ಎಲ್ಲರ ಮನೆಯೂ ಒಂದು ಗ್ರಂಥ ಭಂಡಾರವಾಗಲಿ : ಶಿಶಿಲ- ಪೆರುವಾಜೆ ಕಾಲೇಜಿನಲ್ಲಿ ಅರ್ಥಶಾಸ್ತ್ರ ಗ್ರಂಥಾಲಯ ಉದ್ಘಾಟನೆ

Advt_Headding_Middle
Advt_Headding_Middle

ಓದುವ ಮನಸ್ಥಿತಿ ಇರುವ ವ್ಯಕ್ತಿ ಅಜಾತ ಶತ್ರುವಾಗಿರುತ್ತಾನೆ.ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಸಂಪಾದನೆಯ ಒಂದು ಭಾಗವನ್ನು ಪುಸ್ತಕ ಖರೀದಿಗೆ ವಿನಿಯೋಗಿಸಿ ತನ್ನ ಮನೆಯನ್ನು ಗ್ರಂಥ ಭಂಡಾರವಾಗಿಸಬೇಕು ಎಂದು ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ, ಲೇಖಕ ಡಾ.ಬಿ ಪ್ರಭಾಕರ ಶಿಶಿಲ ಹೇಳಿದರು.
ಅವರು ಪೆರುವಾಜೆ ಡಾ.ಕೆ.ಶಿವರಾಮ ಕಾರಂತ ಸರಕಾರಿ ಪದವಿ ಕಾಲೇಜಿನ ಪ್ರೋ.ಅಮರ್ತ್ಯಸೇನ್ ಅರ್ಥಶಾಸ್ತ್ರ ವಿಭಾಗ ಮತ್ತು ಅರ್ಥಶಾಸ್ತ್ರ ಗ್ರಂಥಾಲಯನ್ನು ಉದ್ಘಾಟಿಸಿ ಮಾತನಾಡಿದರು.
ಓದು ಮತ್ತು ಬರವಣಿಗೆಗೆ ಬಡತನವನ್ನೂ ದೂರವಾಗಿಸುವ ಶಕ್ತಿಯಿದೆ. ದೇವಾಲಯ, ಮಸೀದಿ, ಚರ್ಚ್ ಕಟ್ಟುವಂತೆ ಪ್ರತೀ ಗ್ರಾಮದಲ್ಲೂ ಒಂದು ಸಾರ್ವಜನಿಕ ಗ್ರಂಥಾಲಯ ಕಟ್ಟಿ ಭಾಷಾ ಸಂಸ್ಕೃತಿ ಬೆಳೆಸುವ ಅಗತ್ಯವಿದೆ. ಅಪ್ರತಿಮ ಸಾಧಕರ ಸಂದೇಶಗಳು ಮತ್ತು ಬದುಕಿನ ನೈಜತೆ ಸಿಗುವುದೇ ಗ್ರಂಥಾಲಯಗಳಿಂದ ಎಂದು ಶಿಶಿಲ ಹೇಳಿದರು. ಕಾಲೇಜಿನ ಅರ್ಥಶಾಸ್ತ್ರ ಗ್ರಾಂಥಾಲಯಕ್ಕೆ ರೂಪಾಯಿ ೩೦೦೦ ಮೌಲ್ಯದ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ ಡಾ.ಪ್ರಭಾಕರ ಶಿಶಿಲರವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಪ್ರೋ.ಚಂದ್ರಶೇಖರ ಕಾಂತಮಂಗಲ ಅಧ್ಯಕ್ಷತೆ ವಹಿಸಿದ್ದರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಮಂಜುನಾಥ್ ಬಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿನಿ ಯಕ್ಷಿತಾ ಕುಮಾರಿ ಸ್ವಾಗತಿಸಿ, ವಿದ್ಯಾರ್ಥಿ ಹರ್ಷಿತ್‌ರಾಜ್ ವಂದಿಸಿದರು. ಮುಧುಶ್ರೀ ಸಿ ಕಾರ್ಯಕ್ರಮ ನಿರ್ವಹಿಸಿದರು. ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಕಲಾಚೆಲ್ವಿ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.