Breaking News

ಬೇರ್ಪಡ್ಕ: ಕಾಲು ಸಂಕಕ್ಕೆ ಗುದ್ದಲಿಪೂಜೆ

Advt_Headding_Middle
Advt_Headding_Middle

ಜಾಲ್ಸೂರು ಗ್ರಾಮದ ಬೇರ್ಪಡ್ಕ ಎಂಬಲ್ಲಿ ಜನರ ಬಹುಬೇಡಿಕೆಯಾದ ಕಾಲುಸಂಕ ನಿರ್ಮಾಣಕ್ಕೆ ತಾ.ಪಂ.ಸದಸ್ಯ ತೀರ್ಥರಾಮ ಜಾಲ್ಸೂರು ಮಾ.10ರಂದು ಗುದ್ದಲಿಪೂಜೆ ನೆರವೇರಿಸಿದರು.


ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರ ವಿಶೇಷ ಅನುದಾನದಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್‌ ಸಿಂಡಿಕೇಟ್ ಸದಸ್ಯ ಡಾ.ರಘು ಅವರ ಪ್ರಯತ್ನದಿಂದ ತಾ.ಪಂ.ಸದಸ್ಯ ತೀರ್ಥರಾಮ ಜಾಲ್ಸೂರು ಅವರ ಮುತುವರ್ಜಿಯಿಂದ ಸುಮಾರು 15 ವರ್ಷಗಳಿಂದ ಈ ಭಾಗದ ಜನರ ಬೇಡಿಕೆಯಾದ ಕಾಲುಸಂಕ ನಿರ್ಮಾಣಕ್ಕೆ ಅನುದಾನ ಒದಗಿಸಿಕೊಡಲಾಗಿದೆ.


ಇದರ ಗುದ್ದಲಿಪೂಜೆಯನ್ನು ತಾ.ಪಂ.ಸದಸ್ಯ ತೀರ್ಥರಾಮ ಜಾಲ್ಸೂರು ಅವರು ನೆರವೇರಿಸಿದರು.ಈ ಸಂದರ್ಭದಲ್ಲಿ ಗೋಪಾಲಕೃಷ್ಣ ಭಟ್ ಬೇರ್ಪಡ್ಕ, ಪ್ರೇಮಕುಮಾರ್, ಮನೋಹರ, ಪುಷ್ಪ ಬೇರ್ಪಡ್ಕ, ಕುಮಾರ ಸುಬ್ರಹ್ಮಣ್ಯ ಬೇರ್ಪಡ್ಕ, ಲಿಂಗಪ್ಪ ಗೌಡ ಗಬ್ಬಲಡ್ಕ , ಪ್ರವೀಣ ಬೇರ್ಪಡ್ಕ, ಸುಜಾತ ಬೇರ್ಪಡ್ಕ ಸೇರಿದಂತೆ ರಸ್ತೆಯ ಫಲಾನುಭವಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.