Breaking News

ಮಠದ ಕಟ್ಟಡದಲ್ಲಿ ಇರುವ ಅಂಗಡಿಗಳನ್ನು ಹೊರತುಪಡಿಸಿ ಸುಬ್ರಹ್ಮಣ್ಯ ಪೂರ್ಣ ಬಂದ್

Advt_Headding_Middle
Advt_Headding_Middle


ಕುಕ್ಕೆ ಸುಬ್ರಹ್ಮಣ್ಯ ದೇವಾಲಯವನ್ನು ಸುಬ್ರಹ್ಮಣ್ಯದಲ್ಲಿರುವ ಸಂಪುಟ ನರಸಿಂಹ ಸ್ವಾಮಿ ಮಠಕ್ಕೆ ಬಿಟ್ಟು ಕೊಡಬೇಕೆಂದು ಲಾಯರ್ ನೋಟಿಸ್ ಕೊಟ್ಟಿರುವ ಮಠದ ಸ್ವಾಮೀಜಿ ವಿದ್ಯಾಪ್ರಸನ್ನ ಸ್ವಾಮೀಜಿಯವರ ನಡೆಯನ್ನು ಖಂಡಿಸಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಹಿತರಕ್ಷಣಾ ವೇದಿಕೆಯವರು ಕರೆ ನೀಡಿದ ಸುಬ್ರಹ್ಮಣ್ಯ ಬಂದ್ ಗೆ ಮಠದ ಕಟ್ಟಡ ಹೊರತುಪಡಿಸಿ ಇತರ ವ್ಯಾಪಾರಿಗಳಿಂದ ಪೂರ್ಣ ಬೆಂಬಲ ವ್ಯಕ್ತವಾಗಿದೆ.


ದೇವಸ್ಥಾನವನ್ನು ನರಸಿಂಹಮಠಕ್ಕೆ ಬಿಟ್ಟುಕೊಡಬೇಕೆಂದು ಮಠದ ಸ್ವಾಮೀಜಿಯವರ ಪರವಾಗಿ ಬೆಂಗಳೂರಿನಲ್ಲಿರುವ ವಕೀಲ ಉದಯಪ್ರಕಾಶ ಮುಳಿಯ ಧಾರ್ಮಿಕ ದತ್ತಿ ಇಲಾಖೆಗೆ ನೋಟಿಸ್ ನೀಡಿದ್ದರು. ಇದರ ವಿರುದ್ದ ಸುಬ್ರಹ್ಮಣ್ಯದಲ್ಲಿ ಮತ್ತು ದೇವಳದ ಭಕ್ತಾದಿಗಳಲ್ಲಿ ಅಸಮಾಧಾನದ ಅಲೆ ಸೃಷ್ಟಿಯಾಗಿತ್ತು. ದೇವಸ್ಥಾನದ ಹಿತ ರಕ್ಷಣಾ ವೇದಿಕೆಯಿಂದ ಸ್ವಾಮೀಜಿಯವರ ನಡೆಯ ವಿರುಧ್ದ ಪ್ರತಿಭಟನೆಗಾಗಿ ಸುಬ್ರಹ್ಮಣ್ಯ ಬಂದ್ ಗೆ ಕರೆಕೊಡಲಾಯಿತು. ಈ ಹಿನ್ನಲೆಯಲ್ಲಿ ಇಂದು ಮುಂಜಾನೆಯಿಂದಲೂ ಸುಬ್ರಹ್ಮಣ್ಯ ದ ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದ್ ಅಚರಿಸಿವೆ. ಆದರೆ ಸುಬ್ರಹ್ಮಣ್ಯದ ನರಸಿಂಹ ಮಠದ ಒಡತನದಲ್ಲಿ ಬಾಡಿಗೆಗೆ ಇರುವ ಹೋಟೆಲ್ ಮತ್ತು ಅಂಗಡಿಗಳು ತೆರೆದಿವೆ. ಇಂದು ಸಂಜೆ ಹಿತರಕ್ಷಣಾ ವೇದಿಕೆ ಆಶ್ರಯದಲ್ಲಿ ಪ್ರತಿಭಟನಾ ಮೆರವಣಿಗೆ ಮತ್ತು ಪ್ರತಿಭಟನಾ ಸಭೆ ದೇವಸ್ಥಾನದ ಎದುರು ಭಾಗದಲ್ಲಿ ಆಯೋಜಿಸಲ್ಪಟ್ಟಿದೆ.


ಬಂದ್ ಕರೆ ವಿರುದ್ದ ಸ್ವಾಮೀಜಿ ಕೋರ್ಟ್‌ಗೆ
ತಮ್ಮ ವಿರುದ್ದ ಕರೆಕೊಡಲ್ಪಟ್ಟಿರುವ ಮಾ.೭ರ ಬಂದ್ ಗೆ ಅನುಮತಿ ನಿರಾಕರಸಬೇಕೆಂದು ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಆದರೆ ಹೈಕೋರ್ಟ್ ತಡೆಯಾಜ್ಞೆ ನೀಡಲು ನಿರಾಕರಿಸಿ, ಬಲಾತ್ಕಾರದ ಬಂದ್ ನಡೆಯದಂತೆ ನೋಡಿಕೊಳ್ಳಬೇಕೆಂದು ಪೋಲೀಸರಿಗೆ ನಿರ್ದೇಶನ ನೀಡಿದೆ. ಇಂದು ಇದುವರೆಗೆ ಸುಬ್ರಹ್ಮಣ್ಯದಲ್ಲಿ ಅಹಿತಕರ ಘಟನೆ ನಡೆದ ವರದಿಯಾಗಿಲ್ಲ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.