Breaking News

ಕನಕಮಜಲು ಗ್ರಾಮದ ಪಲ್ಲತಡ್ಕ ತರವಾಡಿನಲ್ಲಿ ಹರಕೆಯ ನೇಮೋತ್ಸವ

Advt_Headding_Middle
Advt_Headding_Middle

ಕನಕಮಜಲು ಗ್ರಾಮದ ಪಲ್ಲತಡ್ಕ ತರವಾಡು ಮನೆಯಲ್ಲಿ ಕುಟುಂಬಕ್ಕೆ ಸೇರ್ಪಡೆಯ ಪ್ರಯುಕ್ತ ಸೋಣಂಗೇರಿಯ ಕಾಡುತೋಟ ಮನೆಯವರಿಂದ ಹರಕೆಯ ಧರ್ಮದೈವ ಹಾಗೂ ಸಪರಿವಾರ ದೈವಗಳ ನೇಮೋತ್ಸವವು ಫೆ.21 ಮತ್ತು 22ರಂದು ನಡೆಯಿತು.

ಫೆ.21ರಂದು ಸಂಜೆ ದೈವಗಳ ಭಂಡಾರ ತೆಗೆದು ಬಳಿಕ ಕುಳೆಮಾಣಿಗ, ಜಾವತೆ,ಕಲ್ಲುರ್ಟಿ,ಗುಳಿಗ, ಕುಪ್ಪೆ ಪಂಜುರ್ಲಿ, ಅಂಗಾರನ ನೇಮ ನಡೆದು, ಫೆ.22ರಂದು ಬೆಳಗ್ಗೆ ಧರ್ಮದೈವ ಪಿಲಿಚಾಮುಂಡಿ ನೇಮ ನಡೆಯಿತು.

ನಂತರ ಪ್ರಸಾದ ವಿತರಣೆ ನಡೆದು, ವರ್ಣಾರ ಪಂಜುರ್ಲಿ ನೇಮ ನಡೆಯಿತು. ಈ ಸಂದರ್ಭದಲ್ಲಿ ಪಲ್ಲತಡ್ಕ ಕುಟುಂಬದ ಸಮಸ್ತರು ಸೇರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.