ಅಂತಿಮ ಬಿ.ಎ ವಿದ್ಯಾರ್ಥಿ ಸಾತ್ವಿಕ್ ಗುತ್ತಿನಡ್ಕ ನಿಧನ

Advt_Headding_Middle
Advt_Headding_Middle

ಆಲೆಟ್ಟಿ ಗ್ರಾಮದ ಗುಂಡ್ಯ ಗುತ್ತಿನಡ್ಕ ಪರಮೇಶ್ವರ ಗೌಡ ಎಂಬವರ ಪುತ್ರ ಸಾತ್ವಿಕ್ ರವರು ಮಾ.6 ರಂದು ನಿಧನರಾದರು.ಅವರಿಗೆ 21 ವರ್ಷ ವಯಸ್ಸಾಗಿತ್ತು.


ಮಾ.4 ರಂದು ಕಾಲೇಜಿಗೆ ಶಿವರಾತ್ರಿ ಪ್ರಯುಕ್ತ ರಜೆ ಇದ್ದುದರಿಂದ ಸುಳ್ಯಕ್ಕೆ ಹೋಗಿ ಮನೆಗೆ ಹಿಂತಿರುಗುವ ಸಂದರ್ಭದಲ್ಲಿ ವಾಂತಿ ಕಾಣಿಸಿಕೊಂಡಿತ್ತು. ಸಂಜೆ ಮನೆಗೆ ಬಂದ ನಂತರವೂ ವಾಂತಿ ಮಾಡಲಾರಂಭಿಸಿದರು. ತಕ್ಷಣ ಅವರನ್ನು ಅಟೋದಲ್ಲಿ ಸುಳ್ಯದ ಖಾಸಗಿ ವೈದ್ಯರ ಬಳಿ ಕರೆತಂದು ಚಿಕಿತ್ಸೆ ಕೊಡಿಸಲಾಯಿತು. ಸ್ವಲ್ಪ ಹೊತ್ತಿನ ಬಳಿಕ ಚೇತರಿಕೆ ಕಂಡು ಬಂದರಿಂದ ಮನೆಗೆ ಕರೆದುಕೊಂಡು ಹಿಂತಿರುಗಿದರು. ಮನೆಯಲ್ಲಿ ಮತ್ತೆ ರಾತ್ರಿ ವಾಂತಿ ಮಾಡಲಾರಂಭಿಸಿದ ಅವರನ್ನು ಬೆಳಗ್ಗೆ ಸುಳ್ಯದ ಸರಕಾರಿ ಆಸ್ಪತ್ರೆಗೆ ಕರೆತಂದು ದಾಖಲಿಸಲಾಯಿತು. ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡು ಬಂದಿದ್ದು ವೈದ್ಯರ ಸಲಹೆಯಂತೆ ಚಿಕಿತ್ಸೆ ನೀಡಲಾಯಿತು. ಮಾ.6 ರಂದು ಬೆಳಗ್ಗೆ ಇದ್ದಕ್ಕಿದ್ದಂತೆ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದ್ದು ಚಿಕಿತ್ಸೆಗೆ ಸ್ಪಂದಿಸದ ಕಾರಣದಿಂದ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಮೃತರು ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅಂತಿಮ ಬಿ.ಎ.ವಿದ್ಯಾರ್ಥಿಯಾಗಿದ್ದು ತಾಯಿ ಮೋಹಿನಿ, ಅಜ್ಜಿ ಹೂವಮ್ಮ, ಸಹೋದರರಾದ ಕೆ.ವಿ.ಜಿ.ಪಾಲಿಟೆಕ್ನಿಕ್ ವಿದ್ಯಾರ್ಥಿ ಪ್ರಸನ್ನ, ಸುಬ್ರಹ್ಮಣ್ಯ ಕೆ.ಎಸ್.ಎಸ್.ಕಾಲೇಜಿನ ಪಿ.ಯು.ಸಿ.ವಿದ್ಯಾರ್ಥಿ ಶಿವಪ್ರಸಾದ್ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.