ಪಾಲೆಪ್ಪಾಡಿ ಗಣಪಯ್ಯ ಭಟ್ ಇನ್ನಿಲ್ಲ

Advt_Headding_Middle
Advt_Headding_Middle


ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ, ಹಿರಿಯ ಸಾಮಾಜಿಕ ಧುರೀಣ ಪಾಲೆಪ್ಪಾಡಿ ಗಣಪಯ್ಯ ಭಟ್‌ರವರು ಇಂದು ಮುಂಜಾನೆ ನಿಧನರಾದರು.
ಅವರಿಗೆ 89 ವರ್ಷ ವಯಸ್ಸಾಗಿತ್ತು.
ಸುಮಾರು 15 ದಿನಗಳ ಹಿಂದೆ ವಯೋಸಹಜ ಅಸೌಖ್ಯಕ್ಕೊಳಗಾಗಿದ್ದ ಇವರು ಸುಳ್ಯದ ಕೆ.ವಿ.ಜಿ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಕೊಡುಗೈದಾನಿಯಾಗಿದ್ದ ಇವರು ಐವರ್ನಾಡು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷರಾಗಿ, ಪಂಜ ಸೀಮೆಯ ಹವ್ಯಕ ಸಮಾಜದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಐವರ್ನಾಡು ಗ್ರಾಮದ ಎಲ್ಲಾ ಶಾಲಾ ಕಾಲೇಜುಗಳ ಅಭಿವೃದ್ಧಿಯಲ್ಲಿ ಸಕ್ರಿಯರಾಗಿ ದುಡಿದಿದ್ದರು.
ಮೃತರು ಓರ್ವ ಪುತ್ರ, ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ. ಮೃತರ ಪಾರ್ಥೀವ ಶರೀರ ಪಾಲೆಪ್ಪಾಡಿಯ ಮನೆಯಲ್ಲಿದ್ದು, ಇಂದು ಅಪರಾಹ್ನ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ತಿಳಿದುಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.