ಪತ್ರಕರ್ತ ಮಹೇಶ್ ಪುಚ್ಚಪ್ಪಾಡಿಯವರ ರಾಜಕೀಯ ವಿಶ್ಲೇಷಣೆ : ಸಾಮಾಜಿಕ ಜಾಲತಾಣದಲ್ಲಿ ವೈರಲ್

Advt_Headding_Middle
Advt_Headding_Middle

ಪುತ್ತೂರಿನಲ್ಲಿ ಪತ್ರಕರ್ತರಾಗಿರುವ ಗುತ್ತಿಗಾರಿನ ಮಹೇಶ್ ಪುಚ್ಚಪ್ಪಾಡಿಯವರು ತನ್ನ ಫೇಸ್‌ಬುಕ್ ವಾಲ್‌ನಲ್ಲಿ ಬರೆದುಕೊಂಡಿರುವ ವಾಸ್ತವ ರಾಜಕೀಯದ ವಿಶ್ಲೇಷನೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಮಹೇಶ್ ಪುಚ್ಚಪ್ಪಾಡಿಯವರ ಫೇಸ್‌ಬುಕ್ ಬರಹ ಇಂತಿದೆ…………………


“ಈಗ ರಾಜಕೀಯ ಹವಾ….
ನಾನು ಸೂಕ್ಷ್ಮವಾಗಿ ಗಮನಿಸಿದ್ದು..

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಧಾನವಾಗಿ ರಾಜಕೀಯದಲ್ಲಿ ಬದಲಾವಣೆ ಕಂಡುಬರುತ್ತಿದೆ. ಇದುವರೆಗೆ ಜಿಲ್ಲೆಯಲ್ಲಿ ಬಿಜೆಪಿಯ ಸಂಘಟನೆ, ಹಿಡಿತ ಸಂಘಪರಿವಾರಕ್ಕೆ ಇತ್ತು. ಆದರೆ ಕಳೆದ ವಿಧಾನಸಭಾ ಚುನಾವಣೆಯ ನಂತರ ಇದು ಶಿಥಿಲವಾಗುತ್ತಿದೆ. ರಾಜಕೀಯವಾಗಿ ಬಿಜೆಪಿ ಗೆಲುವು ಸಾಧಿಸಿರಬಹುದು. ಆದರೆ ಸಂಘಟನಾತ್ಮಕವಾಗಿ ಶಿಥಿಲವಾಗುತ್ತಿದೆ. ಒಗ್ಗಟ್ಟು ಕಡಿಮೆಯಾಗಿದೆ.
ಕಾಂಗ್ರೆಸ್ ಹಿಡಿತ ರಾಜ್ಯದ ಕಾಂಗ್ರೆಸ್ ಗೆ ಇತ್ತು. ಆದರೆ ಇಲ್ಲೂ ಜಿಲ್ಲೆಯ ಕಾಂಗ್ರೆಸ್ ಒಳಗೂ ಸಂಘಟನೆ ಶಿಥಿಲವಾಗಿದೆ.
ಎರಡೂ ಪಕ್ಷದಲ್ಲಿ ಜೊತೆಗಿದ್ದರೂ ನಂಬದ ಸ್ಥಿತಿ ಇದೆ.ಅಂದರೆ ವಿಶ್ವಾಸವೇ ಇಲ್ಲವಾಗಿದೆ. ಕಾಲೆಳೆಯುವ ಭೀತಿ ಇದೆ.ಸೋಶಿಯಲ್ ಮೀಡಿಯಾದಲ್ಲಿ ಯಾವುದೋ ಸಣ್ಣ ವಿಷಯ ವೈರಲ್ ಮಾಡಿಸಿ ಪತ್ರಿಕೆಗಳಲ್ಲೂ ಬರುವಂತೆ ಮಾಡುವ ವ್ಯವಸ್ಥೆ ಇದೆ.
ಯಾಕೆ ಹೀಗೆ?…..
ಮುಖ್ಯವಾಗಿ ಜಾತಿ ಆಧಾರಿತವಾಗಿ, ಧರ್ಮ ಆಧಾರಿತವಾಗಿ ಅಭ್ಯರ್ಥಿಗಳ ಆಯ್ಕೆ, ಭ್ರಷ್ಟಾಚಾರ ಸದ್ದಿಲ್ಲದೆ ಹೆಚ್ಚಾಗುವುದು, ಪಕ್ಷಗಳ ನಾಯಕರುಗಳೇ ಭ್ರಷ್ಟಾಚಾರ ಮಾಡುವುದು.ಯಾವುದೇ ಮೂಲಭೂತ ವ್ಯವಸ್ಥೆ ಬಗ್ಗೆ ಮಾತನಾಡಿದರೆ ಕಾರ್ಯಕರ್ತ ರನ್ನು ದೂರಮಾಡುವುದು ಹೀಗೆ ಹತ್ತು ಹಲವು ಕಾರಣವಾದರೆ, ಇನ್ನೊಂದು ಪ್ರಮುಖ ಅಂಶ ಎಂದರೆ ಸಂಘಟನೆಗಳ ನಾಯಕರ ಮಧ್ಯೆಯೇ ಪೈಪೋಟಿ, ಸೈಡ್ ಲೈನ್ ಮಾಡುವ ಹೋರಾಟ….ಹೀಗೆ ಇವುಗಳೂ ಕಾರಣ ಆಗುತ್ತಿವೆ.

ಎಷ್ಟು ಸಮಯ ನರೇಂದ್ರ ಮೋದಿ ಮುಖ ನೋಡಿ, ರಾಹುಲ್ ಗಾಂಧಿ, ಮನಮೋಹನ ಸಿಂಗ್ ಹೆಸರಲ್ಲಿ ಮತ ಪಡೆಯಲು, ಜಾತಿ, ಧರ್ಮ ಆಧಾರಿತವಾಗಿ ಎಷ್ಟು ದಿನ ಮತಪಡೆಯಲು ಸಾಧ್ಯ?.
ಜಿಲ್ಲೆಯಲ್ಲಿ ಒಬ್ಬ ಭ್ರಷ್ಟಾಚಾರ ರಹಿತ, ಜಾತಿ ರಹಿತ, ಅಭಿವೃದ್ಧಿಯ ಕೆಲಸಗಳನ್ನು ಫಾಲೋ ಅಪ್ ಮಾಡುವ, ಧರ್ಮ ಸ್ನೇಹದ ವ್ಯಕ್ತಿ ಏಕೆ ಬೆಳೆಯಲು ಆಗುತ್ತಿಲ್ಲ.?.

ಒಂದು ಹೆಸರನ್ನು ಪದೇ ಪದೇ ಹೇಳುತ್ತಾ ಫೋಟೋ ಹಾಕುತ್ತಾ, ಆ ವ್ಯಕ್ತಿಯ ಕನಿಷ್ಠ ಶೇ.೧೦ ಅಂಶವನ್ನು ಅಳವಡಿಕೆ ಮಾಡದೇ ಇದ್ದರೆ , ಅದು ಆ ವ್ಯಕ್ತಿಗೆ ಮಾಡುವ ಅವಮಾನ.
ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಧಾನವಾಗಿ ಬದಲಾವಣೆಯಾಗುತ್ತದೆ.ಜಾತಿ ಆಧಾರಿತವಾಗಿ, ಧರ್ಮ ಆಧಾರಿತವಾಗಿ ರಾಜಕೀಯ ಕ್ಷೇತ್ರ ಹಂಚಿ ಹೋಳಾಗುತ್ತದೆ. ಸಾಮರಸ್ಯ ದೂರವಾಗುವ ಆತಂಕ ಇನ್ನೂ ಹೆಚ್ಚಾಗುತ್ತದೆ.

——–
ಈ ಬರಹಕ್ಕೆ ಅನೇಕ ಪ್ರತಿಕ್ರಿಯೆಗಳು ಕೂಡಾ ದಾಖಲಾಗಿವೆ.
“ಬಹಳ ಸತ್ಯವಾದ ಬರವಣಿಗೆ. ಹಿಂದೆ ಸಂಘದ ಪ್ರಮುಖರಿಗೆಯಾವುದೇ ಅಧಿಕಾರ ಲಾಲಸೆ ಆಕಾಂಕ್ಷೆಗಳು ಲವಲೇಶವು ಇರಲಿಲ್ಲ ಕೇವಲ ಸಂಘಟನೆಗೆ ಮಾತ್ರ ಅವರ ಕಾರ್ಯ ಸೀಮಿತವಾಗಿತ್ತು .ಇಂದು ಬದಲಾಗಿದೆ.ಯಾರು ದಿನಾಲೂ ಪ್ರಮುಖರ ಹಿಂದೆ ಮುಂದೆ ಹೋಗುತ್ತಾರೆ? ಅವರನ್ನು ಓಲೈಸುತ್ತಾರೆ ಅವರಿಗೆ ಯಾವುದೆ ಅರ್ಹತೆ ಮಾನದಂಡಗಳು ಇಲ್ಲವಾದರೂ ಅವರಿಗೆ ಏಕಾಏಕಿ ಗುರುತರ ಸ್ಥಾನ ದೊರೆಯುವಂತಹ ವಾತಾವರಣ ಇದೆ.ಹಿರಿಯ ಪ್ರಮುಖರ ಧ್ವನಿ ಕ್ಷೀಣಿಸುವ ಎಲ್ಲಾ ತಂತ್ರಗಳು ಮನೆಮಾಡಿದೆ. ಕಾಂಗ್ರೇಸ್ ಸ್ಥಿತಿ ಹಣಬಲ ಮತ ಆಧಾರಿತವಾಗಿರುವುದು ಜನಜನಿತ.” ಎಂದು ರಾಧಾಕೃಷ್ಣ ಕೋಟೆ ಪ್ರತಿಕ್ರಿಯಿಸಿದ್ದಾರೆ.

“ಬೇರೆ ಧರ್ಮದವರು ಅವರ ನಾಯಕರುಗಳನ್ನು ಬಿಟ್ಟುಕೊಡುತ್ತಾರೆ… ಹಾಗಿದ್ದ ಮೇಲೆ ಭಾರತೀಯ ಸಂಸ್ಕೃತಿಯನ್ನು ಉಳಿಸಲು ಹಗಲು ರಾತ್ರಿ ದುಡಿಯುವ ನಮ್ಮ ನರೇಂದ್ರ ಮೋದಿಯ ಅಂತಹ ನಿಷ್ಕಲ್ಮಶ ನಿಸ್ವಾರ್ಥ ವ್ಯಕ್ತಿಯನ್ನು ನಾವು ಯಾಕೆ ಒಗ್ಗಟ್ಟಾಗಿ ಬೆಂಬಲಿಸಬಾರದು. ಹಿಂದುಗಳೇ ಒಗ್ಗಟ್ಟಾಗಿ. ಇಂತಹ ವ್ಯಕ್ತಿ ಪ್ರಧಾನಿಯಾಗಿ ಸಿಕ್ಕಿದ್ದು ನಮ್ಮ ಪುಣ್ಯ.” ಎಂದು ನಿಶ್ಚಿತ್ ರಾಮ್ ಎಂಬವರು ಪ್ರತಿಕ್ರಿಯಿಸಿದ್ದಾರೆ.

“ನಾವು ಹೇಗಿದ್ದರೂ ಗೆದ್ದು ಬರುತ್ತೇವೆನ್ನುವ ಭ್ರಮೆಯಿಂದ ಅಭಿವೃದ್ಧಿ ಕಾರ್ಯಗಳನ್ನು ಮಾಡದೆ ತಮ್ಮ ನಾಯಕರ ಸಾಧನೆಗಳನ್ನೇ ಮೂಲ ಬಂಡವಾಳ ಮಾಡಿಕೊಂಡು ಮತ ಯಾಚಿಸಿದರೆ ಅದನ್ನು ಅರ್ಥಯಿಸಿ ಕೊಳ್ಳಲಾರದಷ್ಟು ಬುದ್ದಿವಂತರ ನಾಡ ಮಂದಿ ಬುದ್ದಿಹೀನರಾದಾರೇ….?” ಎಂದು ಉಡುವೆಕೋಡಿ ರಾಧಾಕೃಷ್ಣ ರಾವ್ ಪ್ರತಿಕ್ರಿಯಿಸಿದ್ದಾರೆ.
——————–

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.