ಕೆಪಿಸಿಸಿ ಕಾರ್ಯದರ್ಶಿ ಟಿ ಎಂ ಶಹೀದ್ ರವರಿಗೆ ಕೊಡಗು ವಿರಾಜಪೇಟೆ ಕ್ಷೇತ್ರದ ಉಸ್ತುವಾರಿ

Advt_Headding_Middle
Advt_Headding_Middle

ಕೆಪಿಸಿಸಿ ಕಾರ್ಯದರ್ಶಿ ಟಿ.ಎಂ ಶಹೀದ್ ರವರನ್ನು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ವಿರಾಜಪೇಟೆ ಬ್ಲಾಕ್ , ನಾಪೊಕ್ಲು ಬ್ಲಾಕ್ ಮತ್ತು ಪೊನ್ನಂಪೇಟೆ ಬ್ಲಾಕ್ ಗೆ ಉಸ್ತುವಾರಿ ಕಾರ್ಯದರ್ಶಿಯಾಗಿ ಕೆಪಿಸಿಸಿ ಅಧ್ಯಕ್ಷರಾದ ದಿನೇಶ ಗುಂಡೂರಾವ್ ನೇಮಕಗೊಳಿಸಿರುತ್ತಾರೆ. ಪ್ರಸಿದ್ಧ ತೆಕ್ಕಿಲ್ ಮನೆತನದ ಟಿ.ಎಂ ಶಹೀದ್ ರವರ ಕುಟುಂಬ ಕಾಂಗ್ರೆಸ್ ಹಿನ್ನಲೆಯುಳ್ಳ ಕುಟುಂಬವಾಗಿದ್ದು ಇವರ ಮುತ್ತಜ್ಜ ದಿವಂಗತ ಹಾಜಿ ಅಹಮ್ಮದ್ ಕುಂಞ ಪಠೇಲ್ ಅರಂತೋಡಿನ ಪಠೇಲರಾಗಿದ್ದರು. ವಿದ್ಯಾರ್ಥಿ ದೆಸೆಯಲ್ಲಿ ರಾಜಕೀಯಕ್ಕೆ ದುಮುಕಿದ ಟಿ.ಎಂ. ಶಹೀದ್ ರವರು 1988 ರಿಂದ ನೆಹರು ಮೆಮೋರಿಯಲ್ ಕಾಲೇಜಿನ NSUI  ಘಟಕದ ಪ್ರಧಾನ ಕಾರ್ಯದರ್ಶಿಯಾಗಿ 1989ರಿಂದ 90ರವರೆಗೆ ಸುಳ್ಯ ತಾಲೂಕು NSUI ನ ಪ್ರಧಾನ ಕಾರ್ಯದರ್ಶಿಯಾಗಿ,1990ರಿಂದ 1992 ರವರೆಗೆ ಜಿಲ್ಲಾ NSUI  ಘಟಕದ ಪ್ರಧಾನ ಕಾರ್ಯದರ್ಶಿಯಾಗಿ,1992-98ರವರೆಗೆ ರಾಜ್ಯ NSUI ಪ್ರಧಾನ ಕಾರ್ಯದರ್ಶಿಯಾಗಿ, 1998-20110 ರವರೆಗೆ ರಾಜ್ಯ ಯುವ ಕಾಂಗ್ರೇಸ್ ನ ಪ್ರಧಾನ ಕಾರ್ಯದರ್ಶಿಯಾಗಿ 2010-15 ರವರೆಗೆ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುತ್ತಾರೆ.1993-94 ರಲ್ಲಿ ಎರಡು ಬಾರಿ ಕೆ.ವಿ.ಜಿ. ಕಾನೂನು ಕಾಲೇಜಿನ ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸೆನೆಟ್ ಆಯ್ಕೆ ಸಮಿತಿ ಸದಸ್ಯರಾಗಿ 1994-95 ರಲ್ಲಿ ಕೆ.ವಿ.ಜಿ. ಕಾನೂನು ಕಾಲೇಜಿನ ವಿದ್ಯಾರ್ಥಿ ಯೂನಿಯನ್ ನ ಉಪಾಧ್ಯಕ್ಷರಾಗಿ 1995ರಲ್ಲಿ ಮಂಗಳೂರು ವಿಶ್ವ
ವಿದ್ಯಾನಿಲಯ ಸರ್ವ ಕಾಲೇಜು ವಿದ್ಯಾರ್ಥಿ ಯೂನಿಯನ್ ಉಪಾಧ್ಯಕ್ಷರಾಗಿ ಹಾಗೂ 1995-2000ರಲ್ಲಿ ರಾಜೀವ ಗಾಂಧಿ ಯುವಶಕ್ತಿ ಮತ್ತು ಗ್ರಾಮೀಣಾಭಿವೃದ್ದಿ ಸಂಘಟನೆಯ ಜಿಲ್ಲಾಧ್ಯಕ್ಷರಾಗಿ ಸೇವೆಸಲ್ಲಿಸಿರುತ್ತಾರೆ.
ಸುಳ್ಯ ತಾಲೂಕು ಅಲ್ಪಸಂಖ್ಯಾತರ ಸಹಕಾರಿ ಸಂಘದ ಪ್ರಪ್ರಥಮ ಚುನಾಯಿತ ಅಧ್ಯಕ್ಷರಾಗಿ ಸತತ ೩ ಬಾರಿ ಅಧ್ಯಕ್ಷರಾಗಿ, 201ರಿಂದ2006ರವರೆಗೆ ರಾಜ್ಯ ಕಾರ್ಮಿಕ ಕಲ್ಯಾಣ ಮಂಡಳಿಯ ಸದಸ್ಯರಾಗಿ, ರಾಜ್ಯ ವಕ್ಪ್ ಕೌನ್ಸಿಲ್ ನ ಸದಸ್ಯರಾಗಿ, ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ದಿ ನಿಗಮದ ನಿರ್ದೇಶಕರಾಗಿ ಹಾಗೂ 2004-14ರವರೆಗೆ ಭಾರತ ಸರಕಾರದ ನಾರುಮಂಡಳಿಯ (ಕೊಯರ್ ಬೋರ್ಡ್) ಸದಸ್ಯರಾಗಿ ೨ ಬಾರಿ ಆಯ್ಕೆಯಾಗಿ, ಸ್ಮಾರ್ಟ್ ನ ರಾಷ್ಟ್ರೀಯ ಕಾರ್ಯದರ್ಶಿಯಾಗಿ ದುಡಿದಿದ್ದು ಹಲವು ಮಸೀದಿ ಮದರಸಗಳ, ಸಂಘ ಸಂಸ್ಥೆಗಳ ಗೌರವಾಧ್ಯಕ್ಷರಾಗಿ, ಅಧ್ಯಕ್ಷರಾಗಿ ಸೇವೆಸಲ್ಲಿಸುತ್ತಿದ್ದಾರೆ.
NSUI ನ (ವಿದ್ಯಾರ್ಥಿ ಕಾಂಗ್ರೇಸ್ ) ರಾಜ್ಯ ಯುವ ಕಾಂಗ್ರೇಸ್ ಅಖಿಲ ಭಾರತರಾಷ್ಟ್ರೀಯ ಕಾಂಗ್ರೇಸ್ ನ ಅನೇಕ ರಾಜ್ಯ ಮತ್ತು ರಾಷ್ಟ್ರೀಯ ಸಮಾವೇಶಗಳಲ್ಲಿ, ಶಿಬಿರಗಳಲ್ಲಿ ರಾಜ್ಯ ಪ್ರತಿನಿಧಿಯಾಗಿ ಭಾಗವಹಿಸಿದ್ದಾರೆ.ಕಾಂಗ್ರೇಸ್ ಪಕ್ಷದ ವತಿಯಿಂದ ಉಡುಪಿ, ಕಾರವಾರ, ಹಾಸನ,ಮಡಿಕೇರಿ,ಮೈಸೂರು ಚಾಮರಾಜನಗರ,ಶಿವಮೊಗ್ಗ ಹಾಗೂ ಬೆಂಗಳೂರು ನಗರದ ಉಸ್ತುವಾರಿಯಾಗಿ,2013ರಾಜ್ಯ ಚುನಾವಣಾ ಪ್ರಚಾರ ಸಮಿತಿ ಸದಸ್ಯರಾಗಿ,ರಾಜಕೀಯ, ಸಾಮಾಜಿಕ, ಧಾರ್ಮಿಕ ಸಹಕಾರಿ ಶಿಕ್ಷಣ,ಕೃಷಿ ಮತ್ತು ಕ್ರೀಡಾಕ್ಷೇತ್ರ ದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು ತೆಕ್ಕಿಲ್ ಗ್ರಾಮೀಣಾಭಿವೃದ್ದಿ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರಾಗಿ ತೆಕ್ಕಿಲ್ ಸಮೂಹ ಶಿಕ್ಷಣ ಸಂಸ್ಥೆ, ತೆಕ್ಕಿಲ್ ಸಮುದಾಯ ಭವನ ಮತ್ತು ತೆಕ್ಕಿಲ್ hp ಗ್ಯಾಸ್ ನ ಮಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳ ಅನೇಕ ರಸ್ತೆ, ಸೇತುವೆ ಸಂಘ ಸಂಸ್ಥೆಗಳ ಅಭಿವೃದ್ದಿಗೆ ದುಡಿದಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.