ಕೂತ್ಕುಂಜ : 70 ಕೆ.ಜಿ.ವಿಭಾಗದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ

Advt_Headding_Middle
Advt_Headding_Middle

ಪ್ರೋ ಕಬಡ್ಡಿ ಆಟಗಾರ ಮಿಥಿನ್ ಗೌಡ ಹಾಗೂ ಕೊಳಲು ವಾದಕ ಪ್ರವೀಣರಿಗೆ ಸನ್ಮಾನ

“ಇಂದು ಅನೇಕ ಬದಲಾವಣೆಗಳೊಂದಿಗೆ ಕಬಡ್ಡಿ ಬೇರೆ ಬೇರೆ ರಾಷ್ಟ್ರದವರು ಕೂಡ ಮೆಚ್ಚಿ ಆಡುತ್ತಿದ್ದಾರೆ. ನಮ್ಮ ಮಣ್ಣಿನ ಆಟ ಕಬಡ್ಡಿ ಬೆಳೆದು ವ್ಯಾಪಿಸುತ್ತಿರುವುದು ಹೆಮ್ಮೆಯ ವಿಚಾರ”.ಎಂದು ಜಿ.ಪಂ.ಸದಸ್ಯ ಎಸ್ ಎನ್ ಮನ್ಮ್ಮಥ ಹೇಳಿದರು.ಅವರು ಫೆ.೨೪.ರಂದು ಶಿವಾಜಿ ಯುವಕ ಮಂಡಲ ಕೂತ್ಕುಂಜ ಇದರ ಆಶ್ರಯದಲ್ಲಿ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಸುಳ್ಯ ಇದರ ಸಹಬಾಗಿತ್ವದಲ್ಲಿ ಕೂತ್ಕುಂಜ ‘ಅಟಲ್ ಜೀ’ಕ್ರೀಡಾಂಗಣದಲ್ಲಿ ಜರುಗಿದ ೭೦ಕೆ.ಜಿ.ವಿಭಾಗದ ಹೊನಲು ಬೆಳಕಿನ ಪುರುಷರ ಮ್ಯಾಟ್ ಕಬಡ್ಡಿ ೨೦೧೯ ಮತ್ತು ಸನ್ಮಾನ ಹಾಗೂ ಸಾಂಸ್ಕೃತಿಕ ಸಂಭ್ರಮವನ್ನು ಉದ್ಘಾಟಿಸಿ ಮಾvನಾಡಿದರು.


“ಪ್ರತಿ ಪಕ್ಷ ಮತ್ತು ವಿರೋಧ ಪಕ್ಷಗಳು ಮೆಚ್ಚಿ ಕೊಂಡ ನಾಯಕ, ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿ.ಅವರ ಹೆಸರನ್ನು ಕ್ರೀಡಾಂಗಣಕ್ಕೆ ನಾಮಕರಣ ಮಾಡಿರುವುದು ಅರ್ಥ ತುಂಬಿದೆ”.ಎಂದು ಅವರು ಹೇಳಿದರು.
ನಿವೃತ್ತ ಯುವಸಬಲಿಕರಣ ಮತ್ತು ಕ್ರೀಡಾಧಿಕಾರಿ ಮಾಧವ ಗೌಡ ಬಿ ಕೆ ಕ್ರೀಡಾಂಗಣ ಉದ್ಘಾಟಿಸಿದರು. ಶಿವಾಜಿ ಯುವಕ ಮಂಡಲದ ಅಧ್ಯಕ್ಷ ರಜತ್ ಚಿದ್ಗಲ್ಲು ಸಭಾಧ್ಯಕ್ಷತೆ ವಹಿಸಿದ್ದರು. ಅಮೆಚೂರು ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಎನ್ ಎ ರಾಮಚಂದ್ರ ರವರು ಪ್ರತಿಭಾನ್ವಿತ ಕೊಳಲು ವಾದಕ ಪ್ರವೀಣ್ ಏನೆಕಲ್ಲು ಅವರನ್ನು ಸನ್ಮಾನಿಸಿದರು. ಪ್ರಗತಿ ಪರ ಕೃಷಿಕ ಶಿವರಾಮಯ್ಯ ಕರ್ಮಾಜೆ ಪ್ರೋ ಕಬಡ್ಡಿ ಆಟಗಾರ ಮಿಥಿನ್ ಗೌಡ ಕಲ್ಲಾಜೆಯವರನ್ನು ಸನ್ಮಾನಿಸಿದರು.ಮುಖ್ಯ ಅತಿಥಿಗಳಾಗಿ ತಾ.ಪಂ.ಸದಸ್ಯ ಅಬ್ದುಲ್ ಗಫೂರ್,ಗ್ರಾ.ಪಂ.ಸದಸ್ಯ ಕಾರ್ಯಪ್ಪ ಗೌಡ ಚಿದ್ಗಲ್ಲು, ಯುವ ಜನ ಸಂಯುಕ್ತ ಮಂಡಳಿ ಅಧ್ಯಕ್ಷ ದಿಲೀಪ್ ಬಾಬ್ಲುಬೆಟ್ಟು, ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ ವಾಸುದೇವ ಮೇಲ್ಪಾಡಿ,ಜನಪ್ರಿಯ ವೈಧ್ಯ ಡಾ.ರಾಮಯ್ಯ ಭಟ್, ದ.ಕ.ಜಿಲ್ಲಾ ಕಬಡ್ಡಿ ನಿರ್ಣಾಯಕರ ಮಂಡಳಿ ಕಾರ್ಯದರ್ಶಿ ಶಿವರಾಮ ಏನೆಕಲ್ಲು,ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಪೂರ್ವಾಧ್ಯಕ್ಷ ಪುಟ್ಟಣ್ಣ ಗೌಡ ಚಿದ್ಗಲ್ಲು, ಪೆರಾಜೆ ಜ್ಯೋತಿ ಪ್ರೌಢ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ದೊಡ್ಡಣ್ಣ,ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಭಾಸ್ಕರ ಗೌಡ ಚಿದ್ಗಲ್ಲು ,ಪ್ರಗತಿ ಪರ ಕೃಷಿಕ ಧರ್ಮಪಾಲ ಗೌಡ ಕಕ್ಯಾನ ಹಾಗೂ ಶಿವಾಜಿ ಯುವಕ ಮಂಡಲದ ಸ್ಥಾಪಕಾಧ್ಯಕ್ಷ, ಪಂಜ.ಸ.ಪ.ಪೂ.ಕಾಲೇಜು ದೈಹಿಕ ಶಿಕ್ಷಣ ಶಿಕ್ಷಕ ಯೋಗೀಶ್ ಚಿದ್ಗಲ್ಲು ,ಯುವಕ ಮಂಡಲದ ಕಾರ‍್ಯದರ್ಶಿ ದೇವಿಪ್ರಸಾದ್ ಕುಳ್ಳಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕಾರ‍್ಯಕ್ರಮದಲ್ಲಿ ಪೂಲ್ವಾಮಾದದಲ್ಲಿ ಉಗ್ರರ ದಾಳಿಯಿಂದ ನಿಧನರಾದ ಯೋಧರಿಗೆ ಮೌನ ಪ್ರಾರ್ಥನೆ ಮೂಲಕ ಶೃದ್ಧಾಂಜಲಿ ಸಲ್ಲಿಸಲಾಯಿತು. ರಚನಾ ಚಿದ್ಗಲ್ಲು ಪ್ರಾರ್ಥಿಸಿದರು.ಜಯರಾಮ ಕಲ್ಲಾಜೆ ಪ್ರಾಸ್ತಾವನೆಗೈದು ಸ್ವಾಗತಿಸಿದರು .ತೀರ್ಥಾನಂದ ಕೊಡೆಂಕಿರಿ ನಿರೂಪಿಸಿದರು.ಚಂದ್ರಶೇಖರ ಇಟ್ಯಡ್ಕ ವಂದಿಸಿದರು.ವಿಖ್ಯಾತ್ ಬಾರ್ಪಣೆ ವೀಕ್ಷಕ ವಿವರಣೆ ನೀಡಿದರು.ಸಭಾ ಕಾರ‍್ಯಕ್ರಮದ ಬಳಿಕ ಪ್ರವೀಣ ಏನೆಕಲ್ಲು ಅವರಿಂದ ಕೊಳಲು ವಾದನ ನಡೆಯಿತು.
ಫಲಿತಾಂಶ :ಚಾಲ್ಕಾರ್ಸ್ ಕಡಬ(ಪ್ರ), ಮಿತ್ತೋಡಿ ಫ್ರೆಂಡ್ಸ್ ಕೊಲ್ಲಮೊಗ್ರ (ದ್ವಿ), ಫ್ರೆಂಡ್ಸ್ ಕೊಲ್ನಾಡ್ ಮುಲ್ಕಿ (ತೃ),ಮಿಥನ ಫ್ರೆಂಡ್ಸ್ ತ್ರಿಪುರ (ಚ) ಸ್ಥಾನಗಳಿಸಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.