Breaking News

ಬೆಳ್ಳಾರೆ ಘಟಕದ ಗೃಹರಕ್ಷಕದಳ ಕಛೇರಿಗೆ ಜಿಲ್ಲಾ ಸಮಾದೇಷ್ಠರ ಭೇಟಿ

Advt_Headding_Middle
Advt_Headding_Middle

ಬೆಳ್ಳಾರೆ ಘಟಕದ ಗೃಹರಕ್ಷಕದಳ ಕಛೇರಿಗೆ ಜಿಲ್ಲಾ ಸಮಾದೇಷ್ಠರಾದ ಡಾ| ಮುರಲೀ ಮೋಹನ್ ಚೂಂತಾರು ಜ. ೨೭ರಂದು ಭೇಟಿ ನೀಡಿ, ಕವಾಯತು ವೀಕ್ಷಣೆ ನಡೆಸಿ,ಗೃಹರಕ್ಷಕರ ಕುಂದು ಕೊರತೆಗಳ ಹಾಗೂ ಕರ್ತವ್ಯಗಳ ಬಗ್ಗೆ ಚರ್ಚಿಸಿದರು.

ನಿಷ್ಕ್ರೀಯ ಗೃಹರಕ್ಷಕರನ್ನು ತೆಗೆದು ಹೊಸ ಗೃಹರಕ್ಷಕರನ್ನು ನೇಮಿಸುವಂತೆ ಸೂಚಿಸಿದರು. ಹಾಗೂ ಮುಂಬರುವ ಲೋಕಸಭಾ ಚುನಾವಣಾ ಕರ್ತವ್ಯಕ್ಕೆ ಹೆಚ್ಚನ ಸಂಖ್ಯೆಯಲ್ಲಿ ಗೃಹರಕ್ಷಕರನ್ನು ನಿಯೋಜಿಸಲು ಸೂಚಿಸಿದರು. ಗೃಹರಕ್ಷಕರ ಕ್ಷೇಮಾಭಿವೃದ್ಧಿ ನಿಧಿ ವಂತಿಕೆಯನ್ನು ನೀಡಲು ಹಾಗೂ ಸಮೂಹ ವಿಮೆ ಮಾಡಿಸಲು ಸೂಚಿಸಿದರು. ಏಪ್ರಿಲ್ ತಿಂಗಳಿನಿಂದ ಎಲ್ಲಾ ಗೃಹರಕ್ಷಕರಿಗೂ ಕಡ್ಡಾಯವಾಗಿ ಬೆರಳಚ್ಚು ಹಾಜರಾತಿ ಮತ್ತು ಕಡ್ಡಾಯವಾಗಿ ಸರದಿ ಆಧಾರದ ಮೇಲೆ ಕರ್ತವ್ಯಕ್ಕೆ ನಿಯೋಜಿಸಲು ಕೇಂದ್ರ ಕಛೇರಿಯಿಂದ ಆದೇಶ ಬಂದಿರುತ್ತದೆ ಮತ್ತು ಎಲ್ಲಾ ಗೃಹರ್‍ಷಕರು ಈ ಹೊಸ ಬದಲಾವಣೆಗೆ ಮಾನಸಿಕವಾಗಿ ಸಿದ್ದರಾಗಿರಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಬೆಳ್ಳಾರೆ ಘಟಕದ ಘಟಕಾಧಿಕಾರಿ ಎಚ್. ನಾರಾಯಣ ಹಾಗೂ ಬೆಳ್ಳಾರೆ ಘಟಕದ ಸುಮಾರು ೪೦ ಮಂದಿ ಗೃಹರಕ್ಷಕರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.