ಫೆ.1, 2 :ವಳಲಂಬೆ ಜಾತ್ರೋತ್ಸವ ಮತ್ತು ನೇಮೋತ್ಸವ

Advt_Headding_Middle
Advt_Headding_Middle

ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ ವಳಲಂಬೆ ಇದರ ವಾರ್ಷಿಕ ಜಾತ್ರೋತ್ಸವ ಮತ್ತು ನೇಮೋತ್ಸವ ಫೆ. 1 ಮತ್ತು ಫೆ 2 ರಂದು ನಡೆಯಲಿದೆ.

ಫೆ. 1 ರಂದು ಜಾತ್ರೋತ್ಸವ ಪ್ರಯುಕ್ತ ಬೆಳಗ್ಗೆ ಗಣಪತಿ ಹೋಮ, ಏಕಾದಶ ರುದ್ರಾಭಿಷೇಕ, ಮಧ್ಯಾಹ್ನ ಗಂಟೆ ನವ ಕಲಶಾಭಿಷೇಕ , ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ದೈವಗಳ ಭಂಡಾರ ತೆಗೆಯುವುದು ಮತ್ತು ಚೆಂಡೆವಾದನ ನಡೆಯಲಿದ್ದು, ರಾತ್ರಿ ಮಹಾಪೂಜೆ ಮತ್ತು ಅನ್ನಸಂತರ್ಪಣೆ ನಡೆದು ದೇವರ ಉತ್ಸವ ಬಲಿ ಹೊರಟು, ವಸಂತ ಕಟ್ಟೆ ಪೂಜೆ , ಬಟ್ಟಲು ಕಾಣಿಕೆ , ಪ್ರಸಾದ ವಿತರಣೆ ನಡೆಯಲಿದೆ. ಫೆ.2 ರಂದು ಬೆಳಗಿನ ಜಾವ ಉಳ್ಳಾಕ್ಲು – ಉಳ್ಳಾಲ್ತಿ ನೇಮ , ಕುಮಾರ ದೈವದ ನೇಮ ನಡೆದು, ಬಳಿಕ ಶ್ರೀ ದೇವರಿಗೆ ಬೆಳಗ್ಗಿನ ಪೂಜೆ ನಡೆಯಲಿದೆ. ಆ ಬಳಿಕ ರಕ್ತೇಶ್ವರಿ ದೈವದ ನೇಮ, ಧೂಮಾವತಿ ದೈವದ ನೇಮ, ಮಧ್ಯಾಹ್ನ ಮಹಾಪೂಜೆ, ದೈವಗಳ ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಗುಳಿಗ ಕೋಲ , ಪ್ರಸಾದ ವಿತರಣೆ ನಡೆಯಲಿದೆ ಎಂದು ಜಾತ್ರೋತ್ಸವ, ಸೇವಾ ಮತ್ತು ವ್ಯವಸ್ಥಾಪನಾ ಸಮಿತಿಯವರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.