯ ಚಾಮುಂಡೇಶ್ವರೀ ಪಾವೂರು, ಚತುರ್ಥ ಎನ್.ಎಫ್.ಎಸ್. ಎ ತಂಡಗಳು ಪಡೆದುಕೊಂಡಿತು. ಸಮಿತಿಯ ಅಧ್ಯಕ್ಷ ಮನೋಹರ ಪಂಜಿಗಾರು, ಮತ್ತು ಪದಾಧಿಕಾರಿಗಳು, ಸರ್ವ ಸದಸ್ಯರು ಸಹಕರಿಸಿದರು. ತೀರ್ಥೇಶ್ ಕುರುಂಜಿ ಕಾರ್ಯಕ್ರಮ ನಿರ್ವಹಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.