ಎಣ್ಮೂರು ಆರೆಂಬಿ ಶ್ರೀ ಶಿರಾಡಿ ರಾಜನ್ ದೈವಸ್ಥಾನದಲ್ಲಿ ಪುನರ್‌ಪ್ರತಿಷ್ಠಾ ಬ್ರಹ್ಮಕಲಶೋತ್ಸವ

Advt_Headding_Middle
Advt_Headding_Middle

ಎಣ್ಮೂರು ಆರೆಂಬಿ ಶ್ರೀ ಶಿರಾಡಿ ರಾಜನ್ ದೈವಸ್ಥಾನದಲ್ಲಿ ಪುನರ್‌ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಜ. 28ರಂದು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು.
ಜ.27ರಂದು ರಾತ್ರಿ ಗಂಟೆ 7.00ಕ್ಕೆ ದೇವತಾ ಪ್ರಾರ್ಥನೆ, ಆಚಾರ್ಯವರಣ, ಸ್ವಸ್ತಿ ಪುಣ್ಯಾಹವಾಚನ, ಸ್ಥಳ ಶುದ್ಧಿ, ರಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜಾಬಲಿ, ಪ್ರಾಕಾರ ಬಲಿ, ಪ್ರಸಾದ ವಿತರಣೆ ನಡೆಯಿತು.
ಜ. 28 ರಂದು ಬೆಳಿಗ್ಗೆ 7.00ರಿಂದ ಮಹಾಗಣಪತಿ ಹೋಮ, ಬ್ರಹ್ಮಕಲಶ ಪೂಜೆ,ಬೆಳಿಗ್ಗೆ ಗಂಟೆ ೯.೦೮ ರಿಂದ ೯.೪೦ ರ ಕುಂಭಲಗ್ನ ಶುಭಮುಹೂರ್ತದಲ್ಲಿ ಶ್ರೀ ಶಿರಾಡಿ ರಾಜನ್ ದೈವ ಹಾಗೂ ಪರಿವಾರ ದೈವಗಳ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ತಂಬಿಲ ಸೇವೆ, ಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ರಾಮಕೃಷ್ಣ ಶೆಟ್ಟಿ ಕಟ್ಟಬೀಡು, ಎನ್.ಜಿ. ಲೋಕನಾಥ ರೈ, ಬಾಬು ಕಲ್ಲೇರಿ, ಚಿದಾನಂದ ಕಲ್ಲೇರಿ, ಪ್ರಮೋದ್ ಕುಮಾರ್ ರೈ ಹೊಸಜಾಲು, ವಸಂತ ರೈ ಕಲ್ಲೇರಿ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.