ಧರ್ಮ ಸಂಘರ್ಷದಿಂದ ದೇಶಕ್ಕೆಹಾಳು : ಪ್ರೋ.ಅನೀಸ್ ಕೌಸರಿ

Advt_Headding_Middle
Advt_Headding_Middle


ಭಾರತ ದೇಶದಲ್ಲಿರುವ ಪ್ರತಿ ಜೀವಿಗೆ ಅದರ ಸೌಂದರ್ಯವನ್ನು ಹೊಂದಿರುವಾಗ ಧರ್ಮದಲ್ಲಿ ಭೇದ ಭಾವದ ದ್ವೇಷ ಬಿತ್ತಿ ದೇಶವನ್ನು ಹಾಳುಮಾಡುವ ಕೃತ್ಯ ಗೆ ಮಾರುಹೋಗಬಾರದು.

ದೇಶದಲ್ಲಿ ಧರ್ಮ ಸಂಘರ್ಷದಿಂದ ದೇಶಕ್ಕೆ ಹಾಳು ಎಂದು ಕರ್ನಾಟಕ ರಾಜ್ಯ ಎಸ್ ಕೆ ಎಸ್ ಎಸ್ ಎಫ್ ರಾಜ್ಯಾಧ್ಯಕ್ಷ ಪ್ರೋ ಅನೀಸ್ ಕೌಸರಿ ಹೇಳಿದರು. ಅವರು ಪೇರಡ್ಕ ವಲಿಯುಲ್ಲಾಹಿ ದರ್ಗಾ ಶರೀಫ್ ಊರುಸ್ ಕಾರ್ಯಕ್ರಮದ ಸೌಹಾರ್ದ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದರು .ಎಮ್ .ಜೆ.ಎಮ್ ಮಾಜಿ ಅಧ್ಯಕ್ಷ ಇಬ್ರಾಹಿಂ ಮೈಲ್ ಕಲ್ಲು ಅಧ್ಯಕ್ಷ ವಹಿಸಿದ್ದರು. ಪೇರಡ್ಕ ಖತೀಬ್ ಅಶ್ರಫ್ ಫೈಝಿ ದುವಾ ನೇರವೆರಿಸಿದರು.


ಕಲ್ಲು ಗುಂಡಿ ಚರ್ಚ್ ಧರ್ಮ ಗುರುಗಳಾದ ರೆ ಫಾ.ನವೀನ್ ಪ್ರಕಾಶ್ ಪಿಂಟೋ , ಸುಳ್ಯ ತಾಲ್ಲೂಕು ಕಟ್ಟಡ ನಿರ್ಮಾಣ ಸಮಿತಿ ಗೌರವಧ್ಯಕ್ಷ ಕೆ.ಪಿ.ಜೋನಿ , ಹಿರಿಯ ಉಪಾಧ್ಯಕ್ಷ ಫಾರ್ಮೆಡ್ ಗ್ರೂಪ್ ಉಮ್ಮರ್ ಬೀಜದಕಟ್ಟೆ,ಕೆ.ವಿ.ಜಿ ಅಯುರ್ವೇದಿಕ್ ಕಾಲೇಜು ಆಡಳಿತಾಧಿಕಾರಿ ಡಾ.ಲೀಲಾಧರ್ ಸಮಾರಂಭದಲ್ಲಿ ಮಾತನಾಡಿದರು. ಕಾರ್ಯಕ್ರಮ ದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆಯನ್ನು ಮಾಡಿದ ನೂರನಾಲ್ಕು ಬಾರಿ ರಕ್ತದಾನ ಮಾಡಿದ ಸುಧಾಕರ್ ರೈ ನೆಟ್ ಕಾಂ, ಸನ್ನಿಧಿ ಆರ್ಥ್ ಮೂವರ್ಸ್ ಟಿ.ಕೆ.ಹರಿಪ್ರಸಾದ್ ,ಜಮಾ ಅತ್ ಅಧ್ಯಕ್ಷ ಆರೀಫ್ ಟಿ.ಎ,ಕಾರ್ಯದರ್ಶಿ ಉಮ್ಮರ್ ಪಿ.ಕೆ, ಜಮಾಲ್ ಬೆಳ್ಳಾರೆ,ಚಕ್ರಪಾಣಿ ಯು.ಬಿ,ಡಾ.ಲೀಲಾಧರ್, ಮಹಮ್ಮದ್ ಕೆ.ಎಸ್ .ಆರ್ .ಟಿ.ಸಿ ,ನವೀನ್ ಕುಮಾರ್,ರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು . ಮುಖ್ಯ ಆತಿಥಿಯಾಗಿ ತೊಡಿಕಾನ ದೇವಸ್ಥಾನ ವ್ಯವಸ್ಥಾಪನಾ ಅಧ್ಯಕ್ಷ ಕೇಶವ ಕೊಳಲು ಮೂಲೆ,ಸೂರಜ್ ಹೊಸರು,ದಾಮೋದರ ಮಾಸ್ಟರ್ ,ಜಗದೀಶ್ ರೈ,ಇಕ್ಬಾಲ್ ಬಾಳಿಲ,ಮುಸ್ತಫಾ ಬೆಳ್ಳಾರೆ,ಪ್ರಕಾಶ್ ವಿ.ವಿ,ತೀರ್ಥ ರಾಮ ಪರ್ನೋಜಿ,ಲಕ್ಷ್ಮಿ ನಾರಾಯಣ , ಎಮ್ .ಸಿ. ಅಬೂಬಕ್ಕರ್ ,ಝಕರಿಯಾ ದಾರಿಮಿ ಮುಂತಾದವರು ಉಪಸ್ಥಿತರಿದ್ದರು . ಬಹು ಹನೀಫ್ ನಿಝಾಮಿ ಯವರಿಂದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ ನಡೆಯಿತು .ಉರುಸ್ ಸಮಿತಿ ಕಾರ್ಯದರ್ಶಿ ಜಿ.ಕೆ.ಹಮೀದ್ ಸ್ವಾಗತಿಸಿ ,ಸದರ್ ಮುಅಲ್ಲಿಂ ಝಕರಿಯಾ ದಾರಿಮಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.