Breaking News

ಕೊಡಗು ಸಂಪಾಜೆ ಕಂದಾಯ ಇಲಾಖೆಗೆ ಮುರುಕು ಕಛೇರಿ, ಅಧಿಕಾರಿಗಳಿಲ್ಲದೆ ಪರದಾಟ: ಮುಖ್ಯಮಂತ್ರಿಗಳಿಗೆ ಮನವಿ ನೀಡಿದರು ಸಮಸ್ಯೆಗೆ ಮುಕ್ತಿಯಿಲ್ಲ

Advt_Headding_Middle
Advt_Headding_Middle

ಕೊಡಗು ಸಂಪಾಜೆ ಗ್ರಾಮದ ಕಂದಾಯ ಇಲಾಖೆಯು ಕೊ.ಸಂಪಾಜೆ, ಚೆಂಬು, ಪೆರಾಜೆ, ಮದೆನಾಡು, ಬೆಟ್ಟತೂರು ಗ್ರಾ.ಪಂ.ಗಳನ್ನು ಹೊಂದಿದ್ದು ಎಲ್ಲಾ ರೈತರ ಸರಕಾರಿ ಕೆಲಸಗಳು ಸಂಪಾಜೆ ಹೋಬಳಿ ಕಚೇರಿಯಲ್ಲಿ ನಡೆಯುತ್ತದೆ. ಆದರೆ ಸಂಪಾಜೆ ಕಂದಾಯ ಇಲಾಖೆಯಲ್ಲಿ ಉಪತಹಶೀಲ್ದಾರರ ನಾಮಫಲಕ ಮಾತ್ರವಿದ್ದು, ಎರಡೂವರೆ ವರ್ಷದಿಂದ ಈ ಕಚೇರಿಗೆ ಉಪತಹಶೀಲ್ದಾರರು ಬರುವುದಿಲ್ಲ. ಸುಮಾರು ೩ ತಿಂಗಳಿನಿಂದ ಆರ್.ಐ.ಯವರು ಕಛೇರಿಯಲ್ಲಿ ಲಭ್ಯರಿಲ್ಲ. ಗ್ರಾಮಕರಣೀಕರು ಬಂದು ಹೋಗುತ್ತಾರೆ ಹೊರತು ಜನರ ಸಮಸ್ಯೆಗಳಿಗೆ ಯಾವುದೇ ಸ್ಪಂದನೆ ನೀಡುತ್ತಿಲ್ಲ.
ದೂರದ ರೈತರು ಕಚೇರಿಯಲ್ಲಿ ಬಂದು ಕಾದು ಕಾದು ವಾಪಸ್ ಮನೆಗೆ ಹೋಗುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ವಿ.ಎ.ಯವರು ಕಚೇರಿಯಲ್ಲಿ ಇದ್ದರು ನೆಟ್ ಸಮಸ್ಯೆಯಿಂದಾಗಿ ರೈತರು ಕಂಗೆಟ್ಟಿದ್ದಾರೆ, ಮೇಲಾಧಿಕಾರಿಗಳಿಗೆ, ಮುಖ್ಯಮಂತ್ರಿಗಳಿಗೆ ಪದೇ ಪದೇ ಈ ಸಮಸ್ಯೆ ಬಗ್ಗೆ ಮನವಿಯನ್ನು ನೀಡಿದರು ಯಾವುದೇ ಪ್ರಯೋಜನವಿಲ್ಲ.
ಇತ್ತೀಚೆಗೆ ಪ್ರಕಟಣೆಗೊಂಡ ಕೊಳೆರೋಗ ಪರಿಹಾರದಿಂದ ಕೊಡಗು ಸಂಪಾಜೆ ಗ್ರಾಮಸ್ಥರು ವಂಚಿತರಾಗಿರುತ್ತಾರೆ. ಅಲ್ಲದೆ ಕಚೇರಿಯು ಮಳೆಗಾಲದಲ್ಲಿ ಕೊಡೆ ಹಿಡಿದು ಕರ್ತವ್ಯ ನಿರ್ವಹಿಸಬೇಕಾದ ಪರಿಸ್ಥಿತಿ ಒದಗಿ ಬಂದಿದೆ. ಈಗಾಗಲೇ ಪ್ರಕೃತಿ ವಿಕೋಪದಿಂದ ಕಂಗೆಟ್ಟ ಜನರಿಗೆ ಕಚೇರಿಯಲ್ಲಿ ಸಿಗುವ ಸೌಲಭ್ಯವನ್ನು ಪಡೆಯುವಲ್ಲಿ ವಂಚಿತರಾಗಿರುತ್ತಾರೆ. ಸಂಬಂಧಪಟ್ಟವರು ಈ ಕಡೆ ಗಮನ ಹರಿಸಿ ಸಮಸ್ಯೆ ಬಗೆಹರಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.