ಅನುತ್ತೀರ್ಣ ವಿದ್ಯಾರ್ಥಿಗಳ ಭವಿಷ್ಯಕ್ಕೆ ಹೊಸ ಸ್ವರೂಪ ನೀಡುತ್ತಿರುವ ಜ್ಞಾನದೀಪ

Advt_Headding_Middle
Advt_Headding_Middle


ಅನುತ್ತೀರ್ಣ ಹಾಗೂ ಓದು ನಿಲ್ಲಿಸಿದ ವಿದ್ಯಾರ್ಥಿಗಳಲ್ಲಿ ಜ್ಞಾನದೀಪ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್(ರಿ)ನ ಆಡಳಿತದಲ್ಲಿ ಸುಳ್ಯ ಮತ್ತು ಬೆಳ್ಳಾರೆಯಲ್ಲಿ ನಡೆಸಲ್ಪಡುತ್ತಿರುವ ಜ್ಞಾನದೀಪ ಶಿಕ್ಷಣ ತರಬೇತಿ ಮತ್ತು ಅಭಿವೃದ್ಧಿ ಸಂಸ್ಥೆ ಭರವಸೆಯ ಬೆಳಕು ಮೂಡಿಸುತ್ತಿದೆ. ಹಿಂದಿನ ತರಗತಿಯಲ್ಲಿ ಅನುತ್ತೀರ್ಣಗೊಂಡ ಅಥವಾ ಓದು ನಿಲ್ಲಿಸಿ ಖಾಸಗಿಯಾಗಿ ಎಸ್.ಎಸ್.ಎಲ್.ಸಿ, ಪಿಯುಸಿ ಪರೀಕ್ಷೆ ಬರೆದು ಶಿಕ್ಷಣವನ್ನು ಮುಂದುವರಿಸುವ ಅವಕಾಶವನ್ನು ಶಿಕ್ಷಣ ಇಲಾಖೆ ನೀಡಿದೆ. ಇಂತಹ ಅವಕಾಶವನ್ನು ಉಪಯೋಗಿಸಿಕೊಂಡು ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಹೊಸ ದಾರಿಯನ್ನು ತೋರಿಸಿಕೊಡುವ ಜ್ಞಾನದೀಪ ಶಿಕ್ಷಣ ಸಂಸ್ಥೆಯಲ್ಲಿ ಪ್ರಥಮ ಪಿಯುಸಿಯಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳು ಅಥವಾ ೧೦ನೇ ತರಗತಿ ಪಾಸಾದವರು ದ್ವಿತೀಯ ಪಿಯುಸಿ ವಾಣಿಜ್ಯ ಅಥವಾ ಕಲಾ ವಿಭಾಗಕ್ಕೆ ಹಾಗೂ ೭,೮,೯ನೇ ತರಗತಿಯಲ್ಲಿ ಅನುತ್ತೀರ್ಣರಾದವರಿಗೆ ನೇರವಾಗಿ ಎಸ್.ಎಸ್.ಎಲ್.ಸಿ, ತರಗತಿಗಳನ್ನು ಸಂಸ್ಥೆ ನಡೆಸುತ್ತಿದೆ.

ಅನುತ್ತೀರ್ಣ ವಿದ್ಯಾರ್ಥಿಗಳ ಪಾಲಿಗೆ ಆಶಾದಾಯಕವಾಗಿರುವ ಜ್ಞಾನದೀಪ ಸಾಧನೆಯ ಬೆಳಕಿನಲ್ಲಿ ಶೋಭಿಸುತ್ತಿದೆ. ತನ್ನ ಹೊಸ ಯೋಚನೆ, ಹೊಸ ಯೊಜನೆ, ವಿಶಿಷ್ಟ ಕಾರ್ಯ ಚಟುವಟಿಕೆಗಳಿಂದ ಗ್ರಾಮೀಣ ಪ್ರದೇಶದಲ್ಲಿ ಬಲವಾದ ಹೆಜ್ಜೆ ಊರಿದ ಈ ಸಂಸ್ಥೆ ತನ್ನ ಪಥದಲ್ಲಿ ಅನೇಕ ಜೀವನಪರ ಮೈಲಿಗಲ್ಲುಗಳನ್ನು ನೆಟ್ಟಿದೆ. ಗ್ರಾಮೀಣರ. ಬಡವರ, ಪಾಲಿಗೆ ವರದಾನವಾಗಿರುವ ಈ ಸಂಸ್ಥೆ ಹಲವು ಕಾರಣಗಳಿಂದ ಪತ್ರಿಕೆಗಳ ಪುಟ ತುಂಬಿದೆ.


ಸಂಸ್ಥೆಯು ಪ್ರತಿ ವರ್ಷ ದೀಪಾವಳಿಯನ್ನು ಅತಿ ವಿಶಿಷ್ಟವಾಗಿ ಆಚರಿಸುತ್ತಿದೆ. ಹಲವರ ನಿತ್ಯ ನೋವಿಗೆ ಇವರ ಬೆಳಕಿನ ಹಬ್ಬದ ಮೂಲಕ ಸಾಂತ್ವಾನ ದೊರೆಯುತ್ತದೆ. ಯಾವುದಾದರೊಂದು ಹತಭಾಗ್ಯರ ಮನೆಯಲ್ಲೋ, ಪರಿಸರದಲ್ಲೋ ಈ ಸಂಸ್ಥೆಯವರು ಹೋಗಿ ದೀಪಾವಳಿ ಆಚರಿಸುತ್ತಾರೆ. ಕುಟುಂಬಗಳಿಗೆ ಅಕ್ಕಿ ಸೇರಿದಂತೆ ಅಗತ್ಯ ದಿನಸಿ ಸಾಮಾಗ್ರಿಗಳನ್ನು, ಧನ ಸಹಾಯವನ್ನು ನೀಡುತ್ತಾರೆ. ಕಳಂಜದ ವಿಕಲ ಚೇತನ ಕುಟುಂಬದ ಜತೆ, ಕೊಕ್ಕಡ ಎಂಡೋ ಪೀಡಿತರ ಜತೆ, ಮರ್ದಾಳ ಬೆಥನಿ ಜೀವನ ಜ್ಯೋತಿ ವಿಶೇಷ ಶಾಲೆ, ಕೊಕ್ಕಡದ ಎಂಡೋಪಾಲನಾ ಕೇಂದ್ರ, ಕನ್ನಯಾನದ ಅನಾಥಾಶ್ರಮ, ಸುಳ್ಯ ಸಾಂದೀಪ ವಿಶೇಷ ಶಾಲೆಯ ಮಕ್ಕಳ ಜತೆಗಿನ ಇವರ ದೀಪಾವಳಿ ಬಾಳಿಗೆ ಹೊಸ ಬೆಳಕು ಮೂಡಿಸಿದೆ. ಇದಲ್ಲದೆ ಜ್ಞಾನದೀಪ ಟ್ರಸ್ಟ್ ನಿಂದ ಪರಿಸರದ ಹಲವು ಶಾಲೆಗಳಿಗೆ ಉಚಿತ ಪುಸ್ತಕಗಳ ವಿತರಣೆ ಕೂಡಾ ನಡೆದಿದೆ. ಅಶಕ್ತರಿಗೆ ಆರ್ಥಿಕ ಸಹಾಯಧನ. ವಿಕಲ ಚೇತನರಿಗೆ ಸಹಾಯಧನ, ಅನಾರೋಗ್ಯ ಪೀಡಿತರಿಗೆ ನೆರವು ಕೂಡಾ ನೀಡಲಾಗುತ್ತಿದೆ.


ಕನ್ನಡ ರಾಜ್ಯೋತ್ಸವವನ್ನು , ಶಿಕ್ಷಕ ದಿನಾಚರಣೆಯನ್ನು, ರಾಷ್ಟ್ರೀಯ ಯುವ ದಿನಾಚರಣೆ, ಭಾವೈಕ್ಯತಾ ದಿನಾಚರಣೆಯನ್ನೂ ಜ್ಞಾನದೀಪ ಶಿಕ್ಷಣ ಸಂಸ್ಥೆ ವಿಶೇಷ ರೀತಿಯಲ್ಲಿ ಮಾಡುತ್ತದೆ. ವರ್ಷದುದ್ದಕ್ಕೂ ಸಂಸ್ಥೆಯು ತಜ್ಞ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿಕೊಂಡು ಅನೇಕ ಮೌಲಿಕ ತರಬೇತಿಗಳನ್ನು ನೀಡುತ್ತದೆ. ಸ್ವ ಉದ್ಯೋಗ ಮಾಹಿತಿ ಶಿಬಿರ, ಪರಿಕ್ಷಾ ಪೂರ್ವ ಸಿದ್ದತಾ ಶಿಬಿರ, ವ್ಯಕ್ತಿತ್ವ ವಿಕಸನ ತರಬೇತಿ, ಉದ್ಯೋಗ ಕೌಶಲ ಶಿಬಿರ, ನಯಕತ್ವ ತರಬೇತಿ, ಮಾನಸಿಕ ಸಂಘರ್ಷ ನಿವಾರಣಾ ತರಬೇತಿ, ಪರಿಣಾಮಕಾರಿ ಸಂವಹನ ತರಬೇತಿ ನಡೆಯುತ್ತದೆ.

ರೆಗ್ಯುಲರ್ ತರಗತಿಗಳಲ್ಲದೆ ಕಂಪ್ಯೂಟರ್ ತರಬೇತಿ, ನವೋದಯ ತರಬೇತಿ, ಎನ್.ಟಿ.ಟಿ.ಸಿ ತರಬೇತಿ ಮೊದಲಾದ ತರಬೇತಿಗಳನ್ನು ಸಂಸ್ಥೆ ಸಂಘಟಿಸುತ್ತಿದೆ. ಪ್ರತಿವರ್ಷವೂ ಜ್ಞಾನದಿಪದಲ್ಲಿ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ ನಡೆಯುತ್ತದೆ. ಹೆತ್ತವರ ಸಮಾಲೋಚನಾ ಸಭೆಗಳು ನಿರಂತರವಾಗಿ ನಡೆಯುತ್ತದೆ. ಜಗತ್ತಿಗೆ ಜ್ಞಾನದೀಪದ ಮಾಹಿತಿ ನೀಡಬಲ್ಲ ವೆಬ್‌ಸೈಟ್ ಹೊಂದಿರುವ ಜ್ಞನದೀಪ ಹೊರದೇಶದಲ್ಲಿ ಉದ್ಯೋಗ ಪಡೆದು ಬದುಕು ಕಟ್ಟಿಕೊಂಡ ತನ್ನ ಹಳೆ ವಿದ್ಯಾರ್ಥಿಗಳಿಗೆ ಸಂಸ್ಥೆಯ ಮಾಹಿತಿ ತಲುಪಿಸುವ ಕಾರ್‍ಯ ಮಾಡಿದೆ.


11 ವರ್ಷಗಳ ಶೈಕ್ಷಣಿಕ ಸೇವೆ :
ಅನುತ್ತೀರ್ಣ ಹಾಗೂ ಓದು ನಿಲ್ಲಿಸಿದ ವಿದ್ಯಾಥಿಗಳಿಗಾಗಿ ಶಾಲಾ ಕಾಲೇಜು ಮಾದರಿ ಶಿಕ್ಷಣ ಸಂಸ್ಥೆಯನ್ನು ೨೦೦೮ರಲ್ಲಿ ಆರಂಭಿಸಿದ ಜ್ಞಾನದೀಪ ಗುಣಮಟ್ಟದ ಫಲಿತಾಂಶ ಭರಿತ ಶಿಕ್ಷಣದೊಂದಿಗೆ ೧೧ ವರ್ಷಗಳನ್ನು ಪೂರೈಸಿದೆ. ಫಲಿತಾಂಶದಲ್ಲಿ ಪ್ರಾಮಾಣಿಕತೆಯನ್ನು ಕಾಯ್ದುಕೊಂಡು ಮುನ್ನಡೆಯುತ್ತಿರುವ ಸುಳ್ಯ ಮತ್ತು ಬೆಳ್ಳಾರೆಯ ಜ್ಞಾನದೀಪದಲ್ಲಿ ೧೨ನೇ ವರ್ಷಕ್ಕೆ ದಾಖಲಾತಿಗಳು ಆರಂಭಗೊಂಡಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.