Breaking News

ಅಜ್ಜನಗದ್ದೆ, ಕುಕ್ಕುಜಡ್ಕ, ಪೈಲಾರು ಆಯ್ದ ಭಾಗಗಳ ರಸ್ತೆ ಕಾಂಕ್ರೀಟ್‌ಗೆ ಗುದ್ದಲಿ ಪೂಜೆ

Advt_Headding_Middle
Advt_Headding_Middle

ಅಜ್ಜನಗದ್ದೆ ,ಕುಕ್ಕುಜಡ್ಕ, ಪೈಲಾರು ಆಯ್ದ ಭಾಗಗಳ ರಸ್ತೆ ಕಾಂಕ್ರೀಟೀಕರಣ ನಡೆಯಲಿದ್ದು, ಇದರ ಗುದ್ದಲಿ ಪೂಜೆ ಜ.29 ರಂದು ನಡೆಯಿತು.

ಗುದ್ದಲಿ ಪೂಜೆ ನಡೆಸಿ ಶಾಸಕ ಅಂಗಾರ ಮಾತನಾಡಿ ಅಜ್ಜನಗದ್ದೆ ಕುಕ್ಕುಜಡ್ಕ ರಸ್ತೆಗೆ ೧೫ ಲಕ್ಷ ಹಾಗೂ ಕುಕ್ಕುಜಡ್ಕ ಪೈಲಾರು ರಸ್ತೆಗೆ ವಿವಿಧ ಅನುದಾನದಲ್ಲಿ ೪೦ ಲಕ್ಷ ಇಡಲಾಗಿದೆ. ಅಲ್ಲದೆ ಈ ಭಾಗದ ವಿವಿಧ ರಸ್ತೆಗಳ ಅಭಿವೃದ್ಧಿ ಹಂತ ಹಂತವಾಗಿ ಮಾಡುವುದಾಗಿ ತಿಳಿಸಿದರು. ಬಿಜೆಪಿಯಿಂದಾಗಿ ಅಂಗಾರ , ಅಂಗಾರನಿಂದಾಗಿ ಬಿಜೆಪಿ ಅಲ್ಲ ಇದು ಎಲ್ಲರಿಗೂ ತಿಳಿದ ವಿಚಾರ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ವೆಂಕಟ್ ವಳಲಂಬೆ, ಜಿ.ಪಂ ಸದಸ್ಯೆ ಪುಷ್ಪಾವತಿ ಬಾಳಿಲ, ತಾ.ಪಂ ಸದಸ್ಯ ರಾಧಾಕೃಷ್ಣ ಬೊಳ್ಳೂರು, ಅಮರ ಪಡ್ನೂರು ಗ್ರಾ.ಪಂ ಸದಸ್ಯೆ ಸೀತಾ ಎಚ್, ಕುಕ್ಕುಜಡ್ಕ ಸೊಸೈಟಿ ಅಧ್ಯಕ್ಷ ಸದಾಶಿವ ಮೂಕಮಲೆ, ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಶಿವರಾಮ, ಎ.ಪಿ.ಎಂ.ಸಿ ಉಪಾಧ್ಯಕ್ಷೆ ಸುಕನ್ಯಾ , ಜಾಲ್ಸೂರು ವಲಯ ಬಿಜೆಪಿ ಪಧಾನ ಕಾರ್ಯದರ್ಶಿ ತಿಮ್ಮಪ್ಪ ಕೊಂಡೆಬಾಯಿ, ಎಂ.ಟಿ ಶಾಂತಿಮೂಲೆ, ಹರಿಶ್ಚಂದ್ರ ಮೊಂಟಡ್ಕ, ಕೃಷ್ಣಪ್ಪ ಗೌಡ ಕೋಡ್ತುಗಳಿ, ಪ್ರದೀಪ್, ಜನಾರ್ದನ ಸಂಕೇಶ, ಪಂಚಾಯತ್ ಕಾರ್ಯದರ್ಶಿ ದಯಾನಂದ, ಇಂಜಿನಿಯರ್ ಜನಾರ್ದನ ಆಚಾರ್ಯ, ಕಂಟ್ರಾಕ್ಟರ್ ಯೊಗೀಶ್ ಉಪಸ್ಥಿತರಿದ್ದರು. ತಿಮ್ಮಪ್ಪ ಕೊಂಡೆಬಾಯಿ ಸ್ವಾಗತಿಸಿ ಎಂ.ಟಿ ಶಾಂತಿಮೂಲೆ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.