ಸುಬ್ರಹ್ಮಣ್ಯ: ಭಕ್ತ ಹಿತರಕ್ಷಣಾ ವೇದಿಕೆಯವರ ಸತ್ಯಾಗ್ರಹ ಅಂತ್ಯ

Advt_Headding_Middle
Advt_Headding_Middle


ಸುಬ್ರಹ್ಮಣ್ಯ ದೇವಾಲಯ ಭಕ್ತಹಿತರಕ್ಷಣಾ ವೇದಿಕೆ ವತಿಯಿಂದ ಸಂಪುಟ ನರಸಿಂಹ ಮಠದ ಸ್ವಾಮೀಜಿವರ ಮತ್ತು ಅರುಣ್ ಕುಮಾರ್ ಪುತ್ತಿಲ ಮೇಲೆ ಕ್ರಮಕೈಗೊಳ್ಳಬೇಕಾಗಿ ನಡೆಸಲ್ಪಡುತ್ತಿದ್ದ ಪ್ರತಿಭಟನೆ ಜ. ೨೮ ರಂದು ಅಂತ್ಯಗೊಂಡಿದೆ.

ಸುಮಾರು 77  ದಿನಗಳಿಂದ ಸತ್ಯಾಗ್ರಹ ನಡೆಸುತ್ತಿದ್ದ ವೇದಿಕೆಯವರ ಬೇಡಿಕೆಯಂತೆ ಸ್ವಾಮೀಜಿಗಳ ಮತ್ತು ಅರುಣ್ ಕುಮಾರ್ ಅವರ ಮೇಲೆ ಕೇಸು ದಾಖಲಿಸಿ ಹೇಳಿಕೆ ಪಡೆದುಕೊಂಡಿರುವುದಾಗಿ ಪೊಲೀಸ್ ಇಲಾಖೆಯಿಂದ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸತ್ಯಾಗ್ರಹ ಅಂತ್ಯಗೊಳಿಸಿದ್ದಾಗಿ ಸಮಿತಿಯವರು ಸಮಾರೋಪ ಸಮಾರಂಭದಲ್ಲಿ ತಿಳಿಸಿದ್ದಾರೆ. ಸತ್ಯಾಗ್ರಹ ಅಂತ್ಯದ ದಿನ ಸಮಾರೋಪ ಸಮಾರಂಭ ಸಭೆಯಲ್ಲಿ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮಹೇಶ್ ಕುಮಾರ್ ಕರಿಕ್ಕಳ, ಕೃಷ್ಣಮೂರ್ತಿ ಭಟ್, ಮಾಧವ ಡಿ, ದ.ಕ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯೆ ವಿಮಲಾ ರಂಗಯ್ಯ, ಕಿಶೋರ್ ಕುಮಾರ್ ಶಿರಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಭಕ್ತಹಿತರಕ್ಷಾಣಾ ಸಮಿತಿಯ ಮೋನಪ್ಪ ಮಾನಾಡು, ಶಿವರಾಮ ರೈ, ಶ್ರೀನಾಥ್ ಭಟ್, ರವೀಂದ್ರ ಕುಮಾರ್ ರುದ್ರಪಾದ, ಶೋಬಿತ್, ದಿನೇಶ್ ಶಿರಾಡಿ, ಸೌಮ್ಯ, ಭರತ್, ಮೋಹನ ದಾಸ್ ರೈ, ಬೆಳ್ಯಪ್ಪ ಮತ್ತಿತರ ಹಲವಾರು ಸದಸ್ಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.