ಕೆ.ವಿ.ಜಿ.ಐ.ಪಿ.ಎಸ್ ನಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ವಿದಾಯಕೂಟ

Advt_Headding_Middle
Advt_Headding_Middle

ಸುಳ್ಯದ ಕೆ.ವಿ.ಜಿ.ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ ೧೦ನೇ ತರಗತಿಯ ವಿದ್ಯಾರ್ಥಿಗಳಿಗೆ ವಿದಾಯ ಸಮಾರಂಭವನ್ನು ಮಾ.೧ರಂದು ಏರ್ಪಡಿಸಲಾಗಿತ್ತು. ಶಾಲಾ ಪ್ರಾಚಾರ್ಯರಾದ ಸುನಿಲ್ ಕುಮಾರ್ ಹಾಗೂ ಉಪಪ್ರಾಚಾರ್ಯೆ ಶಿಲ್ಪಾ ಬಿದ್ದಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು. ೧೦ನೇ ತರಗತಿಯ ಎಲ್ಲವಿದ್ಯಾರ್ಥಿಗಳಿಗೂ ದೀಪ ನೀಡಿ ಸ್ವಾಗತಿಸಲಾಯಿತು. ತಮ್ಮ ಶಾಲಾ ಅನುಭವಗಳನ್ನು ಸಾಗರಿ ಪಿ ಕಲ್ಲಾಜೆ, ಪ್ರೇಕ್ಷಾ ಪೂವಮ್ಮ, ಅಖಿಲ್ ಹಾಗೂ ತನ್ಮಯ್ ಹಂಚಿಕೊಂಡರು. ಶಿಕ್ಷಕರಾದ ಮಂಜುನಾಥ, ಗೀತಾಂಜಲಿ, ಮೋನಾ ಮಬೆನ್ ಹಾಗೂ ಶಿಲ್ಪಾ ಬಿದ್ದಪ್ಪ ಮತ್ತು ಪ್ರಾಚಾರ್ಯರಾದ ಸುನಿಲ್ ಕುಮಾರ್ ವಿದ್ಯಾರ್ಥಿಗಳಿಗೆ ಶುಭ ಕೋರಿದರು. ಹತ್ತನೇ ತರಗತಿಯ ಎಲ್ಲ ವಿದ್ಯಾರ್ಥಿಗಳಿಗೂ ನೆನಪಿನ ಕಾಣಿಕೆಯನ್ನು ನೀಡಲಾಯಿತು. ಎಲ್ಲ ಬೋಧಕ ಬೋಧಕೇತರ ವರ್ಗದವರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಎಲ್ಲರಿಗೂ ಲಘು ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ೯ನೇ ತರಗತಿಯ ವಿದ್ಯಾರ್ಥಿಗಳು ಶಿಕ್ಷಕಿ ಸುಜಾತಾ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.