ಸುಳ್ಯ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಯುವ ಮತದಾನ ಜಾಗೃತಿ ಸಮಾವೇಶ

Advt_Headding_Middle
Advt_Headding_Middle

ಸುಳ್ಯ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಯುವ ಮತದಾನ ಜಾಗೃತಿ ಸಮಾವೇಶವು ಫೆ. 6 ರಂದು ನಡೆಯಿತು.


ಕೆವಿಜಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ರಾದ ಡಾ. ಎನ್ ಎ ಜ್ಞಾನೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪುತ್ತೂರ್ ಜಿಲ್ಲಾ ವಿದ್ಯಾರ್ಥಿನಿ ಪ್ರಮುಖರಾದ ಮನಿಷಾ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೆವಿಜಿ ಕಾನೂನು ಮಹಾವಿದ್ಯಾಲಯ ದ ಪ್ರಾಂಶುಪಾಲರಾದ ಉದಾಯಕೃಷ್ಣ ಅವರು ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿ ಅಧ್ಯಕ್ಷೀಯ ನೆಲೆಯಲ್ಲಿ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಉದ್ಘಾಟನಾ ಸಮಾರಂಭದಲ್ಲಿ ಎನ್ ಎಂ ಸಿ ಯ ಉಪನ್ಯಾಸಕರಾದ ಕುಲದೀಪ್ ಪೆಲ್ತಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಂತರದಲ್ಲಿ ಕಾರ್ಯಕ್ರಮದ ಎರಡನೇ ಅವಧಿ ಪ್ರಾರಂಭವಾಗಿ ಸಾಮಾಜಿಕ ಕಾರ್ಯಕರ್ತರು ಹಾಗೂ ಸಹಕಾರ ಭಾರತಿಯ ರಾಜ್ಯ ಪ್ರಚಾರಕರಾಗಿ ಜವಾಬ್ದಾರಿ ನಿರ್ವಹಿಸುತ್ತಿರುವ ಶ್ರೀ ಪ್ರಸನ್ನ ಕೆ ಯವರು ಯುವಮತದಾನ ಜಾಗೃತಿಯ ಬಗ್ಗೆ ವಿಷಯ ಮಂಡಿಸಿದರು. ಮನೀಷಾರವರು ಚುನಾವಣಾ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ವಿಭಾಗ ಸಂಘಟನಾ ಕಾರ್ಯದರ್ಶಿಗಳಾದ ಬಸವೇಶ್ ಕೋರಿ, ನಗರ ಕಾರ್ಯದರ್ಶಿಗಳಾದ ಧನ್ಯರಾಜ್ ಕಾಪುಮಲೆ, ಪುತ್ತೂರ್ ಜಿಲ್ಲಾ ಸಂಚಾಲಕರಾದ ಕೀರ್ತನ್ ಪೆರುಮುಂಡ ,ಸುಳ್ಯ ತಾಲೂಕ ಸಂಚಾಲಕರಾದ ನಾಗೇಶ್ ಮಣಿಯಾನ, ಸಹಸಂಚಾಲಕಾರದ ಮಂಜುನಾಥ್, ತಾಲೂಕು ವೃತ್ತಿ ಶಿಕ್ಷಣ ಪ್ರಮುಖ್ ದುಷ್ಯಂತ್ ಶೀರಡ್ಕ , ಕೆವಿಜಿ ತಾಂತ್ರಿಕ ವಿದ್ಯಾಲಯದ ಸಿವಿಲ್ ವಿಭಾಗ ಮುಖ್ಯಸ್ಥರಾದ ಚಂದ್ರಶೇಖರ ಹಾಗೂ ವಿವಿಧ ಕಾಲೇಜಿನ ಕಾರ್ಯಕರ್ತರು, ಹಿರಿಯ ಕಾರ್ಯಕರ್ತರು ಭಾಗವಹಿಸಿದರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.