ಚುನಾವಣೆಗೆ ಅಕ್ರಮ ತಡೆಗೆ ಸಿ ವಿಜಿಲ್ ಆ್ಯಪ್

Advt_Headding_Middle
Advt_Headding_Middle


ಚುನಾವಣೆ ಅಕ್ರಮಗಳನ್ನು ತಡೆಗಟ್ಟಲೆಂದೇ ಸಿ ವಿಜಿಲ್ ಎಂಬ ಹೊಸ ನಮೂನೆಯ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದ್ದು, ಯಾರು ಬೇಕಾದರೂ ಅದನ್ನು ತಮ್ಮ ಮೊಬೈಲ್‌ಗಳಲ್ಲಿ ಡೌನ್‌ಲೋಡ್ ಮಾಡಿಕೊಂಡು ಬಳಸಬಹುದಾಗಿದೆ. ದೇಶದ ಯಾವ ಮೂಲೆಯಲ್ಲಾದರೂ ಚುನಾವಣೆ ನೀತಿ ಸಂಹಿತೆ ಪ್ರಕರಣ ನಡೆದರೂ ಸಾರ್ವಜನಿಕ ವಲಯದ ಯಾರೂ ಕೂಡಾ ಅದರ ಫೊಟೋ ಅಥವಾ ವೀಡಿಯೋ ತೆಗೆದು  ಆ್ಯಪ್ ಮೂಲಕ ಅಪ್‌ಲೋಡ್ ಮಾಡಿದರೆ ಸಾಕು, ತನಿಖೆಯೂ ಖಚಿತ, ತಪ್ಪಿತಸ್ಥರಿಗೆ ಶಿಕ್ಷೆಯೂ ಖಚಿತ.
ಚುನಾವಣೆ ವೇಳೆ ಅಕ್ರಮಗಳು ನಡೆದಗ ಸಾಮಾನ್ಯವಾಗಿ ಎದುರಾಳಿ ಪಕ್ಷದವರು ದೂರು ನೀಡುವುದು, ಅದರ ಆಧಾರದಲ್ಲಿ ಆಯಾ ಕ್ಷೇತ್ರ ವ್ಯಾಪ್ತಿಯ ಚುನಾವಣಾಧಿಕಾರಿ ಇಲ್ಲವೇ ಸಹಾಯ ಚುನಾವಣಾಧಿಕಾರಿ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದು ಇವೆಲ್ಲ ಈತನಕ ನಡೆದು ಬಂದ ವಿಧಾನ.
ಆದರೆ ಸಿ ವಿಜಿಲ್ ಆ್ಯಪ್ ಮೂಲಕ ಬಂದ ದೂರನ್ನು ಆಯಾ ಕ್ಷೇತ್ರ ವ್ಯಾಪ್ತಿಯ ಅಧಿಕಾರಿ ಮಾತ್ರ ಗಮನಿಸುವುದಲ್ಲ. ಭಾರತೀಯ ಚುನಾವಣೆ ಆಯೋಗದ ಉನ್ನತ ಅಧಿಕಾರಿಗಳವರೆಗೂ ನೋಡಬಹುದಾಗಿದೆ. ಅಧಿಕಾರಿಗಳು ಕೂಡಾ ಹೊಂದಾಣಿಕೆ ಮೂಲಕ ಪ್ರಕರಣ ಮುಚ್ಚಿ ಹಾಕಲು ಇದರಿಂದ ಸಾಧ್ಯವಾಗುವುದಿಲ್ಲ..
ಸುಲಭ ವಿಧಾನ:
ಆಂಡ್ರಾಯ್ಡ್ ಮೊಬೈಲ್‌ಗಳ ಪ್ಲೇಸ್ಟೋರ್‌ಗೆ ಹೋಗಿ ಸಿ ವಿಜಿಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬಹುದು. ಬಳಿಕ ಅದನ್ನು ಆಕ್ಟಿವೇಟ್ ಮಾಡಿಕೊಂಡರೆ ಒಟಿಪಿ ಬರುತ್ತದೆ. ಅದರಂತೆ ರಿಜಿಸ್ಟರ್ ಮಾಡಿಕೊಂಡರೆ ಆ್ಯಪ್ ಇನ್‌ಸ್ಟಾಲ್ ಆಗುತ್ತದೆ.
ಸಿ ವಿಜಿಲ್ ಎಂದರೆ ಸಿಟಿಜನ್ ವಿಜಿಲೆನ್ಸ್ ( ನಾಗರಿಕ ಬೇಹುಗಾರಿಕೆ) ಎಂಬರ್ಥದ ಹೆಸರು. ಚುನಾವಣ ಅಕ್ರಮಗಳ ವಿರುದ್ಧ ಸಾರ್ವಜನಿಕರೇ ಬೇಹುಗಾರಿಕೆ ನಡೆಸಲು ಅವಕಾಶ ನೀಡುವ ವ್ಯವಸ್ಥೆ.
ಹೇಗೆ ಕೆಲಸ ಮಾಡುತ್ತದೆ:
ಈ ಆ್ಯಪ್ ನಲ್ಲಿ ದಾಖಲಾದ ಫೊಟೋ, ವಿಡಿಯೋ ಮತ್ತು ಮಾಹಿತಿಯನ್ನು ಪರಿಶೀಲಿಸಲೆಂದೇ ಚುನಾವಣೆ ಆಯೋಗದಲ್ಲಿ ವ್ಯವಸ್ಥೆಯಿದೆ. ವಿಶೇಷವೆಂದರೆ ಯಾವುದೇ ಎಡಿಟೆಡ್ ಫೊಟೋ ಮತ್ತು ತಿರುಚಿದ ವೀಡೊಯೋಗಳನ್ನು ಇದರಲ್ಲಿ ಹಾಕುವಂತಿಲ್ಲ. ಅದಕ್ಕೂ ನಿರ್ಬಂಧ ಒಡ್ಡುವ ವ್ಯವಸ್ಥೆ ಇಲ್ಲಿದೆ. ಹೀಗಾಗಿ ದೂರು ನೀಡುವವರು ಕೂಡಾ ಎಚ್ಚರಿಕೆಯಿಂದ ಇರಬೇಕಾಗುತ್ತದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.