ಆಲೆಟ್ಟಿ ಶತಮಾನೋತ್ಸವ ಪೂರ್ವಭಾವಿ ಸಭೆ

Advt_Headding_Middle
Advt_Headding_Middle

ಆಲೆಟ್ಟಿ ಪ್ರಾ. ಕೃ.ಪ.ಸ ಸಂಘದ ಶತಮಾನೋತ್ಸವ ಸಮಾರಂಭವು ಮಾ.6 ರಂದು ನಡೆಯಲಿದ್ದು ಅದರ ಪೂರ್ವಭಾವಿ ಸಭೆಯು ಮಾ.2 ರಂದು ಸಂಘದ ಸಭಾಭವನದಲ್ಲಿ ಅಧ್ಯಕ್ಷ ಕೃಪಾಶಂಕರ ತುದಿಯಡ್ಕ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಶತಮಾನೋತ್ಸವ ಕಾರ್ಯಕ್ರಮದ ವಿವಿಧ ಸಮಿತಿಗಳ ಸಂಚಾಲಕರಿಗೆ ಜವಬ್ದಾರಿಯನ್ನು ಹಂಚಿಕೊಡಲಾಯಿತು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಮಾಧವ ಗೌಡ ಕೋಲ್ಚಾರು, ಸಿ.ಇ.ಒ.ದಿನಕರ ಎ., ಮಾಜಿ ಅಧ್ಯಕ್ಷ ಶ್ರೀಪತಿ ಭಟ್ ಮಜಿಗುಂಡಿ, ತೇಜಕುಮಾರ್ ಬಡ್ಡಡ್ಕ, ಜಯಪ್ರಕಾಶ್ ಕುಂಚಡ್ಕ, ಯತಿರಾಜ್ ಭೂತಕಲ್ಲು, ನಿರ್ದೇಶಕರಾದ ಸುದರ್ಶನ ಪಾತಿಕಲ್ಲು, ಶಿವಾನಂದ ರಂಗತ್ತಮಲೆ, ಎನ್.ಎ.ಜಯರಾಮ, ಕುಸುಮಾವತಿ ಕುಂಚಡ್ಕ, ಪಂ.ಮಾಜಿ ಅಧ್ಯಕ್ಷ ಧನಂಜಯ ಕುಂಚಡ್ಕ, ನಿವೃತ್ತ ಸಿ.ಇ.ಒ.ರತ್ನಾಕರ ಗೌಡ ಕುಡೆಕಲ್ಲು ಹಾಗೂ ವಿದ್ಯಾಧರ ಕುಡೆಕಲ್ಲು, ಶ್ರೀನಾಥ್ ಆಲೆಟ್ಟಿ, ಶಿವಪ್ರಸಾದ್ ಆಲೆಟ್ಟಿ, ಸಿಬ್ಬಂದಿಗಳಾದ ಯೊಗೀಶರಾಮ ಆಲೆಟ್ಟಿ, ಪೂವಯ್ಯ ಗೌಡ ಕುಂಚಡ್ಕ, ಆನಂದ ಬಿಲ್ಲರಮಜಲು, ಪ್ರವೀಣ್ ಆಲೆಟ್ಟಿ, ವೆಂಕಟ್ರಮಣ ದೋಣಿಮೂಲೆ, ಶಕುಂತಳಾ ಉಬರಡ್ಕ ಮಿತ್ತೂರು, ರೇಖಾಶಾಲಿನಿ ಕುಂಚಡ್ಕ,ಬಿಪಿನ್ ಕಲ್ಲೆಂಬಿ, ಪ್ರೇರಕಿ ಸಂಧ್ಯಾ ಮಂಡೆಕೋಲು ಮತ್ತು ಸ್ಥಳೀಯರು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.