ಫೆ. 14-18 : ಆಲೆಟ್ಟಿ ಸದಾಶಿವ ದೇವಸ್ಥಾನದಲ್ಲಿ ಕಾಲಾವಧಿ ಜಾತ್ರೋತ್ಸವ

Advt_Headding_Middle
Advt_Headding_Middle


ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ಫೆ. 14 ರಿಂದ 18ರವರೆಗೆ ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ವಾಸುದೇವ ತಂತ್ರಿಗಳ ಮಾರ್ಗದರ್ಶನದಲ್ಲಿ ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ಕಾಲಾವಧಿ ಜಾತ್ರೋತ್ಸವವು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿರುವುದು.

ಫೆ. 8ರಂದು ಪೂರ್ವಾಹ್ನ ಪೂಜೆಯ ಬಳಿಕ ಪ್ರಾರ್ಥನೆ ನೆರವೇರಿಸಿ ಮುಹೂರ್ತದ ಗೊನೆ ಕಡಿಯುವ ಕಾರ್ಯಕ್ರಮ, ಫೆ. 14ರಂದು ಪೂ. ಶ್ರೀ ದೇವರಿಗೆ ಪೂಜೆಯಾಗಿ ಬಳಿಕ ಉಗ್ರಾಣ ತುಂಬಿಸುವುದು, ಮಧ್ಯಾಹ್ನ ಮಹಾಪೂಜೆಯಾಗಿ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ, ಸಂಜೆ ಧ್ವಜಾರೋಹಣದೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ಪ್ರಾರಂಭಗೊಳ್ಳಲಿರುವುದು. ರಾತ್ರಿ ಮಹಾಪೂಜೆಯಾಗಿ ನಿತ್ಯಬಲಿ ಉತ್ಸವ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಫೆ. 15ರಂದು ಪೂರ್ವಾಹ್ನ ಪೂಜೆಯಾಗಿ ನಿತ್ಯಬಲಿ ಉತ್ಸವ, ಗಣಪತಿ ಹವನ, ನವಕಾಭಿಷೇಕ, ಮಹಾಪೂಜೆಯಾಗಿ ಧ್ವಜಸ್ತಂಭ ಪೂಜೆ ನಡೆದು, ಪ್ರಸಾದ ವಿತರಣೆಯಾಗಿ ಅನ್ನಸಂತರ್ಪಣೆ, ಸಂಜೆ ಸಪರಿವಾರ ದೈವಗಳ ತಂಬಿಲ ಸೇವೆ, ರಾತ್ರಿ ಮಹಾಪೂಜೆಯಾಗಿ ನಿತ್ಯಬಲಿ ಉತ್ಸವ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಬಳಿಕ ರಾಧಾಕೃಷ್ಣ ಕಲ್ಚಾರು ಮತ್ತು ಬಳಗದವರಿಂದ ಯಕ್ಷಗಾನ ತಾಳಮದ್ದಳೆ. ಫೆ. 16ರಂದು ಬೆ. ಪೂಜೆ, ನಿತ್ಯ ಬಲಿ ಉತ್ಸವ, ಪ್ರಸಾದ ವಿತರಣೆ, ನವಕಾಭಿಷೇಕ ಮಹಾಪೂಜೆಯಾಗಿ, ನಿತ್ಯಬಲಿ ಉತ್ಸವ ಧ್ವಜಸ್ತಂಭ ಪೂಜೆ, ಅನ್ನಸಂತರ್ಪಣೆ ನಡೆಯಲಿರುವುದು. ರಾತ್ರಿ ಮಹಾಪೂಜೆ ಬಳಿಕ ಉತ್ಸವ ಬಲಿ, ನಡುದೀಪೋತ್ಸವ, ವಸಂತಕಟ್ಟೆಪೂಜೆ, ವಿಶೇಷವಾಗಿ ನೃತ್ಯ ಬಲಿ ಉತ್ಸವ, ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿದೆ. ಫೆ. 17 ರಂದು ಪೂ. ದೊಡ್ಡ ದರ್ಶನ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ ವಿತರಣೆ, ಬಳಿಕ ಶ್ರೀದೇವರಿಗೆ ಮಹಾಪೂಜೆ, ಧ್ವಜಸ್ತಂಭ ಪೂಜೆ, ಅನ್ನಸಂತರ್ಪಣೆ, ರಾತ್ರಿ ಮಹಾಪೂಜೆಯಾಗಿ ಶ್ರೀ ಭೂತಬಲಿ ಉತ್ಸವ, ವಸಂತ ಕಟ್ಟೆಪೂಜೆ, ವಿಶೇಷವಾಗಿ ಆಲೆಟ್ಟಿ ಬೆಡಿ ಸೇವೆ ನಡೆಯಲಿರುವುದು. ಬಳಿಕ ಶ್ರೀ ದಏವರ ಶಯನ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಫೆ. 18ರಂದು ಪೂ. ೬ ಗಂಟೆಗೆ ಕವಾಟೋದ್ಘಾಟನೆ, ಅಭಿಷೇಕ ನಡೆದು ಪೂಜೆಯ ಬಳಿಕ ಶ್ರೀ ದೇವರ ಅವಭೃತ ಸ್ನಾನ ಪಯಸ್ವಿನಿ ನದಿಯಲ್ಲಿ ನಡೆಯಲಿರುವುದು. ಬಳಿಕ ಶ್ರೀ ದೇವರ ಸಣ್ಣ ದರ್ಶನ ಬಲಿ ಮತ್ತು ಬಟ್ಟಲು ಕಾಣಿಕೆ ನಡೆದು, ಧ್ವಜಾವರೋಹಣವಾಗಿ ಸಂಪ್ರೋಕ್ಷಣೆಯೊಂದಿಗೆ ಮಹಾಪೂಜೆ ನಡೆದು, ಮಂತ್ರಾಕ್ಷತೆಯೊಂದಿಗೆ ಅನ್ನಸಂತರ್ಪಣೆ ನಡೆಯಲಿರುವುದು.

ಫೆ. 14ರಂದು ಧಾರ್ಮಿಕ ಸಭೆಯು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಸಿ. ಪ್ರಸನ್ನ ಬಡ್ಡಡ್ಕರವರ ಅಧ್ಯಕ್ಷತೆಯಲ್ಲಿ ನಡೆಯಲಿರುವುದು. ಪೆರಾಜೆ ಜ್ಯೋತಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಪುರುಷೋತ್ತಮ ಕಿರ್ಲಾಯ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಅತಿಥಿಗಳಾಗಿ ನಿತ್ಯಾನಂದ ಮುಂಡೋಡಿ, ಹರೀಶ್ ರಂಗತ್ತಮಲೆ, ಎನ್.ಎ.ರಾಮಚಂದ್ರ, ಪುರುಷೋತ್ತಮ ಕೋಲ್ಚಾರು ಉಪಸ್ಥಿತರಿರುವರು. ರಾಷ್ಟ್ರೀಯ ಮಟ್ಟದ ಕ್ರೀಡಾಪಟು ಲಾವಣ್ಯ ಆರ್.ರೈ ಅರಂಬೂರುರವರನ್ನು ಮತ್ತು ಪಾಕತಜ್ಞರಾದ ತಿಮ್ಮಪ್ಪಯ್ಯ ಭಟ್ ಗೂಡಿಂಜರವರನ್ನು ಸನ್ಮಾನಿಸಲಾಗುವುದು. ಬಳಿಕ ರಾತ್ರಿ ಗ್ರಾಮದ ಶಾಲಾ ಮಕ್ಕಳಿಂದ, ಸ್ಥಳೀಯ ಸಂಘ ಸಂಸ್ಥೆಗಳ ಸದಸ್ಯರಿಂದ ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮ ನಡೆಯಲಿರುವುದು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.