ಮೋದಿ ಮತ್ತೆ ಪ್ರಧಾನಿಯಾಗುವುದು ದೇಶದ ಅನಿವಾರ್ಯತೆ : ಮಾಳವಿಕಾ

Advt_Headding_Middle
Advt_Headding_Middle

ನರೇಂದ್ರ ಮೋದಿಯವರು ಮತ್ತೆ ದೇಶದ ಪ್ರಧಾನಮಂತ್ರಿಯಾಗುವುದು ಬಿಜೆಪಿಯ ಅನಿವಾರ್ಯತೆಯಷ್ಟೇ ಅಲ್ಲ, ದೇಶದ ಅನಿವಾರ್ಯತೆಯೂ ಆಗಿದೆ ಎಂದು ಬಿಜೆಪಿ ರಾಜ್ಯ ವಕ್ತಾರೆ ಶ್ರೀಮತಿ ಮಾಳವಿಕಾ ಅವಿನಾಶ್ ಹೇಳಿದ್ದಾರೆ.


ಸುಳ್ಯ ಮಂಡಲ ಬಿಜೆಪಿ ವತಿಯಿಂದ ಸುಳ್ಯದ ಯುವಜನ ಸಂಯುಕ್ತ ಮಂಡಳಿ ಸಭಾಭವನದಲ್ಲಿ ನಡೆದ ಪ್ರಬುದ್ಧರ ಸಭೆಯಲ್ಲಿ ಅವರು ಮಾತನಾಡಿದರು.


ಅಂದಿನ ಭಾರತ ಮತ್ತು ಇಂದಿನ ಭಾರತವನ್ನು ಸೂಕ್ಷ್ಮವಾಗಿ ಅರ್ಥೈಸಿಕೊಂಡರೆ ಸಾಕು, ನರೇಂದ್ರ ಮೋದಿ ಈ ದೇಶಕ್ಕೆ ಯಾಕೆ ಅನಿವಾರ್ಯರಾಗ್ತಾರೆ ಎಂದು ತಿಳಿಯುತ್ತದೆ. ೨೦೧೩ರ ವೇಳೆಗೆ ಭಾರತ ಕತ್ತಲಲ್ಲಿ ಮುಳುಗಿತ್ತು. ಲಕ್ಷ ಕೋಟಿಗಳ ಹಗರಣಗಳು ನಡೆದಿತ್ತು. ಭೂಮಿಯಿಂದ ಗಗನದವರೆಗೂ ಭ್ರಷ್ಠಾಚಾರ ತುಂಬಿ ತುಳುಕುತ್ತಿತ್ತು. ಭಾರತವೆಂದರೆ ಭ್ರಷ್ಠ ದೇಶವೇನೋ ಎಂಬಂತೆ ವಿಶ್ವ ನೋಡುತಿತ್ತು. ಈ ಸಂದರ್ಭದಲ್ಲಿ ಕತ್ತಲೆಯ ನಡುವೆ ಸಣ್ಣ ಬೆಳಕಾಗಿ ಬಂದ ನರೇಂದ್ರ ಮೋದಿಯವರು ಈ ೫ ವರ್ಷದಲ್ಲಿ ದೇಶವನ್ನು ಬೆಳಗಿಸಿದ್ದಾರೆ ಎಂದು ಹೇಳಿದರು.

ಸಮಾರಂಭದಲ್ಲಿ ಭಾಗವಹಿಸಿದ ಸೂರಜ್ ಜೈನ್ ಸಾಮಾಜಿಕ ಜಾಲತಾಣ ಬಳಕೆ ಕುರಿತು ಮಾಹಿತಿ ನೀಡಿದರು. ೨೦೧೪ರಲ್ಲಿ ನಡೆದ ಚುನಾವನೆಯಲ್ಲಿ ಸಾಮಾಜಿಕ ಜಾಲತಾಣಗಳು ಬಹಳ ಪರಿಣಾಮಕಾರಿ ಪಾತ್ರ ವಹಿಸಿತ್ತು. ಮನೆ ಮನೆ ಸಂಪರ್ಕ ಕಷ್ಟವಾಗುತ್ತಿರುವ ಇಂದಿನ ದಿನಗಳಲ್ಲಿ ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಅವರು ಹೇಳಿದರು.


ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಶ್ರೀಮತಿ ಪೂಜಾ ಪೈ, ಶಾಸಕ ಎಸ್.ಅಂಗಾರ ಮಾತನಾಡಿದರು. ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಸ್ವಾಗತಿಸಿ, ಪ್ರ.ಕಾರ್ಯದರ್ಶಿ ಸುಬೋಧ್ ಶೆಟ್ಟಿ ಮೇನಾಲ ವಂದಿಸಿದರು. ವಿನಯಕುಮಾರ್ ಕಂದಡ್ಕ ಕಾರ್ಯಕ್ರಮ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.