Breaking News

ಝೀ ಕನ್ನಡ ಸರಿಗಮಪದಲ್ಲಿ ಸುಳ್ಯದ ಶುಭದಾ

Advt_Headding_Middle
Advt_Headding_Middle


ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ ಸಂಗೀತ ಶೋದಲ್ಲಿ ಸುಳ್ಯದ ಶುಭದಾ ಆಯ್ಕೆಯಾಗಿದ್ದಾರೆ. ಪ್ರತಿ ವಾರ ಶನಿವಾರ ಹಾಗೂ ಭಾನುವಾರ ಈ ಕಾರ್ಯಕ್ರಮ ರಾತ್ರಿ 8ಗಂಟೆಗೆ ಪ್ರಸಾರವಾಗಲಿದೆ. ಶುಭದಾ ಸುಳ್ಯ ಸೂರ್ತಿಲ ನಿವಾಸಿ ಪಿಗ್ಮಿ ಸಂಗ್ರಾಹಕರಾಗಿರುವ ರವಿಪ್ರಕಾಶ್ ಮತ್ತು ಶ್ರೀಮತಿ ಜಯಶ್ರೀ ದಂಪತಿಗಳ ಪುತ್ರಿ. ಸುಳ್ಯದ ರೋಟರಿ ಆಂಗ್ಲಮಾಧ್ಯಮ ಪ್ರೌಢಶಾಲೆಯ 9 ನೇ ತರಗತಿ ವಿದ್ಯಾರ್ಥಿನಿಯಾಗಿರುವ ಈಕೆ ಕಾಂಚನ ಈಶ್ವರ ಭಟ್‌ರವರಲ್ಲಿ ಶಾಸ್ತ್ರೀಯ ಸಂಗೀತವನ್ನು, 
ಕೆ.ಆರ್.ಗೋಪಾಲಕೃಷ್ಣರವರಲ್ಲಿ ಸಂಗೀತವನ್ನು ಅಭ್ಯಾಸಿಸಿದ್ದಾಳೆ.ಹಾಗೂ ಸುಳ್ಯದ ರಂಗಮಯೂರಿಯ ಸಂಗೀತ ಶಿಕ್ಷಕ ಕಿರಣ್ ಪುತ್ತೂರುರವರ ಬಳಿ ಸುಗಮ ಸಂಗೀತವನ್ನು ಕಲಿಯುತ್ತಿದ್ದಾಳೆ. ಸಂಗೀತ ಮಾತ್ರವಲ್ಲದೆ ಭರತನಾಟ್ಯದಲ್ಲೂ ಜೂನಿಯರ್ ಪರೀಕ್ಷೆಯಲ್ಲಿ ತೇರ್ಗಡೆಗೊಂಡಿದ್ದಾಳೆ. ಡ್ರಾಯಿಂಗ್‌ನಲ್ಲಿ ಜೂನಿಯರ್ ಹಾಗೂ ಸೀನಿಯರ್ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾಳೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.