ಕನಕಮಜಲು: ಕುಸಿದು ಬಿದ್ದು ಮಹಿಳೆ ಮೃತ್ಯು

Advt_Headding_Middle
Advt_Headding_Middle

ಮಹಿಳೆಯೋರ್ವರು ಮನೆಯ ಸಮೀಪ ಕುಸಿದು ಬಿದ್ದು ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ದಾರಿಮಧ್ಯೆ ಮೃತಪಟ್ಟ ಘಟನೆ ಕನಕಮಜಲಿನಲ್ಲಿ ಫೆ.28ರಂದು ಸಂಭವಸಿದೆ.


ಕನಕಮಜಲಿನ ದಿ.ನಾರಾಯಣ ಗೌಡರ ಮಗಳು ಶ್ರೀಮತಿ ಭವಾನಿ ಅವರು ಕುಸಿದು ಬಿದ್ದು ಮೃತಪಟ್ಟ ಮಹಿಳೆ. ಅವರಿಗೆ 63 ವರ್ಷ ವಯಸ್ಸಾಗಿತ್ತು. ಭವಾನಿಯವರು ಮನೆಯ ಸಮೀಪದಲ್ಲಿ ಕುಸಿದು ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ಸೇರಿ ಸುಳ್ಯದ ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮಧ್ಯೆ ಭವಾನಿಯವರು ಮೃತಪಟ್ಟರೆಂದು ತಿಳಿದುಬಂದಿದೆ.

ಮೃತರು ಪತಿ ಕರುಣಾಕರ ಗೌಡ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ಈ ಕುರಿತು ಮೃತರ ಸಹೋದರಿ ರಾಜೀವಿ ಎಂಬವರು ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು ಪೂಲೀಸರು ತನಿಖೆ ನಡೆಸಿ, ಮಹಜರು ನಡೆಸಿ, ಮೃತದೇಹವನ್ನು ಮನೆಯವರಿಗೆ ಹಸ್ತಾಂತರಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.