ಮಕ್ಕಳಿಗೆ ಜೀವನ ಪಾಠ ಮಾಡಿದ ತಹಶೀಲ್ದಾರ್

Advt_Headding_Middle
Advt_Headding_Middle
Advt_Headding_Middle

 

ಸುಳ್ಯಕ್ಕೆ ಹೊಸದಾಗಿ ಬಂದಿರುವ ತಹಶೀಲ್ದಾರ್ ಕುಂಞಿ ಅಹಮ್ಮದ್‌ರವರು ಸುಳ್ಯ ನಗರದ ಜಯನಗರ ಹಿರಿಯ ಪ್ರಾಥಮಿಕ ಶಾಲೆಗೆ ಫೆ.13 ರಂದು ಭೇಟಿ ನೀಡಿ ಮಕ್ಕಳಿಗೆ ಜೀವನದ ಕುರಿತು ಪಾಠ ಮಾಡಿದರು. ಶಾಲೆಗೆ ಆರ್.ಐ. ಅವಿನ್ ರಂಗತ್ತಮಲೆ, ಗ್ರಾಮ ಲೆಕ್ಕಾಧಿಕಾರಿ ತಿಪ್ಪೇಶಪ್ಪರೊಂದಿಗೆ ಬಂದ ತಹಶೀಲ್ದಾರ್ ನೇರವಾಗಿ ಮಕ್ಕಳ ತರಗತಿ ಕೊಠಡಿಗೆ ಹೋದರು. ಅಲ್ಲಿಗೆ ಬಂದ ಮುಖ್ಯ ಶಿಕ್ಷಕ ತೀರ್ಥರಾಮರಿಗೆ ತಮ್ಮ ಪರಿಚಯ ಮಾಡಿಕೊಂಡು ಮಕ್ಕಳ ಜೊತೆ ಮಾತಿಗಿಳಿದರು. ಮಕ್ಕಳಿಗೆ ಸಾಮಾನ್ಯ ಜ್ಞಾನದ ಕುರಿತು ಹಲವು ಪ್ರಶ್ನೆಗಳನ್ನು ಕೇಳಿದರಲ್ಲದೆ ಕೆಲವರನ್ನು ತಮ್ಮ ಬಳಿ ಕರೆಸಿಕೊಂಡು ಅವರಿಂದ ಮಗ್ಗಿ ಹೇಳಿಸಿದರು ಹಾಗೂ ಅಬ್ದುಲ್ ಕಲಾಂ ಕುರಿತು ಮಾಹಿತಿ ನೀಡಿದರು. ಸವಾಲುಗಳನ್ನು ಎದುರಿಸುವ ಹಾಗೂ ಕನಸು ಕಾಣುವ ಅದಕ್ಕಾಗಿ ಪರಿಶ್ರಮದಿಂದ ಓದುವ ಕುರಿತು ಮಕ್ಕಳಿಗೆ ತಿಳಿಸಿದರು. ಬಳಿಕ ಶಾಲಾ ಪರಿಸರದಲ್ಲಿ ಸುತ್ತಾಡಿ ಸ್ವಚ್ಛತೆಯ ಪರಿಶೀಲನೆ ನಡೆಸಿದರು. ಅಕ್ಷರ ದಾಸೋಹ ಕೊಠಡಿಗೆ ಹೋಗಿ ಬಿಸಿಯೂಟದ ಕುರಿತು ಮಾಹಿತಿ ಪಡೆದರಲ್ಲದೆ, ಸ್ವಚ್ಛತೆಯ ಕುರಿತು ಮಾತನಾಡಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.