ಫೆಬ್ರವರಿ 2, 3 : ಬೆಳ್ಳಾರೆಯಲ್ಲಿ ದ.ಕ.ಜಿಲ್ಲಾ ಮಟ್ಟದ ಇಸ್ಲಾಮಿಕ್ ಕಲಾ ಮೇಳ-2019

Advt_Headding_Middle
Advt_Headding_Middle

 

ದೇಶದ ಅತೀದೊಡ್ಡ ಇಸ್ಲಾಮಿಕ್ ಧಾರ್ಮಿಕ ಶಿಕ್ಷಣ ಮಂಡಳಿಯಾದ ‘ಸಮಸ್ತ’ ದ ಅದೀನದ ಮದ್ರಸ ವಿದ್ಯಾರ್ಥಿಗಳ ಹಾಗೂ ಮುಅಲ್ಲಿಮರ ದ.ಕ.ಜಿಲ್ಲಾ ಮಟ್ಟದ ಇಸ್ಲಾಮಿಕ್ ಕಲಾ ಮೇಳ-2019′ ಮುಅಲ್ಲಿಂ ,ವಿದ್ಯಾರ್ಥಿ ಫೆಸ್ಟ್ ಸ್ಪರ್ಧಾ ಕಾರ್ಯಕ್ರಮವು ಫೆಬ್ರವರಿ 2 ಮತ್ತು 3 ರಂದು ಸುಳ್ಯ ತಾಲೂಕಿನ ಬೆಳ್ಳಾರೆಯ ಝಕರಿಯಾ ಜುಮ್ಮಾ ಮಸೀದಿಯ ವಠಾರದ ಶಂಸುಲ್ ಉಲಮಾ ನಗರದಲ್ಲಿ ಜರಗಲಿದೆ.

ದ.ಕ.ಜಿಲ್ಲಾ ಜಂಇಯ್ಯತ್ತುಲ್ ಮುಅಲ್ಲಿಮೀನ್ ವತಿಯಿಂದ ನಡೆಯುವ ಈ ಸ್ಪರ್ಧಾ ಕಾರ್ಯಕ್ರಮವು ಫೆಬ್ರವರಿ 2 ರಂದು ಶನಿವಾರ ಬೆಳಿಗ್ಗೆ ಗಂಟೆ 9 ರಿಂದ ಸ್ಥಳೀಯ ದರ್ಗಾ ಝಿಯಾರತ್ ಹಾಗೂ ಧ್ವಜಾರೋಹಣದೊಂದಿಗೆ ಆರಂಭಗೊಳ್ಳಲಿದ್ದು, ಈ ಇಸ್ಲಾಮಿಕ್ ಕಲಾಮೇಳದಲ್ಲಿ ದ.ಕ.ಜಿಲ್ಲೆಯ ಒಟ್ಟು 22 ರೇಂಜ್ ಗಳ ವ್ಯಾಪ್ತಿಯ ಸುಮಾರು 500 ಮದ್ರಸಗಳ 40 ಸಾವಿರ ವಿಧ್ಯಾರ್ಥಿಗಳ ಪೈಕಿ ಆಯಾ ರೇಂಜ್ ಮಟ್ಟಗಳಲ್ಲಿ ನಡೆದ ಸ್ಪರ್ಧೆಗಳಲ್ಲಿ ಆಯ್ಕೆಯಾದ 1 ಸಾವಿರಕ್ಕೂ ಮಿಕ್ಕಿದ ವಿದ್ಯಾರ್ಥಿಗಳು ಹಾಗೂ ಮುಅಲ್ಲಿಮರು ಸ್ಪರ್ಧಾಳುಗಳಾಗಿ ಭಾಗವಹಿಸುವರು.

ಒಟ್ಟು ಐದು ವಿಭಾಗಗಳಲ್ಲಿ ,ವಿವಿಧ ವಿಷಯಗಳಲ್ಲಿ ಹಾಗೂ ವಿವಿಧ ಭಾಷೆಗಳಲ್ಲಿ ನಡೆಯುವ ಈ ಸ್ಪರ್ಧಾ ಕಾರ್ಯಕ್ರಮಗಳು ಎರಡು ದಿನಗಳ ಕಾಲ ಏಕ ಕಾಲದಲ್ಲಿ ಒಟ್ಟು ಐದು ವೇದಿಕೆಗಳಲ್ಲಿ ಜರಗಲಿದೆ. ಈ ಜಿಲ್ಲಾ ಮಟ್ಟದ ಇಸ್ಲಾಮಿಕ್ ಕಲಾ ಮೇಳದಲ್ಲಿ ಆಯ್ಕೆಯಾದ ಸ್ಪರ್ಧಾಳುಗಳು ಫೆಬ್ರವರಿ 14,15,16 ರಂದು ಕೇರಳದ ಕಣ್ಣೂರು ನಲ್ಲಿ ನಡೆಯುವ ಏಷ್ಯಾದ ಅತೀದೊಡ್ಡ ಇಸ್ಲಾಮಿಕ್ ಕಲಾ ಮೇಳವೆಂದೇ ಖ್ಯಾತಿವೆತ್ತ ರಾಷ್ಟ್ರ ಮಟ್ಟದ ಇಸ್ಲಾಮಿಕ್ ಕಲಾ ಮೇಳ ಗ್ರಾಂಡ್ ಫಿನಾಲೆಯಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಿ ಭಾಗವಹಿಸುವರು.

ಕರ್ನಾಟಕದ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳಿಗಾಗಿ ಅಲ್ಲಿ ಅರಬಿಕ್ ,ಉರ್ದು,ಮಲಯಾಳಂ ನ ಜೊತೆಗೆ ಕನ್ನಡದಲ್ಲೂ ಸ್ಪರ್ಧೆ ನಡಯಲಿದೆ. ವಿವಿಧ ರಾಜ್ಯಗಳ ಹತ್ತು ಸಾವಿರ ಮದ್ರಸಗಳಿಂದ ಆಯಾ ಜಿಲ್ಲಾ ಮಟ್ಟಗಳಲ್ಲಿ ಆಯ್ಕೆಯಾದ ಪ್ರತಿನಿಧಿಗಳು ರಾಷ್ಟ್ರ ಮಟ್ಟದ ಈ ಕಲಾ ಮೇಳದಲ್ಲಿ ಭಾಗವಹಿಸುವರು.

ಬೆಳ್ಳಾರೆಯಲ್ಲಿ ನಡೆಯಲಿರುವ ದ.ಕ. ಜಿಲ್ಲಾ ಮಟ್ಟದ ಇಸ್ಲಾಮಿಕ್ ಕಲಾ ಮೇಳದ ಜೊತೆಗೆ ಉದ್ಘಾಟನಾ ಸಮಾರಂಭ, ಅನುಸ್ಮರಣಾ ಸಮ್ಮೇಳನ ಹಾಗೂ ಸಮಾರೋಪ ಸಮಾರಂಭ ಮೊದಲಾದ ವಿವಿಧ ಕಾರ್ಯಕ್ರಮಗಳೂ ನಡೆಯಲಿದ್ದು, ಈ ಕಾರ್ಯಕ್ರಮಗಳಲ್ಲಿ ದ.ಕ.ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್, ದ.ಕ.ಜಂಇಯ್ಯತ್ತುಲ್ ಉಲಮಾ ನಾಯಕರಾದ ಎನ್.ಪಿ.ಎಂ.ಝೈನುಲ್ ಆಬಿದೀನ್ ತಂಙಳ್ ಕುನ್ನುಂಗೈ, ಬಿ.ಕೆ.ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಂಬ್ರಾಣ ಹಾಗೂ ಇನ್ನಿತರ ಉನ್ನತ ಉಲಮಾಗಳು ,ಸಾಮಾಜಿಕ ಮುಖಂಡರು, ‘ಸಮಸ್ತ’ದ ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳು, ರೇಂಜ್ ಮತ್ತು ಮದ್ರಸ ಮೆನೇಜ್ ಮೆಂಟ್ ಪ್ರತಿನಿಧಿಗಳು ಭಾಗವಹಿಸುವರು.

ದ.ಕ.ಜಿಲ್ಲಾ ಜಂಇಯ್ಯತ್ತುಲ್ ಮುಅಲ್ಲಿಮೀನ್ ಅಧ್ಯಕ್ಷರಾದ ಕೆ.ಎಲ್.ಉಮರ್.ದಾರಿಮಿ ಪಟ್ಟೋರಿ ,ದ.ಕ.ಜಿಲ್ಲಾ ಎಸ್ ಕೆ ಎಸ್ ಬಿ ವಿ ನಿರ್ದೇಶಕ ಸಮಿತಿ ಅಧ್ಯಕ್ಷರಾದ ಕೆ.ಎಂ.ಎ.ಕೊಡುಂಗಾಯಿ ಫಾಝಿಲ್ ಹನೀಫಿ ,ಕಾರ್ಯಕ್ರಮ ಸ್ವಾಗತ ಸಮಿತಿ ಕನ್ವಿನರ್ ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆ ,ಝಕರಿಯಾ ಜುಮ್ಮಾ ಮಸೀದಿ ಬೆಳ್ಳಾರೆ ಉಪಾಧ್ಯಕ್ಷರಾದ ಯು ಹೆಚ್ ಅಬೂಬಕ್ಕರ್ , ಸಮಸ್ತ ವಿದ್ಯಾಭ್ಯಾಸ ಬೋರ್ಡ್ ಸದಸ್ಯರಾದ ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ , ದ.ಕ.ಜಿಲ್ಲಾ ಮದ್ರಸ ಮೆನೇಜ್ ಮೆಂಟ್ ಅಧ್ಯಕ್ಷರಾದ ರಫೀಕ್ ಹಾಜಿ ನೇರಳಕಟ್ಟೆ ,ದ.ಕ.ಜಿಲ್ಲಾ ಜಂಇಯ್ಯತ್ತುಲ್ ಮುಅಲ್ಲಿಮೀನ್ ಪ್ರಧಾನ ಕಾರ್ಯದರ್ಶಿ ಬಶೀರ್ ದಾರಿಮಿ ಪರಣೆ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು .

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.