ಸುಳ್ಯದ ಬಿ ಸಿ ಎಂ ವಿದ್ಯಾರ್ಥಿ ನಿಲಯಗಳಲ್ಲಿರುವ ವಿದ್ಯಾರ್ಥಿಗಳಿಗೆ ಐಎಎಸ್, ಕೆಎಎಸ್, ಬ್ಯಾಂಕಿಂಗ್ ತರಬೇತಿ ಕಾರ್ಯಗಾರ

Advt_Headding_Middle
Advt_Headding_Middle

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಕೆ.ವಿ.ಜಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸುಳ್ಯ ಹಾಗೂ ಕರ್ನಾಟಕ ರಾಜ್ಯದ ಪ್ರತಿಷ್ಠಿತ ಸಂಸ್ಥೆಯಾದ ಜೀನಿಂಸ್ ಕರಿಯರ್ ಅಕಾಡೆಮಿ ಧಾರವಾಡ ಇದರ ಸಂಯುಕ್ತಾ ಆಶ್ರಯದಲ್ಲಿ ಸುಳ್ಯ ತಾಲೂಕಿನ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಲ್ಲಿನ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಐಎಎಸ್ . ಕೆಎಎಸ್ . ಬ್ಯಾಂಕಿಂಗ್ ಸ್ಪರ್ಧಾತ್ಮಕ ಪರೀಕ್ಷೆಯ ಕುರಿತು ವಿಶೇಷ ಕಾರ್ಯಗಾರವನ್ನು ಮಾ.೩ ಮತ್ತು ೪ರಂದು  ನಡೆಯಿತು.ಸ್ಪರ್ಧಾತ್ಮಕ ಪರೀಕ್ಷೆಯ ವಿಶೇಷ ಕಾರ್ಯಗಾರವನ್ನು ಸುಳ್ಯದ ಶಾಸಕರಾದ ಮಾನ್ಯ ಶ್ರೀ ಎಸ್ ಅಂಗಾರ ಅವರು ಉದ್ಘಾಟಿಸಿ ಮಾತನಾಡಿದರು. ಈ ಭಾಗದ ವಿದ್ಯಾರ್ಥಿಗಳು ಸರಕಾರದ ಹುದ್ದೆಗಳಿಗೆ ಆಯ್ಕೆಂiಗಲು ಈ ಕಾರ್ಯಾಗಾರ ಮಹತ್ವವಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಕಾಲಾವಕಾಶದೊಂದಿಗೆ ಈ ಕಾರ್ಯಾಗಾರ ಆಯೋಜನೆ ಮಾಡಲಾಗುವುದು ಎಂದರು.
ಜೀನಿಯಸ್ ಕರಿಯರ್ ಅಕಾಡೆಮಿಯ ಪ್ರಖ್ಯಾತ ವಿಜ್ಞಾನ ಉಪನ್ಯಾಸಕರಾದ ಶ್ರೀ ಶೇಖರ ಗೌಡರ್ ಇವರು ಪ್ರಾಸ್ತಾವಿಕವಾಗಿ ಮಾತನಾಡಿ, ಈ ಎರಡು ದಿನದ ಕಾರ್ಯಗಾರವನ್ನು ಸದುಪಯೋಗಪಡಿಸಿಕೊಳ್ಳುವಂತೆ ಸಲಹೆ ನೀಡಿದರು ಮತ್ತು ಸಂಸ್ಥೆಯ ಪ್ರಖ್ಯಾತ ಸಂವಿಧಾನ ವಿಷಯದ ಬೋಧಕರಾದ ಬಸವರಾಜ್ ಹೆಚ್ ಆರ್ ಅವರು ಮಾತನಾಡಿ ಸರ್ಕಾರಿ ಇಲಾಖೆಗಳು ಅನುದಾನವನ್ನು ಸುಳ್ಯ ತಾಲೂಕಿನಲ್ಲಿ ಸಮರ್ಪಕವಾಗಿ ಬಳಸಿಕೊಂಡಿರುವುದನ್ನು ಶ್ಲಾಘಿಸಿದರು .
ಧಾರವಾಡದ ಸಂಸ್ಥೆಯಲ್ಲಿ ತರಬೇತಿ ಪಡೆದು Sub  Inspector  Intelligence ಹುದ್ದೆಗೆ ಆಯ್ಕೆಯಾದ ದ ಕ ಜಿಲ್ಲೆಯ ಶ್ರೀ ನವೀನ ಕುಮಾರ ಅವರು ಮಾತಾನಾಡಿ ಧಾರವಾಡ ಪ್ರತಿಷ್ಟಿತ ಸಂಸ್ಥೆಯಾದ ಜೀನಿಯಸ್ ಕರಿಯರ್ ಅಕಾಡೆಮಿ ಈ ಭಾಗದಲ್ಲಿ ವಿಶೇಷ ಕಾರ್ಯಗಾರದಲ್ಲಿ ಭಾಗವಹಿಸಿರುವುದು ಹೆಮ್ಮೆಯ ವಿಷಯವೆಂದು ಸಂಸ್ಥೆಯೊಂದಿಗಿನ ತಮ್ಮ ಅನುಭವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.
ಸಂಸ್ಥೆಯ ಪ್ರಖ್ಯಾತ ಇತಿಹಾಸ ಉಪನ್ಯಾಸಕರಾದ ಶ್ರೀ ಸಿದ್ದಣ್ಣ ದಳವಾಯಿ ಅವರು ಕಾರ್ಯಗಾರದ ಪ್ರಥಮ ಉಪನ್ಯಾಸ ಆರಂಭಿಸಿ ವಿದ್ಯಾರ್ಥಿಗಳಿಗೆ ಐಎಎಸ್ ಕೆಎಎಸ್. ಬ್ಯಾಂಕಿಂಗ್ ಹಾಗೂ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಸವಿಸ್ತಾರವಾದ ವೂಹಿತಿ ನೀಡಿದರು ಸಂಸ್ಥೆಯ ಮತ್ತೊಬ್ಬ ಪ್ರಖ್ಯಾತ ಬ್ಯಾಂಕಿಂಗ್ ವಿಷಯದ ತರಬೇತುದಾರರಾದ ಶ್ರೀ ಬಸವರಾಜ ಜಿನಕಟ್ಟಿಯವರು ಉಪನ್ಯಾಸ ನೀಡಿ ಬ್ಯಾಂಕಿಂಗ್ ಸ್ಪರ್ಧಾತ್ಮಕ ಪರೀಕ್ಷೆಯ ಪೂರ್ವಸಿದ್ದತೆಯ ಕುರಿತು ಮಾಹಿತಿ ನೀಡಿದರು .
ಸದರಿ ಕಾರ್ಯಕ್ರಮವನ್ನು ಸುಳ್ಯ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ವಿಸ್ತರಣಾಧಿಕಾರಿಯದ ಶೀ ಹಿಮಕರ ಎಂ ಅವರು ವ್ಯವಸ್ಥಿತವಾಗಿ ಸಂಘಟಿಸಿದ್ದರು ಕಾರ್ಯಕ್ರಮದಲ್ಲಿ ನಿಲಯ ಪಾಲಕರಾದ ಶ್ರೀ ವಿಜಯ ಯಂ ಪಿ ಉಪಸ್ಥಿತರಿದ್ದರು ಹಾಗೂ ಕಾರ್ಯಕ್ರಮವನ್ನು ಕುಮಾರಿ ದೀಪಾ ನಿರೂಪಿಸಿದರು, ಮೇಲ್ವಿಚಾರಕರಾದ ಶ್ರೀಮತಿ ದೀಪಿಕಾ ಕೆ ವಂದಿಸಿದರು . ಕಛೇರಿ ಸಹಾಯಕರಾದ ದಿವ್ಯಾ ಎಸ್, ಸಚಿನ್ ಡಿ ಪೆರಾಜೆ, ಪ್ರಮೀಳಾ ಕೆ ಎಸ್ ,ಅನಿತಾ ಎಂ ಕಾರ್ಯಗಾರದ ಯಶಸ್ಸಿಗೆ ಶ್ರಮಿಸಿದರು.
ಸಮಾರೋಪ ಸಮಾರಂಭದಲ್ಲಿ ಕೆವಿಜಿ ಇಂಜಿನಿಯರ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಶ್ರಿ ಜ್ಞಾನೇಶ್ ಭಾಗವಹಿಸಿ ವಿದ್ಯಾರ್ಥಿಗಳು ಕಾರ್ಯಗಾರವನ್ನು ಸದುಪಯೋಗ ಪಡೆಸಿಕೊಳ್ಳುವಂತೆ ಸೂಚಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.