ಸುಬ್ರಹ್ಮಣ್ಯ ಬಂದ್‌ಗೆ ಅವಕಾಶ ನೀಡದಂತೆ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ರಿಟ್ -ಮಧ್ಯ ಪ್ರವೇಶಿಸಲು ಹೈಕೋರ್ಟ್ ನಿರಾಕರಣೆ: ಸೂಕ್ತ ಕ್ರಮಕ್ಕೆ ಪೊಲೀಸರಿಗೆ ನಿರ್ದೇಶನ

Advt_Headding_Middle
Advt_Headding_Middle

ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನವನ್ನು ಸಂಪುಟ ನರಸಿಂಹ ಸ್ವಾಮಿ ಮಠಕ್ಕೆ ಹಸ್ತಾಂತರಿಸುವಂತೆ ಶ್ರೀವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ಲಾಯರ್ ನೊಟೀಸ್ ನೀಡಿದ್ದರ ವಿರುದ್ಧ ಮಾ.೭ರಂದು ನಡೆಸಲುದ್ದೇಶಿಸಲಾಗಿರುವ ಸುಬ್ರಹ್ಮಣ್ಯ ಬಂದ್‌ಗೆ ಅವಕಾಶ ನೀಡದಂತೆ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿಯವರು ರಾಜ್ಯ ಹೈಕೋರ್ಟ್‌ಗೆ ರಿಟ್ ಸಲ್ಲಿಸಿದ್ದಾರೆ.ರಿಟ್ ಅರ್ಜಿಯ ವಿಚಾರಣೆಗೆ ಸ್ವೀಕರಿಸಿದ ಹೈಕೋರ್ಟ್ ಈ ವಿಚಾರದಲ್ಲಿ ಯಾವುದೇ ಅಭಿಪ್ರಾಯ ನೀಡಲು ನಿರಾಕರಿಸಿದೆ.
ಮಾ.೭ರಂದು ಇಲ್ಲವೇ ಇತರ ದಿನಗಳಲ್ಲಿ ಬಂದ್ ನಡೆಸಲು ಅವಕಾಶ ನೀಡಬಾರದು ಎಂದು ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ಹೈಕೋರ್ಟ್ ರಿಟ್ ಅರ್ಜಿ ಸಲ್ಲಿಸಿದ್ದು ರಾಜ್ಯ ಗೃಹ ಇಲಾಖೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಸುಳ್ಯ ತಾಲೂಕು ಸ್ಟೇಷನ್ ಹೌಸ್ ಆಫೀಸರ್ ಅವರನ್ನು ಪ್ರತಿವಾದಿಗಳಾಗಿ ಕಾಣಿಸಲಾಗಿದೆ.ಈ ಸಂಬಂಧ ಮಾ.5ರಂದು ಸುಳ್ಯ ತಾಲೂಕು ಸ್ಟೇಷನ್ ಹೌಸ್ ಆಫೀಸರ್ ಅವರಿಗೆ ದೂರು ನೀಡಲಾಗಿದೆ ಎಂದು ಅರ್ಜಿದಾರ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಪರ ವಕೀಲ ಉದಯಪ್ರಕಾಶ್ ಮುಳಿಯ ಅವರು ಹೈಕೋರ್ಟ್ ಗಮನ ಸೆಳೆದಿದ್ದರು.ಸ್ಟೇಷನ್ ಹೌಸ್ ಆಫೀಸರ್ ಅವರಿಗೆ ದೂರು ನೀಡಿದ್ದೇ ಆದಲ್ಲಿ ಇಲಾಖೆ ಸೂಕ್ತ ಕಾನೂನು ಕ್ರಮಕೈಗೊಳ್ಳಲಿದೆ ಎಂದು ಪ್ರತಿವಾದಿಗಳ ಪರ ಹೆಚ್ಚುವರಿ ಸರಕಾರಿ ವಕೀಲ ವಿಜಯ್ ಕುಮಾರ್ ಪಾಟೀಲ್ ಅವರು ವಾದಿಸಿದ್ದರು.ವಾದ ಪ್ರತಿವಾದಗಳನ್ನು ಆಲಿಸಿದ ಹೈಕೋರ್ಟ್ ತಾನು ಈ ವಿಚಾರದಲ್ಲಿ ಯಾವುದೇ ಅಭಿಪ್ರಾಯ ನೀಡುವುದಿಲ್ಲ.ಒಂದು ವೇಳೆ ಅರ್ಜಿದಾರರು ಈಗಾಗಲೇ ದೂರು ನೀಡಿದ್ದಲ್ಲಿ ಈ ಸಂಬಂಧ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಸುಳ್ಯ ತಾಲೂಕು ಸ್ಟೇಷನ್ ಹೌಸ್ ಆಫೀಸರ್ ಅವರಿಗೆ ನಿರ್ದೇಶನ ನೀಡಿ ರಿಟ್ ಅರ್ಜಿಯನ್ನು ವಿಲೇಗೊಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.