ಬೆಳ್ಳಾರೆ: ಜ್ಞಾನ ಗಂಗಾ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ

Advt_Headding_Middle
Advt_Headding_Middle

ಬೆಳ್ಳಾರೆ ಜ್ಞಾನಗಂಗಾ ವಿದ್ಯಾಸಂಸ್ಥೆಯಲ್ಲಿ 10 ನೇ ತರಗತಿ ವಿದ್ಯಾರ್ಥಿಗಳಿಗೆ ಜ. 26ರಂದು ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಿದರು. ಶಾಲಾ ಸಂಚಾಲಕರಾದ ಎಂ.ಪಿ.ಉಮೇಶ್‌ರವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಸಮಾರಂಭದ ಮುಖ್ಯ ಅತಿಥಿಯಾಗಿ ಕು.ಮೇಘನ ಬಲ್ಲಾಳ್ (ನ್ಯಾಯವಾದಿ) ಆಗಮಿಸಿ ಮಾತನಾಡಿ, ಲಿಂಗ ತಾರತಮ್ಯ ಭಾವನೆಯಿಂದ ಮಕ್ಕಳನ್ನು ಬೆಳೆಸಬಾರದು, ಯಾವತ್ತು ಸಕಾರಾತ್ಮಕ ಭಾವನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಕೃತಜ್ಞತಾಭಾವವನ್ನು ಮೈಗೂಡಿಸಿಕೊಳ್ಳಬೇಕು, ಬೆಳೆಸಿದ ವಿದ್ಯಾಸಂಸ್ಥೆ ಬಹಳ ಪವಿತ್ರವಾದುದು, ಇತ್ಯಾದಿ ಸ್ಪೂರ್ತಿದಾಯಕ ಮಾತುಗಳನ್ನು ವಿದ್ಯಾರ್ಥಿಗಳಿಗೆ ನೀಡಿ ಮಕ್ಕಳಲ್ಲಿ ಪ್ರೇರಣಾತ್ಮಕ ಚಿಂತನೆಗಳನ್ನು ಮೂಡಿಸಿದರು. ಶಾಲಾ ಪ್ರಾಂಶುಪಾಲರಾದ ಕು.ದೇಚಮ್ಮರವರು ಬೀಳ್ಕೊಳ್ಳಲಿರುವ ವಿದ್ಯಾರ್ಥಿಗಳಿಗೆ ಹಿತವಚನವನ್ನು ನೀಡುತ್ತಾ ಸಮಯದ ಮಹತ್ವವನ್ನು ವಿಶೇಷವಾಗಿ ವಿವರಿಸಿದರು. ಕಾಲದ ಗತಿಯನ್ನು ಸಮೀಕರಿಸಿ ನೋಡುವ ಪ್ರಯತ್ನ ಮಾಡಿ, ಉರುಳುತ್ತಿರುವ ಕಾಲಚಕ್ರದಡಿಯಲ್ಲಿ ಮನೆಮಂದಿ, ಕುಟುಂಬ, ಗುರುಹಿರಿಯರಿಗೆ ನೀಡುವ ಪ್ರಾಶಸ್ತ್ಯವನ್ನು ನೆನಪಿಟ್ಟುಕೊಳ್ಳಿ. ಕಾಲದ ಭೌತಿಕ ಲಕ್ಷಣಗಳು, ಭವಿಷ್ಯದ ಕನಸುಗಳು, ಚರಿತ್ರೆಯ ವಿಸ್ಮಯಗಳನ್ನು ಪರಿಚಯಿಸುತ್ತಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ೧೦ನೇ ತರಗತಿ ವಿದ್ಯಾರ್ಥಿಗಳಾದ ಮಾ.ಮಹಮ್ಮದ್ ರಾಝಿ ಹಾಗೂ ಕು.ಅನಘ್ಯ ತಮ್ಮ ತಮ್ಮ ಸವಿನೆನಪುಗಳನ್ನು ಹಂಚಿಕೊಂಡರು. ಶಾಲಾ ವಿದ್ಯಾರ್ಥಿ ಮಾ.ವರುಣ್ ಸ್ವಾಗತಿಸಿ, ಕು.ಸಿಂಚನ.ಟಿ ವಂದಿಸಿದರು. ವಿದ್ಯಾರ್ಥಿನಿಯರಾದ ಕು.ಸ್ವಾತಿ ಮತ್ತು ಕು.ಚಿನ್ಮಯಿ ಕಾರ್ಯಕ್ರಮ ನಿರೂಪಿಸಿದರು. ಸಂತೋಷದಿಂದ ಶಾಲಾ ವಿದ್ಯಾರ್ಥಿಗಳು ಪುಟ್ಟ ಮನೋರಂಜನಾ ಕಾರ್ಯಕ್ರಮ ನೀಡಿ ೧೦ ನೇತರಗತಿ ವಿದ್ಯಾರ್ಥಿಗಳನ್ನು ಹೃದಯಸ್ಪರ್ಶಿಯಾಗಿ ಬೀಳ್ಕೊಟ್ಟರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.