ಮುರುಳ್ಯ : ಪೂ.ಪ್ರಾ. ಆಂಗ್ಲಮಾಧ್ಯಮ ಕುರಿತು ಹೆತ್ತವರ ಮತ್ತು ವಿದ್ಯಾಭಿಮಾನಿಗಳ ಸಭೆ

Advt_Headding_Middle
Advt_Headding_Middle

ಅಲೆಕ್ಕಾಡಿ ಸ.ಉ.ಹಿ.ಪ್ರಾ.ಶಾಲೆ ಮುರುಳ್ಯದಲ್ಲಿ ಮಾ. 8 ರಂದು ಹೆತ್ತವರ ಮತ್ತು ವಿದ್ಯಾಭಿಮಾನಿಗಳ ಕೂಡುವಿಕೆಯಲ್ಲಿ ಪೂರ್ವ ಪ್ರಾಥಮಿಕ ಆಂಗ್ಲಮಾಧ್ಯಮ ತರಗತಿ ಆರಂಭಿಸುವ ಕುರಿತು ಸಭೆ ನಡೆಯಿತು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷೆ ಮಧು ಪಿ.ಆರ್. ಅಧ್ಯಕ್ಷತೆ ವಹಿಸಿದ್ದರು.


ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಮಹಾದೇವಪ್ಪರವರು ಮಾತನಾಡಿ, ಸರಕಾರದಿಂದ ಸಿಗುವ ಸೌಲಭ್ಯವನ್ನು ಸದ್ಭಳಕೆ ಮಾಡಿದಲ್ಲಿ ಊರವರ ಸಹಕಾರ ಪ್ರೋತ್ಸಾಹ ಸಿಕ್ಕಿದರೆ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಬಹುದು. ಸರಕಾರಿ ಶಾಲೆಗಳಲ್ಲಿ ಉನ್ನತ ವ್ಯಾಸಂಗ, ತರಬೇತಿ ಪಡೆದ ಶಿಕ್ಷಕರು ಇರುತ್ತಾರೆ. ಕಲಿಯುವವರಿಗೆ ಏನೂ ಕೊರತೆ ಕಾಣದು ಎಂದು ಹೇಳಿದರು.
ನಿವೃತ್ತ ಶಿಕ್ಷಕ ಹಾಗೂ ರಾಷ್ಟ್ರಪ್ರಶಸ್ತಿ ಪುರಸ್ಕೃತ ಮಿಲ್ಕ್ ಮಾಸ್ಟರ್ ರಾಘವ ಗೌಡ ಪಲ್ಲತ್ತಡ್ಕರವರು ಮಾತನಾಡಿ, ಎಲ್ಲರಿಗೂ ಸಮಾನ ಶಿಕ್ಷಣವಾಗಬೇಕು. ಸರಕಾರಿ ವಿದ್ಯಾದೇಗುಲಗಳು, ದೇವಾಲಯಕ್ಕೆ ಸಮಾನ. ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವುದು ಪೋಷಕರ ಜವಾಬ್ದಾರಿಯಾಗಿದೆ. ಸರಕಾರದಿಂದ ಸಿಗುವ ಸೌಲಭ್ಯ ಸವಲತ್ತುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕೆಂದರು. ಹಿರಿಯ ವಿದ್ಯಾರ್ಥಿಗಳಾದ ಸುದೇಶ್ ರೈ ಅಲೆಕ್ಕಾಡಿ, ಜಲಜಾಕ್ಷಿ ನೂಜಾಡಿ, ಚಂದ್ರಶೇಖರ ಗೌಡ ಮುರುಳ್ಯ, ಬಾಲಕೃಷ್ಣ ಪೂಜಾರಿ ನೂಜಾಡಿ, ಶಾಲೆಯ ಬಗ್ಗೆ ವಿವರಿಸಿದರು. ವೇದಿಕೆಯಲ್ಲಿ ಶಾಲಾ ಮುಖ್ಯ ಶಿಕ್ಷಕಿ ಚಂದ್ರಿಕ ಬಿ.ಸಿ., ಗ್ರಾ.ಪಂ. ಸದಸ್ಯೆ ಶ್ರೀಮತಿ ಗೀತಾ ಪೂದೆ, ಸಂಪನ್ಮೂಲ ವ್ಯಕ್ತಿ ಜಯಂತ ಕೆ., ಬಿಆರ್‌ಪಿ ಚಂದ್ರಶೇಖರ ಸುಳ್ಯ, ಕುಂಞಣ್ಣ ಗೌಡ ಬೊಳ್ಕಜೆ, ಬಾಲಕೃಷ್ಣ ಆಳ್ವ ಉಪಸ್ಥಿತರಿದ್ದರು. ಅಡುಗೆ ಸಿಬ್ಬಂದಿಗಳು, ಎಸ್‌ಡಿಎಂಸಿ ಸದಸ್ಯರು, ಊರವರು, ಪೋಷಕರು ಭಾಗವಹಿಸಿದ್ದರು.
ಹಿರಿಯ ಶಿಕ್ಷಕಿ ಸುಧಾ ಪಿ. ಸ್ವಾಗತಿಸಿ, ಸಹಶಿಕ್ಷಕಿ ನಳಿನಾಕ್ಷಿ ರೈ ವಂದಿಸಿದರು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷೆ ಪ್ರಸ್ತಾವನೆಗೈದರು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.