Breaking News

ಪಂಜ-ಬಳ್ಳಕ-ಗುತ್ತಿಗಾರು ರಸ್ತೆ ನವೀಕರಣಕ್ಕೆ ಶಾಸಕರಿಂದ ಗುದ್ದಲಿ ಪೂಜೆ

Advt_Headding_Middle
Advt_Headding_Middle

 

ಪಂಜ ಬಳ್ಳಕ ಗುತ್ತಿಗಾರು ರಸ್ತೆಯ ನವೀಕರಣ ಯೋಜನೆಗೆ ಶಾಸಕ ಎಸ್ ಅಂಗಾರ ರವರು ಮಾ.2 ರಂದು ಪಂಜದಲ್ಲಿ ಗುದ್ದಲಿ ಪೂಜೆ ನೆರವೇರಿಸಿದರು.


“ಪಂಜ ಬಳ್ಳಕ ಗುತ್ತಿಗಾರು ರಸ್ತೆ ಹದಗೆಟ್ಟಿದ್ದು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಶೀರ್ಘದಲ್ಲಿ ನವೀಕರಣ ಕಾಮಗಾರಿ ಆರಂಭ ಗೊಳ್ಳಲಿದ್ದು .ನಮ್ಮ ಗ್ರಾಮ ನಮ್ಮ ರಸ್ತೆ ,ಮಳೆ ಹಾನಿ ಯೋಜನೆಯನ್ನು ಜೋಡಿಸಿ ಕೊಂಡು ರಸ್ತೆಯ ಅಭಿವೃದ್ಧಿ ಕಾರ‍್ಯಗಳು ಮುಂದುವರಿಯುತ್ತದೆ. ಈ ರಸ್ತೆಯ ಜಳಕದ ಹೊಳೆ ಎಂಬಲ್ಲಿ ಮಳೆಗಾಲ ಹದಗೆಟ್ಟಲ್ಲಿ ಕಾಂಕ್ರೀಟ್ ಕಾಮಗಾರಿ ಆಗಿರುತ್ತದೆ” ಎಂದು ಶಾಸಕ ಎಸ್ ಅಂಗಾರ ವಿವರಿಸಿದರು.
ಈ ಸಂದರ್ಭ ಜಿ.ಪಂ.ಸದಸ್ಯ ಎಸ್ ಎನ್ ಮನ್ಮಥ, ಗ್ರಾ.ಪಂ.ಅಧ್ಯಕ್ಷ ಕಾರ‍್ಯಪ್ಪ ಗೌಡ ಚಿದ್ಗಲ್ಲು,ಎ.ಪಿ.ಎಂ.ಸಿ ಉಪಾಧ್ಯಕ್ಷ ಸಂತೋಷ್ ಜಾಕೆ, ಗ್ರಾ.ಪಂ. ಸದಸ್ಯರಾದ ಲಿಗೋಧರ ಆಚಾರ್ಯ, ಜಗಧೀಶ ಪುರಿಯ, ಚಂದ್ರಾವತಿ ಸಂಪ,ವಿಮಲ ನಾಗತೀರ್ಥ, ಮಂಜುಳಾ ಅತ್ಯಡ್ಕ,ಶಿವರಾಮಯ್ಯ ಕರ್ಮಾಜೆ,ಪಂಜ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಸಿ ಚಂದ್ರಶೇಖರ ಶಾಸ್ತ್ರಿ, ಉಪಾಧ್ಯಕ್ಷ ಲೋಕೇಶ್ ಬರೆಮೇಲು, ವೆಂಕಟೇಶ್ವರ ಜೋಯಿಷ, ಚಿನ್ನಪ್ಪ ಚೊಟ್ಟೆಮಜಲು, ಚೆನ್ನಕೇಶವ ಆಚಾರ್ಯ ,ಸುಬ್ರಾಯ ಭಟ್ ಅಲಕಾ, ಇಲಾಖಾ ಅಧಿಕಾರಿಗಳಾದ ಶ್ರೀನಿವಾಸ ಮೂರ್ತಿ, ಇಂಜಿನಿಯರ್ ಪರಮೇಶ್ವರ ನಾಯಕ್, ಗುತ್ತಿಗೆದಾರ ಸಂಜೀತ್ ಮೊದಲಾದವರು ಉಪಸ್ಥಿತರಿದ್ದರು.ಕಾರ‍್ಯಕ್ರಮದಲ್ಲಿ ಕಾರ್ಯಪ್ಪ ಗೌಡ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.