ಅರಂತೋಡುನಲ್ಲಿ ‘ಮಾಲಿನ್ಯ ಮುಕ್ತ ಗ್ರಾಮ ಪಂಚಾಯತ್ ನಿರ್ಮಾಣಕ್ಕಾಗಿ ಮನೆ ಮನೆಗಳಿಂದ ತ್ಯಾಜ್ಯ ಸಂಗ್ರಹ ಅಭಿಯಾನ’

Advt_Headding_Middle
Advt_Headding_Middle

ಅರಂತೋಡು ಗ್ರಾಮ ಪಂಚಾಯತ್ ವತಿಯಿಂದ ‘ಮಾಲಿನ್ಯ ಮುಕ್ತ ಗ್ರಾಮ ಪಂಚಾಯತ್ ನಿರ್ಮಾಣಕ್ಕಾಗಿ ಮನೆ ಮನೆಗಳಿಂದ ತ್ಯಾಜ್ಯ ಸಂಗ್ರಹ ಅಭಿಯಾನ’ ಅರಂತೋಡು ತೆಕ್ಕಿಲ್ ಸಮುದಾಯ ಭವನ ದಲ್ಲಿ ನಡೆಯಿತು. ಈ ಕಾರ್ಯಕ್ರಮವು ಸುಳ್ಯ ತಾಲೂಕಿನಲ್ಲಿ ಪ್ರಪ್ರಥಮ ಕಾರ್ಯಕ್ರಮವು ಅರಂತೋಡಿನಲ್ಲಿ ನಡೆಯಿತು. ಕಾರ್ಯಕ್ರಮ ವನ್ನು ಸುಳ್ಯ ಶಾಸಕ ಎಸ್ ಅಂಗಾರ ದೀಪ ಬೆಳಗಿಸಿ ಉದ್ಘಾಟಿಸಿದರು .ಕಾರ್ಯಕ್ರಮ ದ ಅಧ್ಯಕ್ಷ ತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಲೀಲಾವತಿ ಕೊಡಂಕೇರಿ ವಹಿಸಿದ್ದರು . ತ್ಯಾಜ್ಯ ವಿಲೇವಾರಿ ಬಗ್ಗೆ ನ್ಯಾಯವಾದಿ ದೀಪಕ್ ಕುತ್ತಮೊಟ್ಟೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ತಾ.ಪಂಚಾಯತ್ ಸದಸ್ಯೆ ಪುಷ್ಪ ಮೇದಪ್ಪ, ವಾಹನ ಚಾಲಕ ಮಾಲಕ ಸಂಘದ ಅಧ್ಯಕ್ಷ ರಮಾನಂದ ಬಾಳಕಜೆ ಮುಂತಾದವರು ಉಪಸ್ಥಿತರಿದ್ದರು .ಗ್ರಾ.ಪಂ.ಉಪಾಧ್ಯಕ್ಷ ಶಿವಾನಂದ ಕುಕ್ಕುಂಬಳ ಸ್ವಾಗತಿಸಿ ಪ್ರಸ್ತಾವಿಕ ಭಾಷಣ ಮಾಡಿದರು . ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಎಮ್ .ಆರ್ ಜಯಪ್ರಕಾಶ್ ಪ್ರಮಾಣ ವಚನ ಬೋದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.