ಅಕ್ರಮವಾಗಿ ಫ್ಯಾಬ್ರಿಕೇಷನ್ ಕೆಲಸ ಮಾಡುವವರ ಮೇಲೆ ದೂರು ನೀಡಲು ಗ್ಯಾರೇಜ್ ಮಾಲಕರ ಸಂಘ ತೀರ್ಮಾನ

Advt_Headding_Middle
Advt_Headding_Middle

ಅಕ್ರಮವಾಗಿ ಫ್ಯಾಬ್ರಿಕೇಶನ್ ವರ್ಕ್ಸ್ ನಡೆಸುವವರ ಮೇಲೆ ಪೊಲೀಸರಿಗೆ ಮತ್ತು ಗ್ರಾ.ಪಂ., ನ.ಪಂ.ಗಳಿಗೆ ದೂರು ನೀಡಲು ಸುಳ್ಯ ತಾ. ಗ್ಯಾರೇಜ್ ಮಾಲಕರ ಸಂಘ ನಿರ್ಧರಿಸಿದೆ.

ಸುಳ್ಯ ತಾಲೂಕು ಮತ್ತು ಸುಳ್ಯ ನಗರ ವ್ಯಾಪ್ತಿಯಲ್ಲಿ ಪರವಾನಿಗೆ ಹೊಂದಿ ಫ್ಯಾಬ್ರಿಕೇಶನ್ ವರ್ಕ್ಸ್ ನಡೆಸುವ ಹಲವು ಸಂಸ್ಥೆಗಳಿವೆ. ಅವರು ಸಾರ್ವಜನಿಕರಿಗೆ ತೃಪ್ತಿಕರ ಸೇವೆ ನೀಡುತ್ತಿದ್ದಾರೆ. ಆದರೂ ಕೆಲವು ಮಂದಿ ಹೊರಗಡೆಯಿಂದ ಬಮದು ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಫ್ಯಾಬ್ರಿಕೇಷನ್ ಕೆಲಸ ಮಾಡುತ್ತಿರುವುದರಿಂದ ಬಾಡಿಗೆ ಕೊಠಡಿ ಪಡೆದು, ಬ್ಯಾಂಕ್ ಸಾಲ ಮಾಡಿ, ವರ್ಕ್ ಶಾಪ್ ತೆರೆದು ವ್ಯವಹಾರ ನಡೆಸುವವರಿಗೆ ತೊಂದರೆಯಾಗಿದೆ. ಹೊರಗಡೆಯಿಂದ ಬಂದು ಅನಧಿಕೃತವಾಗಿ ಕೆಲಸ ಮಾಡುವವರಿಗೆ ಅಂಗಡಿ ಬಾಡಿಗೆ ಇಲ್ಲ – ಪರವಾನಿಗೆ ಇಲ್ಲ – ವಿದ್ಯುತ್ ಬಿಲ್ ಕಟ್ಟಬೇಕಾಗಿಲ್ಲ. ಆದ್ದರಿಂದ ಅವರು ಕಡಿಮೆ ದರ ವಿಧಿಸುತ್ತಾರೆ. ಇದರಿಂದಾಗಿ ನ್ಯಾಯಯುತವಾಗಿ, ವರ್ಕ್ ಶಾಪ್ ಸ್ಥಾಪಿಸಿ, ತೆರಿಗೆ ಕಟ್ಟಿ ವ್ಯವಹಾರ ನಡೆಸುವವರಿಗೆ ತೊಂದರೆಯಾಗುತ್ತದೆ. ಅಲ್ಲದೆ ಅನಧಿಕೃತವಾಗಿ ಕೆಲಸ ಮಾಡುವವರ ಜತೆ ಕೆಲಸ ಮಾಡುವವರಿಗೆ ಕೆಲಸದ ವೇಳೆ ಏನಾದರೂ ಅಪಾಯವಾದಲ್ಲಿ ಭದ್ರತೆಯಾಗಲೀ, ಸೂಕ್ತ ಪರಿಹಾರವಾಗಲೀ ದೊರೆಯುವುದಿಲ್ಲ. ಆದ್ದರಿಂದ ಯಾರೂ ಸಂಘದಲ್ಲಿ ನೋಂದಾವಣೆ ಮಾಡದೆ, ಅನಧಿಕೃತವಾಗಿ ಫ್ಯಾಬ್ರಿಕೇಷನ್ ವರ್ಕ್ ಮಾಡಬಾರದೆಂದು ಸುಳ್ಯ ತಾಲೂಕು ಗ್ಯಾರೇಜ್ ಮಾಲಕರ ಸಂಘವು ವಿನಂತಿ ಮಾಡಿಕೊಂಡಿದೆ. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಲು ಹಾಗೂ ಗ್ರಾ.ಪಂ., ನ.ಪಂ.ಗಳಿಗೆ ಮನವಿ ಮಾಡಲು ಜ. ೨೭ರಂದು ನಡೆದ ಸಂಘದ ಸಭೆಯಲ್ಲಿ ನಿರ್ಧರಿಸಲಾಯಿತು. ಮನವಿಗಳಿಗೆ ಸ್ಪಂದಿಸಿ ಅನಧಿಕೃತವಾಗಿ ಕೆಲಸ ಮಾಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಸಂಘದ ಪದಾಧಿಕಾರಿಗಳು ಅಂತಹ ಅನಧಿಕೃತ ಕೆಲಸ ಮಾಡುತ್ತಿರುವವರಲ್ಲಿಗೆ ಹೋಗಿ ಪ್ರಶ್ನಿಸುವುದಾಗಿ ಸಂಘದಲ್ಲಿ ತೀರ್ಮಾನಿಸಲಾಗಿದೆ. ಸಭೆಯ ಅದ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಡಿ.ಸಾಂತಪ್ಪ ವಹಿಸಿದ್ದರು.
ಕಾರ್ಯದರ್ಶಿ ಜನಾರ್ದನ ದೋಳ, ಇತರ ಪದಾಧಿಕಾರಿಗಳು, ಹಿರಿಯ ಫ್ಯಾಬ್ರಿಕೇಟರ್‌ಗಳಾದ ಶಶಿಧರ ಪಿಳ್ಳೆ, ಪದ್ಮನಾಭ ಪಾತಕಲ್ಲು ಮತ್ತಿತರರು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.