Breaking News

ಚುನಾವಣೆಗೆ ವಿವಿಧ ಸ್ತರದ ಅಧಿಕಾರಿಗಳ ನೇಮಕ

Advt_Headding_Middle
Advt_Headding_Middle

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ೮ ವಿಧಾನಸಭಾ ಕ್ಷೇತ್ರಗಳಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರವೂ ಒಂದು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚುನಾವಣಾಧಿಕಾರಿಯಾಗಿ ಇಲ್ಲಿ ಕಾರ್ಯನಿರ್ವಹಿಸಿದ್ದ ಡಾ| ಮಂಜುನಾಥ್‌ರವರು ಈ ಬಾರಿಯ ಲೋಕಸಭಾ ಚುನಾವಣೆಯ ಸಂದರ್ಭ ಸುಳ್ಯ ಕ್ಷೇತ್ರ ವ್ಯಾಪ್ತಿಯ ಸಹಾಯಕ ಚುನಾವಣಾಧಿಕಾರಿಯಾಗಿರುತ್ತಾರೆ. ಎಲಿಮಲೆ ಸರಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಚಂದ್ರಶೇಖರ ಪೇರಾಲು ಸಹಾಯಕ ಚುನಾವಣಾಧಿಕಾರಿ ಸಹಾಯಕರಾಗಿರುತ್ತಾರೆ.

ಅಕೌಂಟಿಂಗ್ ಟೀಮ್, ಮಾಸ್ಟರ್ ಟ್ರೈನರ‍್ಸ್ ಟೀಮ್, ಸ್ಟಾಟಿಕ್ ಸರ್ವೆ ಲೆನ್ಸ್ ಟೀಮ್, ವೀಡಿಯೊ ವ್ಯೂವಿಂಗ್ ಟೀಮ್, ವೀಡಿಯೊ ಸರ್ವೆ ಲೆನ್ಸ್ ಟೀಮ್, ಎಂ.ಸಿ.ಸಿ. ನೋಡೆಲ್ ಆಫೀಸರ್‌ಗಳು, ಫ್ಲೆಯಿಂಗ್ ಸ್ಕ್ವಾಡ್ ಹೀಗೆ ಹತ್ತಾರು ಬಗೆಯ ಅದಿಕಾರಿಗಳ ತಂಡ ಸಿದ್ಧಗೊಂಡಿದೆ.
ತರಬೇತಿ : ಮಾ.೩೦ರಂದು ಮತದಾನ ಕೇಂದ್ರದ ಅಧ್ಯಕ್ಷೀಯ ಅಧಿಕಾರಿಗಳು ಹಾಗೂ ಸಹಾಯಕ ಅಧ್ಯಕ್ಷೀಯ ಅಧಿಕಾರಿಗಳಿಗೆ, ಎ.೯ರಂದು ಪಿ.ಆರ್.ಒ., ಎ.ಪಿ.ಆರ್.ಒ., ಪಿ.ಒ.ಗಳಿಗೆ ತರಬೇತಿಯನ್ನು ಸುಳ್ಯ ಸರಕಾರಿ ಪ.ಪೂ. ಕಾಲೇಜಿನಲ್ಲಿ ಆಯೋಜಿಸಲಾಗಿದೆ.

ಕಂಟ್ರೋಲ್ ರೂಂ: ಸಾರ್ವಜನಿಕರು ಚುನಾವಣಾ ಸಂಬಂಧಿ ಯಾವುದೇ ಮಾಹಿತಿ ಮತ್ತು ದೂರುಗಳಿಗೆ ಸುಳ್ಯ ತಾಲೂಕು ಕಚೇರಿಯಲ್ಲಿರುವ ಕಂಟ್ರೋಲ್ ರೂಂ 08257&231231  ಸಂಪರ್ಕಿಸಬಹುದು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.