Breaking News

ರಂಗಮನೆಯಲ್ಲಿ ವಿಜೃಂಭಿಸಿದ ಯಕ್ಷಸಂಭ್ರಮ 2019

Advt_Headding_Middle
Advt_Headding_Middle

 

ಸುಳ್ಯದ ಸುಜನಾ ಯಕ್ಷಗಾನ ಅಧ್ಯಯನ ಕೇಂದ್ರ ರಂಗಮನೆ ಇದರ ಆಶ್ರಯದಲ್ಲಿ ಯಕ್ಷಸಂಭ್ರಮ ೨೦೧೯ ಮಾ.೨ ರಂದು ಸುಳ್ಯದ ಹಳೆಗೇಟಿನ ರಂಗಮನೆಯಲ್ಲಿ ನಡೆಯಿತು.

ಸಂಜೆ ಸಿರಿ ಚಂದನ ಕನ್ನಡ ಯುವ ಬಳಗ ಕಾಸರಗೋಡು ಇವರಿಂದ ದಿವಾಣ ಶಿವಶಂಕರ ಭಟ್ ನಿರ್ದೇಶನದ ವಾಲಿ ಮೋಕ್ಷ ಯಕ್ಷಗಾನ ತಾಳಮದ್ದಳೆ ನಡೆಯಿತು.

ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ಪ್ರತಿಭಾ ವಿದ್ಯಾಲಯದ ಯಕ್ಷಗಾನ ಕಲಾವಿದರಾದ ವೆಂಕಟ್ರಮಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಜಬ್ಬಾರ್ ಸುಮೊ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇವರನ್ನು ರಂಗಮನೆ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭ ವೇದಿಕೆಯಲ್ಲಿ ಸುಜನಾ ಸುಳ್ಯ, ರಂಗಮನೆ ರೂವಾರಿ ಜೀವನ್ ರಾಂ ಸುಳ್ಯ, ಸಂಚಾಲಕರಾದ ಡಾ ಸುಂದರ ಕೇನಾಜೆ ಉಪಸ್ಥಿತರಿದ್ದರು. ವ್ಯಂಗ್ಯ ಚಿತ್ರಕಾರ ದಿನೇಶ್ ಕುಕ್ಕುಜಡ್ಕ ಸ್ವಾಗತಿಸಿ,ಶ್ರೀಮತಿ ಉಷಾ ವಂದಿಸಿದರು.ಸುಮಲತಾ ಕಾರ್ಯಕ್ರಮ ನಿರೂಪಿಸಿದರು.

ನಂತರ ಸುಜನಾ ಯಕ್ಷಗಾನ ಅಧ್ಯಯನ ಕೇಂದ್ರ ರಂಗಮನೆ ವಿದ್ಯಾರ್ಥಿಗಳಿಂದ ಲಕ್ಷ್ಮೀಶ ರೈ ಬೆಳ್ಳಾರೆ ನಿರ್ದೇಶನದ ಸುದರ್ಶನ ವಿಜಯ ಯಕ್ಷಗಾನ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.