ಬರೆಮೇಲು ಕ್ಷೇತ್ರದಲ್ಲಿ ಎ.14,15ರಂದು ವರ್ಷೋತ್ಸವ

Advt_Headding_Middle

ಐವರ್ನಾಡಿನ ಬರೆಮೇಲು ಶ್ರೀ ಉದ್ಭವ ತ್ರಿಶಕ್ತಿ ಸ್ವರೂಪಿಣಿ ಮಹಾಕಾಳಿ ಮತ್ತು ಮೂಡು ಗಣಪ ಕ್ಷೇತ್ರ ದೇವರಕಾನ ಇಲ್ಲಿಯ ವರ್ಷೋತ್ಸವ
ಎ.೧೪ ಮತ್ತು ೧೫ ರಂದು ಧಾರ್ಮಿಕ, ಸಾಂಸ್ಕೃತಿಕ. ಸಭಾ ಕಾರ್ಯಕ್ರಮದೊಂದಿಗೆ ವೈಭವದಿಂದ ನಡೆಯಲಿದೆ.
ಇಂದು ಐವರ್ನಾಡು ದೇವರಕಾನದ ಶ್ರೀ ಉದ್ಭವ ತ್ರಿಶಕ್ತಿ ಕ್ಷೇತ್ರದಲ್ಲಿ ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ಪತ್ರಿಕಾಗೋಷ್ಠಿ ನಡೆಯಿತು, ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ನೆಕ್ಕರೆಕಜೆ ಶಿವಪ್ಪ ಗೌಡರು ಆಮಂತ್ರಣ ಪತ್ರವನ್ನು ಬಿಡುಗಡೆಗೊಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವರ್ಷೋತ್ಸವ ಸಮಿತಿಯ ಅಧ್ಯಕ್ಷ ಚಂದ್ರಾ ಕೋಲ್ಚಾರುರವರು “೨ ವರ್ಷ ಮೂರು ತಿಂಗಳ ಹಿಂದೆ ತ್ರಿಶಕ್ತಿ ಸ್ವರೂಪಿಣಿ ದೇವಿ ಬರೆಮೇಲಿನ ಈ ಮಣ್ಣಿನಲ್ಲಿ ಆವತರಿಸಿದ್ದಾಳೆ. ಆ ಪ್ರಯುಕ್ತ ಮೂರನೇ ವರ್ಷದ ವರ್ಷೋತ್ಸವ ಕಾರ್ಯಕ್ರಮವನ್ನು ಅತ್ಯಂತ ವೈಭವದಿಂದ ಎ.೧೪ ಮತ್ತು ೧೫ರಂದು ನಡೆಸಲು ನಿರ್ಧರಿಸಿದ್ದೇವೆ.
ಎ.೧೪ರಂದು ಸಂಜೆ ೪ ರಿಂದ ರಾತ್ರಿ ೯ ತನಕ ಹಾಗೂ ಎ.೧೫ರಂದು ಮುಂಜಾನೆ ೬ರಿಂದ ೭ರ ತನಕ ಸಾರ್ವಜನಿಕರಿಂದ ವಿಶುಕಣಿ ಅರ್ಪಣೆ, ಗಣಪತಿ ಹೋಮ ನಡೆಯುವುದು.
೧೫ರಂದು ಬೆಳಿಗ್ಗೆ ೭ ಗಂಟೆಗೆ ದ್ರವ್ಯ ಪ್ರಸಾದ ಮತ್ತು ವಿಶುಕಣಿ ಪ್ರಸಾದದ ವಿತರಣೆ ನಡೆಯುವುದು. ಬಳಿಕ ಶ್ರೀ ದುರ್ಗಾ ಪೂಜೆ ಏರ್ಪಡಿಸಲಾಗಿದೆ. ಸಂಜೆ ೭ಕ್ಕೆ ಧರ್ಮ ಸಭೆ ಮತ್ತು ಸನ್ಮಾನ ಕಾರ್ಯಕ್ರಮ ಆಯೋಜಿತವಾಗಿದೆ. ಅದಕ್ಕಿಂತ ಮೊದಲು ಐವರ್ನಾಡು ಗ್ರಾಮದ ಅಂಗನವಾಡಿ ಪುಟಾಣಿಗಳು ಮತ್ತು ಶಾಲಾ ವಿದ್ಯಾರ್ಥಿಗಳಿಂದ ನೃತ್ಯ, ರಾತ್ರಿ ೯ಗಂಟೆಯಿಂದ ತ್ರಿಶಕ್ತಿ ಸೇವಾ ಮಹಿಳಾ ವೇದಿಕೆಯಿಂದ ಕಲೋತ್ಸವ, ರಾತ್ರಿ ಗಂಟೆ ೧೧ ರಿಂದ ಪ್ರಮೋದ್ ಕುಮಾರ್ ರೈ ಬೆಳ್ಳಾರೆ ಇವರ ನೇತೃತ್ವದಲ್ಲಿ ರಾಜ್ಯ ಪ್ರಶಸ್ತಿ ಪಡೆದ ಕಲಾವಿದರ ತಂಡದಿಂದ ನೃತ್ಯೋತ್ಸವ ನಡೆಯುವುದು. ಸಭಾ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ೨೫ ಮಂದಿಯನ್ನು ಸನ್ಮಾನಿಸಲಾಗುವುದು ಎಂಬ ವಿವರ ನೀಡಿದರು.
ಕ್ಷೇತ್ರದ ಮೂಲ ಸ್ವರೂಪ ಉಳಿಸಿಕೊಂಡು ಪಕ್ಕದಲ್ಲಿ ದೇವಳ ನಿರ್ಮಾಣ
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಕ್ಷೇತ್ರದ ಧರ್ಮರಸು ಕರುಣಾಕರ ಗೌಡ ಬರೆಮೇಲುರವರು “ದೇವರು ಉದ್ಭವವಾದ ಈ ಮೂಲ ನೆಲೆಯ ಸ್ವರೂಪವನ್ನು ಹಾಗೆಯೇ ಉಳಿಸಿಕೊಂಡು ಪಕ್ಕದಲ್ಲಿರುವ ಜಾಗದಲ್ಲಿ ದೇವಾಲಯ ನಿರ್ಮಿಸುವ ಯೋಚನೆಯಿದೆ. ಮುಂದೆ ಭಕ್ತಾದಿಗಳು ಸಹಸ್ರಾರು ಸಂಖ್ಯೆಯಲ್ಲಿ ಬರ ತೊಡಗಿದ ಬಳಿಕ ದೇವರ ಅನುಗ್ರಹ ಮತ್ತು ಜನರ ಸಹಕಾರದೊಂದಿಗೆ ದೇವಸ್ಥಾನ ನಿರ್ಮಾಣದ ಚಿಂತನೆಯಿದೆ. ಆದರೆ ವನ ಪರಿಸರದಲ್ಲಿರುವ ಈ ಕ್ಷೇತ್ರದ ಸ್ವರೂಪವನ್ನು ಬದಲಾಯಿಸುವುದಿಲ್ಲ” ಎಂದು ಹೇಳಿದರು.
ಇಲ್ಲಿ ಆಧುನಿಕ ಡಂಬಾಚಾರಕ್ಕಿಂತ ಭಕ್ತಿ ಮಾರ್ಗಕ್ಕೆ ವಿಶೇಷ ಅದ್ಯತೆ ನೀಡಲು ನಿರ್ಧರಿಸಿದ್ದೇವೆ. ಭಕ್ತರ ಮತ್ತು ದೇವರ ಮಧ್ಯೆ ಮಧ್ಯವರ್ತಿಗಳಿಲ್ಲದೆ ಭಕ್ತರೇ ದೇವರನ್ನು ನೇರವಾಗಿ ಇಲ್ಲಿ ಆರ್ಚಿಸುವಂತಾಗಬೇಕೆಂಬುದು ನಮ್ಮ ಬಯಕೆ ಎಂದು ಧರ್ಮರಸು ಹೇಳಿದರು.
ವರ್ಷತ್ತೋತ್ಸವ ಸಮಿತಿಯ ಗೌರವಾಧ್ಯಕ್ಷ ದಿನೇಶ್ ಮಡ್ತಿಲ, ಕಾರ್ಯಾಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಉಪಾಧ್ಯಕ್ಷ ರಾಧಾಕೃಷ್ಣ ಎಮ್.ಎಚ್, ಖಜಾಂಜಿ ದೇವಿದಾಸ ಕತ್ಲಡ್ಕ, ಸಂಚಾಲಕ ಅವಿನ್ ಕುಮಾರ್ ಬೆಂಗಮಲೆ, ಪ್ರಧಾನ ಕಾರ್ಯದರ್ಶಿ ನವೀನ್ ಸಾರಕೆರೆ, ಆಡಳಿತ ಮಂಡಳಿ ಅಧ್ಯಕ್ಷ ಗೋಪಾಲಕೃಷ್ಣ ಪೈಲಾಜೆ, ಕಾರ್ಯದರ್ಶಿ ಎಸ್.ಎನ್.ಜಯರಾಮ್, ಸದಸ್ಯರುಗಳಾದ ಚಿದಂಬರ ಗೌಡ ಕೊಂಡೆಬಾಯಿ, ಸನತ್ ಬರೆಮೇಲು ಅಲ್ಲದೇ ಗಿರಿಧರ ಆರಿಕಲ್ಲು, ದೇವಿಪ್ರಸಾದ್ ಶುಂಠಿಯಡ್ಕ, ಮಂಜುನಾಥ ಮಡ್ತಿಲ, ಗಣೇಶ್ ಕುಳ್ಳಂಪ್ಪಾಡಿ, ಸಂಜೀವ ಶೆಟ್ಟಿ ಚೀಮುಳ್ಳು, ನವೀನ್ ಚಾತುಬಾಯಿ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.