ಗ್ರಾಮ ಸ್ವರಾಜ್ಯದ ಅನುಷ್ಠಾನಕ್ಕೆ ಗ್ರಾಮಾಭಿವೃದ್ಧಿ ಯೋಜನೆಯ ಕೊಡುಗೆ ಅಗ್ರಗಣ್ಯ : ನಿತ್ಯಾನಂದ ಮುಂಡೋಡಿ

Advt_Headding_Middle


ಗ್ರಾಮಾಭಿವೃದ್ಧಿ ಯೋಜನೆಯು ಗ್ರಾಮೀಣ ಜನತೆಯಲ್ಲಿ ಸ್ವಾವಲಂಬಿ ಜೀವನಕ್ಕೆ ಪ್ರೇರಣೆಯಾಗಿದೆ. ಯೋಜನೆಯು ಜನತೆಯಲ್ಲಿ ಒಗ್ಗಟ್ಟು ಮೂಡಿಸುವಲ್ಲಿ ಅನನ್ಯ ಪಾತ್ರವಹಿಸಿದೆ. ಗ್ರಾಮೀಣ ಜನರಲ್ಲಿ ಚಾಕಚಕ್ಯತೆಯೊಂದಿಗೆ ಉತ್ಕೃಷ್ಠ ಜೀವನ ನಡೆಸಲು ಯೋಜನೆ ತನ್ನದೇ ಆದ ಕೊಡುಗೆ ನೀಡಿದೆ. ಗ್ರಾಮಾಭಿವೃದ್ಧಿ ಯೋಜನೆಯಿಂದ ಗ್ರಾಮ ಸ್ವರಾಜ್ಯ ಅನುಷ್ಠಾನಗೊಂಡು ಗ್ರಾಮೀಣ ಜನರ ಜೀವನಮಟ್ಟ ಉತ್ಕೃಷ್ಠಗೊಂಡಿದೆ ಎಂದು ಶ್ರೇಷ್ಠ ಕೊಡುಗೆ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಹೇಳಿದರು.


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಳ್ಯ, ಪಂಜ ವಲಯ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಸುಬ್ರಹ್ಮಣ್ಯ, ಏನೆಕಲ್ಲು ಇದರ ಸಂಯುಕ್ತ ಆಶ್ರಯದಲ್ಲಿ ಎಸ್‌ಎಸ್‌ಪಿಯು ಕಾಲೇಜಿನ ಬೆಳ್ಳಿಹಬ್ಬ ಸಭಾಂಗಣದಲ್ಲಿ ಆದಿತ್ಯವಾರ ನಡೆದ ಒಕ್ಕೂಟದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಗ್ರಾಮಾಭಿವೃದ್ಧಿ ಯೋಜನೆಯು ಸಮಾನತೆ ಮತ್ತು ಸಮನ್ವಯತೆಗೆ ಪೂರಕವಾಗಿದೆ.ಮಹಿಳಾ ಸಬಲೀಕರಣಕ್ಕೆ ಯೋಜನೆಯು ವಿನೂತನ ವೇದಿಕೆಯನ್ನು ಒದಗಿಸಿಕೊಟ್ಟಿದೆ ಎಂದರು.

ದೇಶಕ್ಕೆ ಉತ್ತಮ ಸಂಘಟನೆ ನೀಡಿದೆ : ರಾಜೇಶ್ ಎನ್.ಎಸ್
ಸಭಾಧ್ಯಕ್ಷತೆ ವಹಿಸಿದ್ದ ಗ್ರಾ.ಪಂ.ಉಪಾಧ್ಯಕ್ಷ ರಾಜೇಶ್ ಎನ್.ಎಸ್ ಮಾತನಾಡಿ,ದೇಶಕ್ಕೆ ಉತ್ತಮ ಸಂಘಟನೆ ನೀಡುವಲ್ಲಿ ಯೋಜನೆಯ ಪಾತ್ರ ಅನನ್ಯ. ಉತ್ತಮ ವ್ಯಕ್ತಿ ಮತ್ತು ಶ್ರೇಷ್ಠ ವ್ಯಕ್ತಿತ್ವವನ್ನು ನಿರ್ಮಿಸುವಲ್ಲಿ ಗ್ರಾಮಾಭಿವೃದ್ಧಿ ಯೋಜನೆ ಶ್ರಮಿಸಿದೆ.ಆರ್ಥಿಕ ಸ್ವಾವಲಂಬನೆಯೊಂದಿಗೆ ಮಹಿಳಾ ಸಬಲೀಕರಣವು ಸಂಘಗಳಿಂದ ಉಂಟಾಗಿದೆ.ಗ್ರಾಮೀಣರಲ್ಲಿ ಕೌಶಲ್ಯತೆಯ ಉದ್ದೀಪನ ಮತ್ತು ಬದುಕಿನ ಮಟ್ಟದ ಉತ್ಕೃಷ್ಠತೆಗೆ ಗ್ರಾಮಾಭಿವೃದ್ಧಿ ಯೋಜನೆಯು ಶ್ರೇಷ್ಠವಾದುದು.ಗ್ರಾಮೀಣ ಜನತೆಯ ಆರ್ಥಿಕ ಸ್ವಾವಲಂಬತೆಗೆ ಪೂರಕ ವಾತಾವರಣವು ಯೋಜನೆಯಿಂದ ನಿರ್ಮಿತವಾಗಿದೆ ಎಂದು ನುಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಚಂದ್ರಶೇಖರ.ಕೆ ನೆಲ್ಯಾಡಿ, ಸುಳ್ಯ ಜನಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷೆ ವಿಮಲಾ ರಂಗಯ್ಯ, ಗ್ರಾ.ಪಂ.ಸದಸ್ಯ ದಿನೇಶ್ ಬಿ.ಎನ್, ಸುಳ್ಯ ಜನಜಾಗೃತಿ ಯೋಜನೆಯ ಕೋಶಾಧಿಕಾರಿ ಶಿವಪ್ರಸಾದ್ ಮಾದನಮನೆ ಮುಖ್ಯಅತಿಥಿಗಳಾಗಿದ್ದರು. ಸುಬ್ರಹ್ಮಣ್ಯ ಒಕ್ಕೂಟದ ನೂತನ ಅಧ್ಯಕ್ಷ ತೇಜಕುಮಾರ್ ಅಗರಿಕಜೆ, ಏನೆಕಲ್ ಒಕ್ಕೂಟದ ನೂತನ ಅಧ್ಯಕ್ಷ ಜಯಪ್ರಕಾಶ್ ನಡ್ಕ, ನಿರ್ಗಮನ ಅಧ್ಯಕ್ಷರಾದ ಗಣೇಶ್ ಹೆಚ್ ಹೊಸೋಳಿಕೆ, ವಿಶ್ವನಾಥ ಕೆಬ್ಬೋಡಿ, ಸೇವಾಪ್ರತಿನಿಧಿ ಹರಿಣಾಕ್ಷಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪದಗ್ರಹಣ:
ಸುಬ್ರಹ್ಮಣ್ಯ ಒಕ್ಕೂಟದ ನೂತನ ಅಧ್ಯಕ್ಷ ತೇಜಕುಮಾರ್ ಅಗರಿಕಜೆ ಹಾಗೂ ಪದಾಧಿಕಾರಿಗಳು ಮತ್ತು ಏನೆಕಲ್ ಒಕ್ಕೂಟದ ನೂತನ ಅಧ್ಯಕ್ಷ ಜಯಪ್ರಕಾಶ್ ನಡ್ಕ ಹಾಗೂ ಪದಾಧಿಕಾರಿಗಳು ಅಧಿಕಾರಿ ಸ್ವೀಕರಿಸಿದರು.ಪದಗ್ರಹಣ ನಿಮಿತ್ತ ಆಯೋಜಿಸಲಾದ ಕ್ರೀಡಾ ಸ್ಪರ್ಧೆಗಳ್ಲಿ ವಿಜೇತರಾದವರಿಗೆ ಸಮಾರಂಭದಲ್ಲಿ ಬಹುಮಾನವಿತರಿಸಲಾಯಿತು.ಆಗಮಿಸಿದ ಗಣ್ಯರಿಗೆ ಮತ್ತುಒಕ್ಕೂಟದ ನಿರ್ಗಮನ ಪದಾಧಿಕಾರಿಗಳಿಗೆ ಸ್ಮರಣಿಕೆಯಾಗಿ ಹೂಕುಂಡಗಳನ್ನು ನೀಡಿರುವುದು ವಿಶೇಷವಾಗಿ ಕಂಡು ಬಂತು. ಏನೆಕಲ್ ಒಕ್ಕೂಟದ ತಾರಾ ಸ್ವಾಗತಿಸಿದರು.ಸೇವಾಪ್ರತಿನಿಧಿ ಹರಿಣಾಕ್ಷಿ ವರದಿ ವಾಚಿಸಿದರು. ಉಪನ್ಯಾಸಕ ರತ್ನಾಕರ ಸುಬ್ರಹ್ಮಣ್ಯ ವಂದಿಸಿದರು. ಮೇಲ್ವಿಚಾರಕಿ ಭಾಗೀರಥಿ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.