Breaking News

ಗುತ್ತಿಗಾರು : ಮುತ್ತಪ್ಪ ತಿರುವಪ್ಪ ದೈವದ ನೇಮೋತ್ಸವ

Advt_Headding_Middle
Advt_Headding_Middle

ಶ್ರೀ ಮುತ್ತಪ್ಪ ದೈವಸ್ಥಾನ ಮುತ್ತಪ್ಪನಗರ ಗುತ್ತಿಗಾರು ಇದರ ಶ್ರೀ ಮುತ್ತಪ್ಪ ತಿರುವಪ್ಪ ದೈವದ ನೇಮೋತ್ಸವ ಮಾ.೫ ಮತ್ತು ಮಾ.೬ ರಂದು ನಡೆಯಿತು. ಮಾ.೫ ಬೆಳಗ್ಗೆ ಗಣಪತಿ ಹೋಮ ನಡೆಯಿತು.

ಸಂಜೆ ಶ್ರೀ ದೈವಕ್ಕೆ ಪೈಂಗುತ್ತಿ, ನಡೆದು, ಶ್ರೀ ಮುತ್ತಪ್ಪ ದೈವದ ನೇಮ ನಡೆದು ಪ್ರಸಾದ ವಿತರಣೆ ನಡೆಯಿತು. ರಾತ್ರಿ ಅನ್ನಸಂತರ್ಪಣೆ ಬಳಿಕ ಶ್ರೀ ಮುತ್ತಪ್ಪ ದೈವದ ಪೂರ್ವಜನ್ಮದ ಕಳಿಕ್ಕಾಪಾಟ್ ನಡೆಯಿತು.  ಆ ಬಳಿಕ ಶ್ರೀ ಭಗವತೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಮಂಗಳೂರು ಇವರಿಂದ ಪುಣ್ಣಮೆದ ಪೊಣ್ಣು ಎಂಬ ಯಕ್ಷಗಾನ ನಡೆಯಿತು. ಮಾ.೬ ರ ಬೆಳಗ್ಗೆ ಶ್ರೀ ಮುತ್ತಪ್ಪ ತಿರುವಪ್ಪ ದೈವದ ನೇಮ ನಡೆದು ಪ್ರಸಾದ ವಿತರಣೆ ನಡೆದು ಪೈಂಗುತ್ತಿ ವೆಳ್ಳಾಟಂ ನಡೆಯಿತು. ಕಾರ್ಯಕ್ರಮ ಯಶಸ್ವಿಯಲ್ಲಿ ಆಡಳಿತ ಸಮಿತಿಯ ಆಡಳಿತ ಮೊಕೇಸರ ವೆಂಕಟ್ ವಳಲಂಬೆ, ಕಾರ್ಯದರ್ಶಿ ಮರಿಯಪ್ಪ ಮಾವಜಿ, ಪ್ರಧಾನ ಅರ್ಚಕ ಮೋಹನ್ ಕಡ್ತಲ್ ಕಜೆ, ಆಡಳಿತ ಸಮಿತಿಯ ಶೇಖರ್ ಪಿ ಗುತ್ತಿಗಾರು, ಬಾಲಕೃಷ್ಣ ಗೌಡ ಚಿಕ್ಮುಳಿ, ಚಂದ್ರಶೇಖರ ಕಂದಡ್ಕ, ಹರಿಯಪ್ಪ ಮುತ್ಲಾಜೆ, ಡಿ.ಎಂ ರಾಮಣ್ಣಗೌಡ, ಭವಾನಿ ಶಂಕರ ಅಡ್ಡನಪಾರೆ, ದಯಾನಂದ ಮುತ್ಲಾಜೆ, ವೇಣುಗೋಪಾಲ ಬೊಳ್ಳೂರು ಪೈಕ, ಎ.ಬಿ ಮಾಧವ ಅಡ್ಕದಮನೆ, ರಾಧಾಕೃಷ್ಣ ತುಪ್ಪದಮನೆ ಹಾಗೂ ಊರ ಹತ್ತು ಸಮಸ್ತರು ಸಹಕರಿಸಿದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.