ಮಾ,20,21: ನಿಡುಬೆ ಮುತ್ತುಮಾರಿಯಮ್ಮ ದೇವಸ್ಥಾನದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

Advt_Headding_Middle
Advt_Headding_Middle

ಐವರ್ನಾಡು ಗ್ರಾಮದ ನಿಡುಬೆ ಶ್ರೀ ಮುತ್ತುಮಾರಿಯಮ್ಮ ದೇವಸ್ಥಾನವು ನವೀಕರಣಗೊಂಡು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಮಾ.20 ಮತ್ತು 21 ರಂದು ವಿವಿಧ ವೈದಿಕ,ತಾಂತ್ರಿಕ,ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ.
ಮಾ.20 ರಂದು ಸಂಜೆ ಗಂಟೆ 6.೦೦ ಕ್ಕೆ ಕ್ಷೇತ್ರದ ತಂತ್ರಿಗಳಿಗೆ ಹಾಗೂ ವೈದಿಕರಿಗೆ ಪೂರ್ಣಕುಂಭ ಸ್ವಾಗತ ನಡೆಯಲಿದೆ. ರಾತ್ರಿ ಗಂಟೆ 7.೦೦ ಕ್ಕೆ ದೇವತಾ ಪ್ರಾರ್ಥನೆ, ಆಚಾರ್ಯ ವರಣ,ಪ್ರಾಸಾದ ಪರಿಗ್ರಹ,ನೂತನ ಬಿಂಬ ಪರಿಗ್ರಹ ,ಸ್ವಸ್ತಿ ಪುಣ್ಯಾಹವಾಚನ , ಸ್ಥಳ ಶುದ್ಧಿ,ಪ್ರಾಸಾದ ಶುದ್ಧಿ,ರಕ್ಷೆಘ್ನ ಹೋಮ,ವಾಸ್ತು ಹೋಮ,ಪೂಜಾ ಬಲಿ,ಪ್ರಕಾರ ಬಲಿ,ನೂತನ ಬಿಂಬ ಜಲಾಧಿವಾಸ,ಪ್ರಸಾದ ವಿತರಣೆ ನಡೆಯಲಿದೆ.
ರಾತ್ರಿ ಗಂಟೆ 8.೦೦ ರಿಂದ ಸಭಾಕಾರ್ಯಕ್ರಮ ನಡೆಯಲಿದೆ. ಶಾಸಕ ಎಸ್. ಅಂಗಾರರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ, ಈ ಸಂದರ್ಭದಲ್ಲಿ ಹಲವಾರು ಜನ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ರಾತ್ರಿ ಗಂಟೆ ೯.೦೦ ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಮಾ.21 ರಂದು ಬೆಳಿಗ್ಗೆ ಮಹಾಗಣಪತಿ ಹೋಮ,ಬ್ರಹ್ಮಕಲಶ ಪೂಜೆ, ೯.೪೬ಕ್ಕೆ ಶ್ರೀ ಮುತ್ತುಮಾರಿಯಮ್ಮ ದೇವರ ಪ್ರತಿಷ್ಠೆ ,ಬ್ರಹ್ಮಕಲಶಾಭಿಷೇಕ ನಡೆಯಲಿದೆ. ಮಧ್ಯಾಹ್ನ ಮಹಾಪೂಜೆ,ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.