ಪಿಲಿಕಜೆ ಕುಕ್ಕುಜಡ್ಕ ಶ್ರೀ ಧರ್ಮಶಾಸ್ತಾ ಭಜನಾ ಮಂದಿರದಲ್ಲಿ ಅರ್ಧ ಏಕಾಹ ಭಜನೆ

Advt_Headding_Middle
Advt_Headding_Middle

ಅಮರಮುಡ್ನೂರು ಗ್ರಾಮದ ಕುಕ್ಕುಜಡ್ಕ ಪಿಲಿಕಜೆ ಶ್ರೀ ಧರ್ಮಶಾಸ್ತಾ ಭಜನಾ ಮಂದಿರ ಹಾಗೂ ಶ್ರೀ ಗುರುದೇವಾ ಸೇವಾ ಬಳಗ ಇದರ ವತಿಯಿಂದ 16 ನೇ ವರ್ಷದ ಅರ್ಧ ಏಕಾಹ ಭಜನೆಯು ಜ.27 ರಂದು ಜರಗಿತು.

ಪೂ.ಗಣಪತಿ ಹವನವಾಗಿ ಶಿವಸಾಯಿ ಭಟ್ ರವರು ದೀಪ ಪ್ರತಿಷ್ಠಾಪಿಸಿದರು. ಬಳಿಕ ಭಜನೆ ಪ್ರಾರಂಭಗೊಂಡು ತಾಲೂಕಿನ ವಿವಿಧ ಸಂತ ಭಜನಾ ಮಂಡಳಿ ಸದಸ್ಯರಿಂದ ಭಜನಾ ಸೇವೆಯು ನಡೆಯಿತು. ಮಧ್ಯಾಹ್ನ ಮಹಾಪೂಜೆಯಾಗಿ ಪ್ರಸಾದ ವಿತರಣೆಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು. ಸಂಜೆ ಮಹಾಮಂಗಳಾರತಿಯೊಂದಿಗೆ ಭಜನೆ ಸಂಪನ್ನಗೊಂಡು ಪ್ರಸಾದ ವಿತರಿಸಲಾಯಿತು. ರಾತ್ರಿ ಸ್ಥಳೀಯರಿಂದ ಸಾಂಸ್ಕ್ರತಿಕ ಕಾರ್ಯಕ್ರಮ ಮತ್ತು ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ಭಸ್ಮಾಸುರ ಮೋಹಿನಿ ಯಕ್ಷಗಾನ ಪ್ರದರ್ಶನಗೊಂಡಿತು. ಸಮಿತಿಯ ಅಧ್ಯಕ್ಷ ಪದ್ಮನಾಭ ಬೊಳ್ಳೂರು, ಕಾರ್ಯಾಧ್ಯಕ್ಷ ಗಣೇಶ್ ಪಿಲಿಕಜೆ, ಸೇವಾ ಬಳಗ ಅಧ್ಯಕ್ಷ ತಿರುಮಲೇಶ್ವರ ಬೊಳ್ಳೂರು, ಮತ್ತು ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಸ್ಥಳೀಯ ಭಕ್ತಾದಿಗಳು ಆಗಮಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.