ದಾರುಲ್ ಹಿಕ್ ಮಾ ನೂತನ ಶಾಲಾ ಕಟ್ಟಡ ಉದ್ಘಾಟನೆ

Advt_Headding_Middle
Advt_Headding_Middle

ದಾರುಲ್ ಹಿಕ್ ಮಾ ಎಜುಕೇಶನ್ ಸೆಂಟರ್ ಬೆಳ್ಳಾರೆ ಇದರ ನೂತನ ಶಾಲಾ ಕಟ್ಟಡ ಉದ್ಘಾಟನೆ ಮಾ.11ನಡೆಯಿತು. ಬೆಳಂದೂರು ಈಡನ್ ಗ್ಲೋಬಲ್ ಸ್ಕೂಲ್‌ನ ಆಡಳಿತಾಧಿಕಾರಿ ಕೆ.ಎಂ ಸಿದ್ದೀಕ್ ಮೋಂಟುಗೋಳಿ ಉದ್ಘಾಟಿಸಿದರು. ದಾರುಲ್ ಹಿಕ್ ಮಾ ಅಧ್ಯಕ್ಷರಾದ ಹಾಜಿ ಹಸನ್ ಸಖಾಫಿ ಅಧ್ಯಕ್ಷತೆ ವಹಿಸಿದ್ದರು. ಹಾಫಿಳ್ ಅಬ್ದುಸಲಾಂ ನಿಝಾಮಿ ಚೆನ್ನಾರ್ ಪ್ರಸ್ತಾವಿಕ ಮಾತನಾಡಿ, ಸರ್ವರನ್ನು ಸ್ವಾಗತಿಸಿದರು.
ಜಾವಗಲ್ ಟ್ರಸ್ಟ್ ಅಧ್ಯಕ್ಷ ಹಾಜಿ ಇಸಾಕ್ ಸಾಹೇಬ್ ಪಾಜಪಳ್ಳ, ದಾರುಲ್ ಹಿಕ್‌ಮಾ ಸೌದಿ ಘಟಕದ ಶಾಲಿ ಬೆಳ್ಳಾರೆ, ಬೆಳ್ಳಾರೆ ಗ್ರಾ.ಪಂ. ಉಪಾಧ್ಯಕ್ಷ ಮುಸ್ತಫಾ, ಆರೀಪ್ ಇಂಜಿನಿಯಂರ್ ಬೆಳ್ಳಾರೆ, ಬೆಳ್ಳಾರೆ ಜುಮ್ಮಾ ಮಸೀದಿಯ ಅಧ್ಯಕ್ಷ ಮಹಮ್ಮದ್ ಕೆ.ಎಂ, ಪಿ.ಎಮ್.ಕೆ. ಕನ್‌ಸ್ಟ್ರಂಕ್ಷನ್ ಕುಂಬ್ರ ಇದರ ಆಶೀಕುದ್ದೀನ್ ಅಖ್ತರ್, ಎಸ್.ಡಿ.ಪಿ.ಐನ ಜಿಲ್ಲಾ ಕಾರ್ಯದರ್ಶಿ ಇಕ್ಭಾಲ್ ಬೆಳ್ಳಾರೆ, ತಾ.ಪಂ. ಮಾಜಿ ಸದಸ್ಯ ಅನಿಲ್ ರೈ ಚಾವಡಿಬಾಕಿಲು, ಎಸ್.ಎಮ್.ಎ. ಬೆಳ್ಳಾರೆ ಝೋನ್ ಅಧ್ಯಕ್ಷ ಇಸ್ಮಾಯಿಲ್ ಪಡ್ಪಿನಂಗಡಿ, ಬೆಳ್ಳಾರೆ ಎಸ್.ವೈ.ಎಸ್.ನ ಅಧ್ಯಕ್ಷ ಯೂಸುಪ್ ಮುಸ್ಲಿಯಾರ್, ಎಸ್.ವೈ.ಎಸ್. ಬೆಳ್ಳಾರೆ ಬ್ರಾಂಚ್ ಅಧ್ಯಕ್ಷ ಮಹ್‌ಮೂದ್ ಬೆಳ್ಳಾರೆ, ಎಸ್.ವೈ.ಎಸ್.ರಾಜ್ಯ ಸಮಿತಿ ಸದಸ್ಯ ಹಮೀದ್ ಬೀಜಕೊಚ್ಚಿ, ಎಸ್.ಎಸ್.ಎಫ್.ಬೆಳ್ಳಾರೆ ಸೆಕ್ಟರ್ ಅಧ್ಯಕ್ಷ ಖಲೀಲ್ ಝುಹ್ರಿ, ಜಮಾಲುದ್ಧೀನ್ ಮಾಸ್ತಿಕಟ್ಟೆ ಬೆಳ್ಳಾರೆ,ಎಸ್.ಜೆ.ಎಮ್. ಬೈತಡ್ಕ ರೇಂಜ್ ಅಧ್ಯಕ್ಷ ಅಬ್ದುಲ್ಲಾ ಅಹ್ಸನಿ ಚೆನ್ನಾವರ, ಹನೀಫ್ ಬೆಳ್ಳಾರೆ, ಮಹಮ್ಮದ್ ಹಾಜಿ ಬಿಸ್ಮಿಲ್ಲ, ದಾವೂದ್ ಹಾಜಿ, ಆನಂದ್ ಬೆಳ್ಳಾರೆ, ಸಿದ್ದೀಕ್, ಮುಸ್ತಪಾ ಬೆಳ್ಳಾರೆ, ಅಬ್ದುಲ್ಲಾ ಹಾಜಿ ಬಿಸ್ಮಿಲ್ಲಾ, ಹನೀಫ್ ಹಾಜಿ ಇಂದ್ರಾಜೆ, ಹಾಫಿಲ್ ಹಮೀದ್ ಮುಸ್ಲಿಯಾರ್, ಅಬ್ದುಲ್ ಅಜೀಝ್ ಚೆನ್ನಾರ್, ಹಮೀದ್ ಅಲ್ಪಾ, ಮುಸ್ತಫಾ ಮಾಸ್ತಿಕಟ್ಟೆ, ಮೊದಲಾದವರು ಭಾಗವಹಿಸಿದರು.
ವಿಶೇಷತೆಗಳು:
ಹಿಪ್‌ಲುಲ್ ಖುರಾನ್ ಕಾಲೇಜು: ಶಾಲೆ ಮತ್ತು ಮದರಸದಲ್ಲಿ ೫ನೇ ತರಗತಿ ಪಾಸಾದ ವಿದ್ಯಾರ್ಥಿಗಳಿಗೆ ಲೌಕಿಕ ಶಿಕ್ಷಣದೊಂದಿಗೆ ಹಿಪ್‌ಲುಲ್ ಖುರಾನ್ ಕಾಲೇಜಿನಲ್ಲಿ ಉಚಿತ ಊಟ, ವಸತಿಯೊಂದಿಗೆ ಪ್ರವೇಶಾತಿ ನೀಡಲಾಗುವುದು.
ಸ್ಕೂಲ್ ಆಫ್ ಖುರಾನ್ : ಸಮಾಜದ ಯುವಜನತೆ ಹಾಗೂ ವಯಸ್ಕರಿಗೆ ಖುರಾನ್ ಪಾರಾಯಣ ಮತ್ತು ನಿಯಮಗಳು ಹಾಗೂ ನಿತ್ಯ ಪಾರಾಯಣದ ಸೂರಃ ಮತ್ತು ಜಿಕ್ರ್ ದುವಾ ಕಲಿಕೆ ಮತ್ತು ಕಂಠಪಾಠಕ್ಕೆ ಅವಕಾಶ ಒದಗಿಸುವುದು.
ದಾರುಲ್ ಹಿಕ್ಮಾ ಸ್ಕೂಲ್ : ಕರ್ನಾಟಕ ಸರಕಾರದ ಮಾನ್ಯತೆ ಪಡೆದ ಆಂಗ್ಲಮಾಧ್ಯಮ ಶಿಕ್ಷಣ, ಉತ್ತಮ ನೈಸರ್ಗಿಕ ವಾತಾವರಣದಲ್ಲಿ ಎಲ್‌ಕೆಜಿಯಿಂದ ೫ನೇ ತರಗತಿವರೆಗೆ ವಿದ್ಯಾಭ್ಯಾಸ ನೀಡಲಾಗುವುದು.
ದಾರುಲ್ ಹಿಕ್‌ಮಾ ಮದರಸ : ಸುನ್ನೀ ವಿದ್ಯಾಭ್ಯಾಸ ಬೋರ್ಡ್ ಅಂಗೀಕೃತ ಧಾರ್ಮಿಕ ಶಿಕ್ಷಣ ೧ ರಿಂದ ೭ನೇ ತರಗತಿವರೆಗೆ ನೀಡಲಾಗುವುದು. ದಾರುಲ್ ಹಿಕ್‌ಮಾ ಮಹಿಳಾ ದರ್ಸ್ : ಧಾರ್ಮಿಕ ಶಿಕ್ಷಣವನ್ನು ಅರ್ಧದಲ್ಲಿ ಕೈಬಿಟ್ಟ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡುವುದಕ್ಕಾಗಿ ದರ್ಸ್ ಶಿಕ್ಷಣ ವ್ಯವಸ್ಥೆ ಕಲ್ಪಿಸಲಾಗಿದೆ.
ಫಿಖ್‌ಹ್, ಅಖೀದ್, ತಸವ್ವುಫ್, ಖುರ್‌ಆನ್ ಅರ್ಥಮತ್ತು ಪಾರಾಯಣ ಶಾಸ್ತ್ರ, ಮಾಲೆ, ಮೌಲಿದ್ ಇತ್ಯಾದಿ ಅಗತ್ಯ ವಿಷಯಗಳಲ್ಲಿ ಪ್ರಾಮಾಣತೆಯನ್ನು ಪಡೆಯಲು ಉತ್ತಮ ವ್ಯವಸ್ಥೆ ಕ್ಲಪಿಸಲಾಗಿದೆ. ಇದೀಗ ಮಹಿಳಾ ದರ್ಸ್‌ನಲ್ಲಿ ೨೫ ರಷ್ಟು ವಿದ್ಯಾರ್ಥಿನಿಯರು ಕಲಿಯುತ್ತಿದ್ದಾರೆ.
ಆಧ್ಯಾತ್ಮಿಕ ಮಜ್ಲಿಸ್ :
ಸಂಸ್ಥೆಯ ಅಧೀನದಲ್ಲಿ ಮೊಹಲ್ಲಾ ನಿವಾಸಿಗಳಿಗೆ, ಪರಿಸರದ ಮುಸ್ಲಿಂಗಳಿಗೆ ಧಾರ್ಮಿಕ, ಲೌಕಿಕ ಹಾಗೂ ಆಧ್ಯಾತ್ಮಿಕ ಪ್ರಜ್ಞೆ ಮೂಡಿಸಲು ಮಾಸಿಕ ತರಬೇತಿ ಶಿಬಿರಗಳು, ಸಾರ್ವಜನಿಕ ಉಪನ್ಯಾಸಗಳು ಹಾಗೂ ಆಧ್ಯಾತ್ಮಿಕ ಸಂಗಮಗಳನ್ನು ನಡೆಸಿ ಬರುತ್ತಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.