ಹೈನುಗಾರಿಕೆಯಲ್ಲಿ ಆಧುನೀಕರಣ, ಕೃಷಿಯಲ್ಲಿ ಸರಳೀಕರಣ ಹಳ್ಳಿಿಯಿಂದ ದಿಲ್ಲಿವರೆಗೆ ಬೆಳೆದ ಮಿಲ್‌ಕ್‌ ಮಾಸ್ಟರ್

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಹಳ್ಳಿಿಯಲ್ಲಿದ್ದುಕೊಂಡೇ ತನ್ನ ಸಂಶೋಧನೆಯನ್ನು ಜಗದಗಲ ಹರಡಿದ, ಅದನ್ನು ಉದ್ಯಮವಾಗಿ ಬೆಳೆಸಿ ಹೈನುಗಾರಿಕೆಯಲ್ಲಿ ಆಧುನೀಕ ರಣಕ್ಕೂ, ಕೃಷಿಯಲ್ಲಿ ಸರಳೀಕರಣಕ್ಕೂ ಕಾರಣರಾದ ಸಾಧಕ ರೊಬ್ಬರು ನಮ್ಮ ತಾಲೂಕಿನವರೇ ಎನ್ನುವುದು ನಮ್ಮ ಹೆಮ್ಮೆೆ. ಅವರ ಸಂಶೋಧನೆಗಳು ರಾಷ್ಟ್ರಕ್ಕೆೆ ಹೆಮ್ಮೆೆ.
ಇವರು ರಾಘವ ಗೌಡ ಪಲ್ಲತ್ತಡ್ಕ. ಹಾಲು ಕರೆಯುವ ಯಂತ್ರವನ್ನು ಸಂಶೋಧಿಸಿ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿಿ ಯನ್ನು ಪಡೆದ ಇವರು ಇದರ ಜೊತೆಗೆ ಇನ್ನಿಿತರ ಹಲವು ಸಂಶೋಧನೆಗಳನ್ನು ನಡೆಸಿ ಮಾದರಿಯಾಗಿದ್ದಾಾರೆ.
ನಿವೃತ್ತ ಶಿಕ್ಷಕ ಪಲ್ಲತ್ತಡ್ಕ ದಿ. ಐತ್ತಪ್ಪ ಗೌಡ ದಿ. ಶಿವಮ್ಮ ದಂಪತಿಯ ಐವರು ಪುತ್ರರಲ್ಲೊೊಬ್ಬರಾದ ರಾಘವ ಗೌಡರು ಕೂಡಾ ಶಿಕ್ಷಕರು. 18 ವರ್ಷ ಶಿಕ್ಷಕ ವೃತ್ತಿಿ ನಡೆಸಿದ ಇವರು ಸ್ವಯಂ ನಿವೃತ್ತಿಿ ಪಡೆದರು. ಇವರ ಪತ್ನಿಿ ಶ್ರೀೆಮತಿ ಲೀಲಾವತಿಯವರು ಕೂಡಾ ಶಿಕ್ಷಕರಾಗಿದ್ದು, 3 ವರ್ಷದ ಹಿಂದಷ್ಟೇ ಸ್ವಯಂ ನಿವೃತ್ತಿಿ ಪಡೆದಿದ್ದಾಾರೆ. ಹಿರಿಯ ಪುತ್ರಿಿ ಶ್ರೀಮತಿ ಮೈನಾ, ಅಳಿಯ ಕುಸುಮಾಧರ ಕೇಪಳಕಜೆ. ಕಿರಿಯ ಪುತ್ರಿಿ ಶ್ರೀಮತಿ ಮಧು, ಅಳಿಯ ಯತೀಶ್ ಪಾಲೋಳಿ.
ಶಿಕ್ಷಕರಾಗಿರುವಾಗಲೇ ಸಂಶೋ ಧನಾ ಮನಸ್ಸಿಿನ ವ್ಯಕ್ತಿಿತ್ವ ಅವರದು. ಪತಿ ಮತ್ತು ಪತ್ನಿಿ ಇಬ್ಬರೂ ಶಿಕ್ಷಕರಾಗಿರುವು ದರಿಂದ ಸಮಯದ ಹೊಂದಾಣಿಕೆ ಕಷ್ಟಸಾಧ್ಯವಾಗುತ್ತಿಿತ್ತು. ಕೃಷಿಯೂ ಹೈನುಗಾರಿಕೆಯೂ ಜೊತೆಗಿತ್ತು. ವೃತ್ತಿಿ ಒತ್ತಡದ ಮಧ್ಯೆೆ ಕೃಷಿ ಬದುಕು ಸವಾಲಿನ ಸಂಗತಿಯಾಗಿತ್ತು. ಹಾಲು ಕರೆದು ಶಾಲೆಗೆ ಹೋಗುವ ಸವಾಲುಗಳಿತ್ತು. ಹಾಲು ಕರೆಯುವ ಯಂತ್ರ ಖರೀದಿಸೋಣ ವೆಂದರೆ ಆಗಳೇ ಇದು ಲಕ್ಷ ರೂ ಗಳ ಬಾಬತ್ತು. ಅವಶ್ಯಕತೆಯೇ ಅನ್ವೇಷಣೆಯ ತಾಯಿ ಎಂಬಂತೆ ಆಗ ಅವರಿಗೆ ಹೊಳೆದದ್ದು ಹಾಲು ಕರೆಯುವ ಯಂತ್ರ ಸಂಶೋಧನೆ. 2000ದಲ್ಲಿ ಆರಂಭಗೊಂಡ ಸಂಶೋ ಧನಾ ಕಾರ್ಯ ನಿರಂತರ 2 ವರ್ಷಗಳ ಕಾಲ ಮುಂದುವರಿಯಿತು. 2002ರ ಫೆ.2 ರಂದು ವೇಳೆಗೆ ಯಂತ್ರ ಮಾರುಕಟ್ಟೆೆಗೆ ಬಿಡುಗಡೆ ಗೊಂಡಿತು. 2000ನೇ ಇಸವಿ ಆಗಸ್‌ಟ್‌ 5ರಂದು ಗಡಾಣ ಸ್ಟ್ರೇಯರ್‌ಸ್‌ ಗಳ ಅಳವಡಿಕೆಯೊಂದಿಗೆ ಪ್ರಾಾರಂಭಿಸಿದ ಸಂಶೋಧನೆ 15 ಹಂತಗಳಲ್ಲಿ ಅಭಿ ವೃದ್ಧಿಿಗೊಂಡು ಮಿಲ್‌ಕ್‌ ಮಾಸ್ಟರ್ ಯಂತ್ರವೆಂದೇ ಪ್ರಸಿದ್ಧವಾಯಿತು. ಪೇಟೆಂಟ್‌ನ್ನೂ ಪಡೆಯಿತು.
ರಾಘವ ಗೌಡರು ಈ ಸಂಶೋಧನೆ ಯನ್ನು ಆರಂಭಿಸುವ ವೇಳೆ ಇಡೀ ಜಗತ್ತಿಿನಲ್ಲಿ ಬೆರಳೆಣಿಕೆಯ ಇಂತಹ ಯಂತ್ರಗಳು ಸಂಶೋಧಿಸಲ್ಪಟ್ಟಿಿತ್ತು. ಆದರೆ ಈ ಭಾಗದಲ್ಲಿ ಇಂತಹ ಯಾವುದೇ ಯಂತ್ರಗಳಿರಲಿಲ್ಲ. ಹೀಗಾ ಗಿ ಈ ಸಂಗತಿ ನಾಗರಿಕ ಜಗತ್ತಿಿಗೆ ಬಹಿರಂಗವಾಗುತ್ತಿಿದ್ದಂತೆ, ಆಸಕ್ತ ಕೃಷಿಕ ರು ಮನೆಗೆ ಬಂದು ಸಾಲುಗಟ್ಟಿಿ ನಿಲ್ಲ ತೊಡಗಿದರು.
ಹಾಗೆ ಸಂಶೋಧಿಸಲ್ಪಟ್ಟ ಯಂತ್ರ ಹೈನುಗಾರರ ಬೇಡಿಕೆಗಳಿಗೆ ಅನುಗುಣ ವಾಗಿ ಮತ್ತೂ ಪರಿಷ್ಕರಣೆಗೊಂಡಿತು. ಈಗಲೂ ಇದಕ್ಕೆೆ ಮಾರುಕಟ್ಟೆೆಯಲ್ಲಿ ಸಾಕಷ್ಟು ಬೇಡಿಕೆ ಇದೆ. ಟ್ರಾಾಲಿ ಸಿಸ್ಟಂ, ಆಧುನಿಕ ಕೊಟ್ಟಿಿಗೆಗೆ ಬೇಕಾದ ಹಾಗೆ ಕೊಂಡೊಯ್ಯುವ ಯಂತ್ರ, ನೇತಾ ಡಿಸುವ ಯಂತ್ರ, ಏಕಕಾಲದಲ್ಲಿ ಎರಡು ಕಡೆ ಇಡುವ ಯಂತ್ರ, ಚಾನೆಲ್‌ಗಳಲ್ಲಿ ದೂಡಿ ಕೊಂಡೊಯ್ಯುವ ಯಂತ್ರವನ್ನೂ ಆವಿಷ್ಕರಿಸಲಾಗಿದೆ.
ಬೇಡಿಕೆ ಬರುತ್ತಿಿದ್ದಂತೆ ಇದನ್ನು ಉದ್ಯಮವಾಗಿ ಬೆಳೆಸುವ ಹಂಬಲ ದಿಂದ ಮನೆ ಪಕ್ಕದಲ್ಲಿಯೇ ಈ ಯಂತ್ರ ಗಳನ್ನು ತಯಾರಿಸುವ ಇಂಡಸ್ಟ್ರಿಿ ಯನ್ನು ಸ್ಥಾಾಪಿಸಿದರು. ಅದಿಂದು ಬೃಹ ದಾಕಾರವಾಗಿ ಬೆಳೆದಿದೆ. ಮುಂಬೈ, ದೆಹಲಿ, ತಮಿಳು ನಾಡು, ಗುಜರಾತ್ ಮೊದಲಾದ ಕಡೆಗಳಿಂದ ಕಚ್ಚಾಾವಸ್ತುಗಳನ್ನು ತರಿಸಿ ಯಂತ್ರಗಳ ತಯಾರಿಕೆ, ಫ್ಯಾಾಬ್ರಿಿಕೇಷನ್ ಕೆಲಸ ಗಳು ಇಲ್ಲಿಯೇ ನಡೆಯುತ್ತದೆ. ಇದಕ್ಕೆೆ ಬೇಕಾದ ಎಲ್ಲಾಾ ವ್ಯವಸ್ಥೆೆಗಳು ಇಲ್ಲಿವೆ. ಆಧುನಿಕವಾದ ಯಂತ್ರಗಳಿವೆ. ವೆಲ್ಡಿಿಂಗ್ , ಬೆಂಡಿಂಗ್, ಗ್ರೈಂಡಿಂಗ್ ವಾಷಿಂಗ್ , ಸ್ಟೋೋರಿಂಗ್ ವಿಭಾಗ ಗಳಿವೆ. 33 ಸಿಬ್ಬಂದಿಗಳಿದ್ದಾಾರೆ. ಇವರೆಲ್ಲಾಾ ಸ್ಥಳೀಯರು.
ಇವರು ತಯಾರಿಸಿದ ಯಂತ್ರಗಳು ಇದುವರೆಗೆ ಸರಿ ಸುಮಾರು 12,000ದಷ್ಟು ಮಾರಾಟ ವಾಗಿದೆ. ದೇಶದೆಲ್ಲೆೆಡೆ ಇದಕ್ಕೆೆ ಬೇಡಿಕೆ ಇದೆ. ಡೀಲರ್‌ಷಿಪ್ ಮೂಲಕ, ನೇರ ರೈತರ ಖರೀದಿ ಮೂಲಕ ಮಾರಾಟವಾಗುತ್ತಿಿದೆ. ಸೆಲ್ಕೋೋ ಸಂಸ್ಥೆೆಯೊಂದಿಗೆ ಒಪ್ಪಂದ ವೂ ನಡೆದಿದೆ. ಮೊದಲು ಶ್ರೀಲಂಕಾ, ನೇಪಾಳ, ಕೀನ್ಯಾಾ, ಭೂತಾನ್ ಮೊದಲಾದ ರಾಷ್ಟ್ರಗಳಿಗೂ, ರಫ್ತಾಾಗುತ್ತಿಿತ್ತು. ಆದರೆ ಸರ್ವಿಸ್ ಕಾರಣದಿಂದ ಈಗ ಇದು ನಡೆಯುತ್ತಿಿಲ್ಲ. ಇವರು ಯಂತ್ರದ ಮಾರಾಟದ ಗುರಿಯ ನ್ನಷ್ಟೇ ಇಟ್ಟುಕೊಳ್ಳದೆ ಪೂರ್ಣ ಜವಾಬ್ದಾಾರಿಯನ್ನೂ ಹೊತ್ತಿಿದ್ದಾಾರೆ. ದೂರವಾಣಿ ಮುಖಾಂತರ ಮಾತನಾಡಿ ಡಿ.ಡಿ. ಅಥವಾ ಆನ್‌ಲೈನ್ ಪೇಮೆಂಟ್ ಮಾಡಿದರೂ ಸಾಕು, ಯಂತ್ರಗಳ ರವಾನೆ ಸಾಧ್ಯ ಜೊತೆಗೆ ನಿರ್ವಹಣಾ ಕ್ರಮದ ಸಿ.ಡಿ. , ಅವಶ್ಯಕ ಸ್ಪೇರ್‌ಸ್‌ ಗಳನ್ನು ಕಳುಹಿಸಿಕೊಡಲಾಗುವುದು.ಸರ್ವಿಸಿಂಗ್ ತಂತ್ರಜ್ಞರನ್ನು ಕಳುಹಿಸಿ ಡೆಮೋ ನೀಡುವ ವ್ಯವಸ್ಥೆೆಯೂ ಇದೆ. ಇವರ ಆಸಕ್ತಿಿ ಹಾಲು ಕರೆಯುವ ಯಂತ್ರಗಳಿಗಷ್ಟೇ ಸೀಮಿತವಾಗಿರದೆ ಇತರ ಅನೇಕ ಸಂಶೋಧನೆಗಳನ್ನು ನಡೆಸಿದ್ದರಲ್ಲದೆ ಇತರರು ತಯಾರಿಸಿದ ಯಂತ್ರಗಳನ್ನು ಡೀಲರ್‌ಷಿಪ್ ಆಧಾರದಲ್ಲಿ ಇಲ್ಲಿ ಮಾರಾಟವನ್ನು ಮಾಡುತ್ತಿಿದ್ದಾಾರೆ. ಹಟ್ಟಿಿಗೆ ಬೇಕಾದ ಮ್ಯಾಾಟ್, ಮೇವು ಕತ್ತರಿಸುವ ಯಂತ್ರ, ಅಡಿಕೆ ಬೇರ್ಪಡಿಸುವ ಸಾಧನ, ಹಟ್ಟಿಿ ತೊಳೆಯುವ ಯಂತ್ರ ಸಂಶೋಧಿಸಿ ದ್ದಾಾರೆ. ಸ್ಟೀಲ್ ಫ್ಯಾಾಬ್ರಿಿಕೇಶನ್ , ಕೈಗಾಡಿಗಳು , ಸ್ಟೀಲ್ ರೀಲಿಂಗ್‌ಸ್‌ , ಕಿಟಕಿಬಾಗಿಲುಗಳು, ಗೇಟ್‌ಗಳು, ವಾಹನಗಳಿಗೆ ಸ್ಟೀಲ್ ಫ್ಯಾಾಬ್ರಿಿಕೇಶನ್ ಹಸುಗಳಿಗೆ ರಬ್ಬರ್ ನೆಲಹಾಸು ಇತ್ಯಾಾದಿಗಳ ಉತ್ಪಾಾದನೆ ಹಾಗೂ ಮಾರಾಟ ನಡೆಯುತ್ತಿಿದೆ.
ರಾಘವ ಗೌಡರು ಉತ್ತಮ ಕೃಷಿಕರು ಕೂಡಾ. ಅಡಿಕೆ ತೋಟ, ತೆಂಗಿನ ತೋಟ ಅಲ್ಲದೆ ಹೈನುಗಾರಿ ಯನ್ನು ಕೂಡಾ ನಡೆಸುತ್ತಿಿದ್ದಾಾರೆ. ಇವ ರ ಆಧುನಿಕ ಹಟ್ಟಿಿಯಲ್ಲಿ ಹತ್ತಾಾರು ದನಗಳಿವೆ. ಎರೆಗೊಬ್ಬರ, ಅಜೋಲಾ ಬಳಸುತ್ತಾಾರೆ. ಇವರ ಯಶಸ್ಸಿಿನ ಹಿಂದೆ ಇವರ ಕುಟುಂಬದ ಪಾತ್ರ ಹಿರಿದು. ಪತ್ನಿಿ ಮಕ್ಕಳು, ಅಳಿಯಂದಿರೆಲ್ಲಾಾ ಪೂರ್ಣ ಈ ಉದ್ಯಮದಲ್ಲಿ ತೊಡಗಿಸಿಕೊಳ್ಳುತ್ತಿಿರುವ ಕಾರಣ ದೊಡ್ಡ ಪ್ರಮಾಣದ ಯಶಸ್ಸು ಲಭಿಸಿದೆ.
ಪ್ರಸ್ತುತ ಅವರ ಉದ್ಯಮಕ್ಕಾಾಗಿ 2 ಸಂಸ್ಥೆೆಗಳಿವೆ. ಕ್ಷೀರಾ ಎಂಟರ್‌ಪ್ರೈಸಸ್ ಮೂಲಕ ಹಾಲು ಕರೆ ಯುವ ಯಂತ್ರಗಳನ್ನು ಮಾರಾಟ ಮಾಡಲಾಗುತ್ತದೆ. ಕ್ಷೀರಾ ಇಂಜಿನಿ ಯರ್‌ಸ್‌ ಸಂಸ್ಥೆೆಯ ಮೂಲಕ ಇನ್ನಿಿತರ ಯಂತ್ರಗಳನ್ನು ಮಾರಾ ಟ ಮಾಡಲಾಗುತ್ತದೆ. ಸಂಸ್ಥೆೆಗೆ ಬೆಂಗಳೂರಿನ ಅತ್ತಿಿಬೆಲೆ, ಮೈಸೂರಿನ ವಿಜಯನಗರ, ಹಾಸನದ ಜಯನಗರಗಳಲ್ಲಿ ಶಾಖೆಗಳಿವೆ.
ಹಲವು ಪ್ರಶಸ್ತಿಿಗಳ ಗೌರವ: ರಾಘವ ಗೌಡರ ಸಂಶೋಧನಾ ಸಾಧನೆಗಾಗಿ 2 ರಾಷ್ಟ್ರ ಪ್ರಶಸ್ತಿಿ ಸೇರಿದಂತೆ ಅನೇಕ ಪ್ರಶಸ್ತಿಿಗಳನ್ನು ಪಡೆದಿದ್ದಾಾರೆ. 2005ರಲ್ಲಿ ಅಬ್ದುಲ್ ಕಲಾಂರವರಿಂದ ರಾಷ್ಟ್ರಪ್ರಶಸ್ತಿಿ ಪಡೆದಿದ್ದಾಾರೆ. 2011ರಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಂದ ಪ್ರಶಸ್ತಿಿ ಸ್ವೀಕರಿಸಿದ್ದಾಾರೆ. ಜಿಲ್ಲಾಾಮಟ್ಟದಲ್ಲೂ ಹಲವು ಪ್ರಶಸ್ತಿಿ ಪುರಸ್ಕಾಾರಗಲೂ ಸಂದಿವೆ. ಆಧುನಿಕ ಕಾಲದಲ್ಲಿ ಕೃಷಿ ಬದುಕು ಕೂಡಾ ಆಧುನಿಕರಣಗೊಳ್ಳುತ್ತಿಿದೆ. ಇದರ ಯಶಸ್ವಿಿ ಅನುಷ್ಠಾಾನಕ್ಕೆೆ ಸಂಶೋ ಧನಾ ಸಾಧ್ಯತೆಗಳು ಹೆಚ್ಚಬೇಕು. ಇದನ್ನು ಮಾಡ ಬೇಕಿದ್ದರೆ ಕ್ರಿಿಯಾಶಕ್ತಿಿ ಮತ್ತು ದೂರದೃಷ್ಟಿಿ ಬೇಕು. ಅವೆರಡೂ ರಾಘವ ಗೌಡರಿಗೆ ಸಿದ್ದಿಸಿದೆ. ಹಾಗಾಗಿಯೇ ಅವರ ಸಿದ್ಧಿಿ, ಪ್ರಸಿದ್ಧಿಿ ದೊಡ್ಡದು.
ಯಂತ್ರದ ಅಳವಡಿಕೆ ಹೀಗೆ….
ಆರಂಭದಲ್ಲಿ ಹಾಲಿನ ಸರ್ಕ್ಯೂಟನ್ನು ತಣ್ಣೀರಿನಿಂದ ತೊಳೆಯಬೇಕು. ಹಸುವಿನ ಕೆಚ್ಚಲನ್ನು ತಣ್ಣೀರಿನಿಂದ ತೊಳೆದು, ಹತ್ತಿಿಬಟ್ಟೆೆಯಿಂದ ಒರೆಸಬೇಕು. ಕ್ಯಾಾನಿನ ಮುಚ್ಚಳಕ್ಕೆೆ ಜೋಡಿಸಿರುವ ಪ್ರೋೋಟ್‌ವಾಲ್ ತೆರೆದಿರುವಂತೆ ನೋಡಿಕೊಳ್ಳಬೇಕು. ಬಾಲ್ ವಾಲ್ವನ್ನು ಬಂದ್ ಮಾಡಿ ಯಂತ್ರ ಚಲಾಯಿಸಿ 250ರಿಂದ 300 ಗುರುತಿನವರೆಗೆ ನಿರ್ವಾತ ಮಾಡಬೇಕು. 4 ನಿಪ್ಪಲ್‌ಗಳನ್ನು ಕೆಚ್ಚಲಿಗೆ ಅಳವಡಿಸಿ ಬಾಲ್‌ವಾಲ್‌ವ್‌‌ನ್ನು ತೆರೆದಾಗ ನಿಪ್ಪಲ್‌ಗಳು ಕೆಚ್ಚಲನ್ನು ಹಿಡಿದುಕೊಳ್ಳುತ್ತದೆ. ಯಂತ್ರ ಚಾಲನೆಯಿಂದ ಆಲ್ಟರ್‌ನೇಟ್ ಪಲ್ಸಿಿಂಗ್‌ನಿಂದ ಪೈಪ್ ಮೂಲಕ ಹಾಲು ಕ್ಯಾಾನ್‌ನಲ್ಲಿ ಸಂಗ್ರಹವಾಗುತ್ತದೆ. ಹಾಲಿನ ಪೈಪ್‌ನಲ್ಲಿ ಕ್ಯಾಾನಿಗೆ ಹಾಲು ಬರುವುದು ನಿಂತಾಗ ಬಾಲ್‌ವಾಲ್‌ವ್‌‌ನ್ನು ಬಂದ್ ಮಾಡಿ ಒಂದು ಮೊಲೆ ತೊಟ್ಟನ್ನು ಕೈ ಬೆರಳಿನಿಂದ ಸ್ವಲ್ಪ ಒತ್ತಿಿ ಬಿಟ್ಟಾಾಗ ನಿಪ್ಪಲ್‌ನಲ್ಲಿ ಗಾಳಿ ಸೇರಿ, ನಿಪ್ಪಲ್ ಕೆಚ್ಚಲಿನಿಂದ ಜಾರುತ್ತದೆ. ಆಗ ಶುದ್ಧ ಹಾಲು ಕ್ಯಾಾನ್‌ನಲ್ಲಿ ಸಂಗ್ರಹವಾಗಿರುವುದು. ಕ್ಯಾಾನ್‌ನಿಂದ ಹಾಲನ್ನು ತೆಗೆದು ನಿಪ್ಪಲ್‌ಗಳ ತುದಿಯನ್ನು 2ರಿಂದ 3 ಲೀಟರ್ ಕುದಿಯುವ ನೀರಿನಲ್ಲಿಟ್ಟು ನಿರ್ವಾತ ಮಾಡುವ ಮೂಲಕ ಹಾಲಿನ ಸರ್ಕ್ಯೂಟ್‌ನ್ನು ತೊಳೆಯಬೇಕು. ಕ್ಯಾಾನ್ ಮತ್ತು ಕ್ಲಸ್ಟರ್ ವಾಶರನ್ನು ತೊಳೆದು ನೀರಲ್ಲಿಡಬೇಕು. ಹಾಲು ಅಥವಾ ನೀರು ನಿರ್ವಾತ ಸರ್ಕ್ಯೂಟ್‌ಗೆ ಹೋಗದಂತೆ ಮುಂಜಾಗ್ರತೆ ವಹಿಸಬೇಕು. ಫಿಲ್ಟರಿನಲ್ಲಿ ಸಂಗ್ರಹವಾದ ನೀರನ್ನು ದಿನಕ್ಕೆೆ ಒಂದು ಬಾರಿ ಹೊರಹಾಕಬೇಕು. ಯಾವುದೇ ಸಂದರ್ಭದಲ್ಲಿ ಯಂತ್ರವನ್ನು ಬಿಸಿಲಿನಲ್ಲಿ ಇಡಬಾರದು 2 ತಿಂಗಳುಗಳಿಗೆ ಒಂದು ಸಲ ವ್ಯಾಾಕ್ಯೂಮ್ ಪಂಪ್‌ನ ವಾಶರ್‌ಗಳಿಗೆ ಸಿಲಿಕಾನ್ ಗ್ರೀೀಸ್ ಹಚ್ಚಬೇಕು.
ಕಡಿಮೆ ದರದ ಯಂತ್ರಗಳು
ಬೇರೆ ಯಂತ್ರಗಳಿಗೆ ಹೋಲಿಸಿದರೆ ಇಲ್ಲಿ ಮಾರಾಟವಾಗುವ ಯಂತ್ರಗಳು ಕಡಿಮೆ ದರದವು. ಕರಚಾಲಿತ ಹಾಲು ಕರೆಯುವ ಯಂತ್ರ, ವಿದ್ಯುತ್‌ಚಾಲಿತ ಹಾಲು ಕರೆಯುವ ಯಂತ್ರ, ವಿದ್ಯುತ್‌ಚಾಲಿತ ಡಬ್ಬಲ್ ಕ್ಲಸ್ಟರ್ ಯಂತ್ರ, ಸಿಂಗಲ್ ಕ್ಲಸ್ಟರ್ ಡಿಸಿ ಮೋಟಾರ್ ಬ್ಯಾಾಟರಿ ಚಾಲಿತ ಯಂತ್ರ ಹೀಗೇ 4 ರೀತಿಯ ಯಂತ್ರಗಳು ಇಲ್ಲಿ ತಯಾರಾಗಿ ಮಾರಾಟವಾಗುತ್ತದೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.