Breaking News

ಪೆರುವಾಜೆ : ಸಂಸದರ ಉಪಸ್ಥಿತಿಯಲ್ಲಿ ಬಿಜೆಪಿ ಪೇಜ್ ಪ್ರಮುಖರ ಸಭೆ

Advt_Headding_Middle
Advt_Headding_Middle


2019 ರ ಲೋಕಸಭಾ ಚುನಾವಣೆಯ ಪ್ರಯುಕ್ತ ಸುಳ್ಯ ವಿಧಾನ ಸಭಾ ಕ್ಷೇತ್ರದ ಪೆರುವಾಜೆಯಲ್ಲಿ ಬಿಜೆಪಿ ಪೇಜ್ ಪ್ರಮುಖರ ಹಾಗೂ -ಪಕ್ಷದ ಕಾರ್ಯಕರ್ತರ ಸಭೆಯು ಪೆರುವಾಜೆ ಜೆ. ಡಿ. ಅಡಿಟೋರಿಯಂನಲ್ಲಿ ಸಂಸದ ನಳಿನ್‌ಕುಮಾರ್ ಕಟೀಲ್ ಅವರ ಉಪಸ್ಥಿತಿಯಲ್ಲಿ ಮಾ. 18 ರಂದು ನಡೆಯಿತು.

ಸಭೆಯಲ್ಲಿ ಚುನಾವಣೆ ಪೂರ್ವ ತಯಾರಿ ಹಾಗೂ ಬಿಜೆಪಿ ಶಕ್ತಿ ಕೇಂದ್ರದ ಸಭೆ ನಡೆಸಲಾಯಿತು. ಸಭೆಯಲ್ಲಿ ಮುಂದಿನ ಲೋಕಸಭಾ ಚುನಾವಣೆ ಪೂರ್ವ ತಯಾರಿ ಬಗ್ಗೆ ಪೇಜ್ ಪ್ರಮುಖ್, ಕೀ ವೋಟರ್ಸ್, ಮತದಾರರ ಪಟ್ಟಿಯ ಸೇರ್ಪಡೆ ಬಗ್ಗೆ, ಕಾರ್ಯಕರ್ತರ ಜೊತೆ ಚರ್ಚಿಸಲಾಯಿತು.

ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಕುರಿತು ಮಾಹಿತಿಯನ್ನು ಸಂಸದ ನಳಿನ್ ಕುಮಾರ್ ಕಟೀಲ್ ನೀಡಿದರು.


ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಪುತ್ತೂರು ಕ್ಷೇತ್ರದ ಶಾಸಕ ಸಂಜೀವ ಮಠಂದೂರು, ಸುಳ್ಯ ಮಂಡಲ ಬಿಜೆಪಿ ಅಧ್ಯಕ್ಷ ವೆಂಕಟ್ ವಳಲಂಬೆ, ಜಿಲ್ಲಾ ಪಂಚಾಯತ್ ಸದಸ್ಯರಾದ ಎಸ್. ಎನ್. ಮನ್ಮಥ, ಹರೀಶ್ ಕಔಜಿಪಿಲಿ, ಬಿಜೆಪಿ ಮುಖಂಡ ವೆಂಕಟ್ ದಂಬೆಕೋಡಿ, ಶ್ರೀನಾಥ್ ಬಾಳಿಲ, ಮಾಜಿ ಜಿ.ಪಂ. ಸದಸ್ಯೆ ಭಾಗೀರಥಿ ಮುರುಳ್ಯ, ಚಂದ್ರಶೇಖರ ಪನ್ನೆ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.