ಸುಳ್ಯದಲ್ಲಿ ಉದ್ಯೋಗ ಮೇಳ ಆರಂಭ

Advt_Headding_Middle
Advt_Headding_Middle

ಸುಳ್ಯದ ಶಾಸಕ ಎಸ್.ಅಂಗಾರ ಇವರ ಸಹಕಾರದೊಂದಿಗೆ ಮಂಗಳೂರಿನ ಕ್ಯಾರಿಯರ್ ಡೆಸ್ಟಿನಿಯವರ ನೇತೃತ್ವದಲ್ಲಿ ಉದ್ಯೋಗ ಮೇಳ-2019 ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಮಾ ೯ರಂದು ಬೆಳಿಗ್ಗೆ 9ರಿಂದ ಆರಂಭಗೊಂಡಿದೆ.
 42 ಕಂಪನಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದು, ಪಿಯುಸಿ, ಡಿಪ್ಲೊಮಾ, ಯಾವುದೇ ಪದವಿ ಪಡೆದ ಆಸಕ್ತ ಅಭ್ಯರ್ಥಿಗಳು ಅವಕಾಶ ಬಳಸಿಕೊಳ್ಳಬಹುದಾಗಿದೆ. ಇಂದು ಸಂಜೆ 6ರವರೆಗೆ ಈ ಮೇಳ ಇರುತ್ತದೆ.


ಉದ್ಘಾಟನೆ :
ಇಂದು ಬೆಳಿಗ್ಗೆ 8-45 ಕ್ಕೆ ಶಾಸಕ ಎಸ್.ಅಂಗಾರರು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್‌ನ ಅಧ್ಯಕ್ಷ ಡಾ. ಕೆ.ವಿ.ಚಿದಾನಂದರ ಅಧ್ಯಕ್ಷತೆಯಲ್ಲಿ ದೀಪ ಬೆಳಗಿಸಿ ಉದ್ಯೋಗಮೇಳವನ್ನು ಉದ್ಘಾಟಿಸಿದರು.

ಪ್ರಾಂಶುಪಾಲ ಕ್ಯಾಪ್ಟನ್ ಡಾ. ಗಿರಿಧರ ಗೌಡ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಭವಾನಿಶಂಕರ ಅಡ್ತಲೆ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರ್ ಅತಿಥಿಗಳಾಗಿದ್ದರು. ಕೆರಿಯರ್ ಡೆಸ್ಟಿನಿ ನಿರ್ದೇಶಕರಾದ ಮುರಳಿ ಎಚ್. ಪ್ರಾಸ್ತಾವಿಕವಾಗಿ ಮಾತನಾಡಿದರು.

ಇನ್ನೋರ್ವ ನಿರ್ದೇಶಕಿ ಕು. ಜಯಶ್ರೀ, ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ. ಪೂವಪ್ಪ ಕಣಿಯೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾಲೇಜಿನ ಪ್ಲೇಸ್‌ಮೆಂಟ್ ಸೆಲ್ ಹಾಗೂ ಕೆರಿಯರ್ ಗೈಡೆನ್ಸ್ ವಿಭಾಗದ ಮುಖ್ಯಸ್ಥೆ ಶ್ರೀಮತಿ ವಿದ್ಯಾ ವಂದಿಸಿದರು. ಪ್ರೊ. ಸಂಜೀವ ಕುದ್ಪಾಜೆ ಕಾರ್ಯಕ್ರಮ ನಿರೂಪಿಸಿದರು.


ವ್ಯವಸ್ಥೆ :
ಉದ್ಯೋಗಮೇಳಕ್ಕೆ ಉದ್ಯೋಗಾಕಾಂಕ್ಷಿಗಳಾಗಿ ಬರುವವರನ್ನು ಎನ್‌ಎಂಸಿಯ ಮುಖ್ಯ ದ್ವಾರದ ಬಳಿಯೇ ಸ್ವಾಗತಿಸಲಾಗುತ್ತದೆ. ಯಾವ ಉದ್ಯೋಗ ಬಯಸಿ ಬಂದಿದ್ದಾರೆಂಬ ಮಾಹಿತಿ ಕೇಳಿ ಆಯಾ ವಿಭಾಗಕ್ಕೆ ಕಳುಹಿಸಿಕೊಡಲಾಗುತ್ತದೆ. ಕಾಲೇಜಿನ ಪ್ರಥಮ ಮಹಡಿಯಲ್ಲಿ ಒಂದೊಂದು ಕಂಪೆನಿಗಳಿಗೆ ಒಂದೊಂದು ಕೊಠಡಿಗಳನ್ನು ನೀಡಲಾಗಿದ್ದು, ಆ ಕಂಪೆನಿಯ ಅಧಿಕಾರಿಗಳು ಉದ್ಯೋಗಾಕಾಂಕ್ಷಿಗಳ ಸಂದರ್ಶನ ನಡೆಸಿ ಆಯ್ಕೆ ಮಾಡುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.